Murder: ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ಕೆಳಗೆ ಬಿತ್ತು ಹೆಣ!; ಸಿನಿಮೀಯವಾಗಿ ಬಯಲಾಯ್ತು ಬೆಂಗಳೂರು ಯುವತಿಯ ಕೊಲೆ ರಹಸ್ಯ

Shocking News: ಬೈಕ್ ವೇಗವಾಗಿ ಬಂದು ಸ್ಪೀಡ್ ಬ್ರೇಕರ್​ಗೆ ಡಿಕ್ಕಿ ಹೊಡೆದಿದ್ದರಿಂದ ಆ ಬೈಕ್​ನಲ್ಲಿ ಯುವತಿಯ ಶವ ಇರುವುದು ಬೆಳಕಿಗೆ ಬಂದಿದೆ. ಹೀಗೆ ತಾವೇ ಮಾಡಿದ ಪ್ಲಾನ್​ನಲ್ಲಿ ತಾವೇ ಸಿಕ್ಕಿಹಾಕಿಕೊಂಡ ಅಪರಾಧಿಗಳು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.

Murder: ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ಕೆಳಗೆ ಬಿತ್ತು ಹೆಣ!; ಸಿನಿಮೀಯವಾಗಿ ಬಯಲಾಯ್ತು ಬೆಂಗಳೂರು ಯುವತಿಯ ಕೊಲೆ ರಹಸ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 11, 2022 | 5:38 PM

ಬೆಂಗಳೂರು: ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಪೊಲೀಸರ ಕೈಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯುವತಿಯನ್ನು ಕೊಂದು, ಆಕೆಯ ಶವವನ್ನು (Dead Body) ಯಾರಿಗೂ ಗೊತ್ತಾಗದಂತೆ ದೂರ ಬಿಸಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದ ದಂಪತಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಬೆಂಗಳೂರಿನಿಂದ (Bengaluru Crime) 60 ಕಿಮೀ ದೂರದ ಚನ್ನಪಟ್ಟಣದಲ್ಲಿ 21 ವರ್ಷದ ಯುವತಿಯ ಶವವನ್ನು ವಿಲೇವಾರಿ ಮಾಡುವ ದಂಪತಿಗಳ ಯೋಜನೆ ವಿಫಲವಾಗಿದ್ದು, ಆಕೆಯ ಶವದೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅವರಿಬ್ಬರು ಜಿಲ್ಲಾಧಿಕಾರಿಗಳ ಎದುರೇ ಅಪಘಾತಕ್ಕೀಡಾಗಿದ್ದಾರೆ. ಬೈಕ್ ವೇಗವಾಗಿ ಬಂದು ಸ್ಪೀಡ್ ಬ್ರೇಕರ್​ಗೆ ಡಿಕ್ಕಿ ಹೊಡೆದಿದ್ದರಿಂದ ಆ ಬೈಕ್​ನಲ್ಲಿ ಯುವತಿಯ ಶವ ಇರುವುದು ಬೆಳಕಿಗೆ ಬಂದಿದೆ. ಹೀಗೆ ತಾವೇ ಮಾಡಿದ ಪ್ಲಾನ್​ನಲ್ಲಿ ತಾವೇ ಸಿಕ್ಕಿಹಾಕಿಕೊಂಡ ಅಪರಾಧಿಗಳು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಬೆಂಗಳೂರಿನ ಆರ್ ಆರ್ ನಗರದ ನಿವಾಸಿಯಾದ 21 ವರ್ಷದ ಸೌಮ್ಯಾ ತಮ್ಮ ನೆರೆಹೊರೆಯ ದಂಪತಿಗಳಾದ ರಘು (30) ಮತ್ತು ದುರ್ಗಾ (28) ಅವರಿಂದ ಸಾಲ ಪಡೆದಿದ್ದರು. ಆ ಹಣಕ್ಕಾಗಿ ಜಗಳವಾಡಿದ ನಂತರ ರಘು ಮತ್ತು ದುರ್ಗಾ ಸೇರಿ ಸೌಮ್ಯಾಳನ್ನು ಕೊಲೆ ಮಾಡಿದ್ದರು.

ಈ ಹಿಂದೆ ಕೂಡ ಸೌಮ್ಯ ಮತ್ತು ರಘು ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಸೋಮವಾರ ರಘು ಆಕೆಗೆ ಕಪಾಳಮೋಕ್ಷ ಮಾಡಿದ್ದು, ಈ ವೇಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಸೌಮ್ಯಾ ಸಾವನ್ನಪ್ಪಿದ್ದರಿಂದ ಭಯಭೀತರಾದ ದಂಪತಿ ಶವವನ್ನು ಸುಮಾರು 8 ಗಂಟೆಗಳ ಕಾಲ ತಮ್ಮ ಮನೆಯೊಳಗೆ ಇಟ್ಟುಕೊಂಡಿದ್ದರು. ನಂತರ ಆ ಶವವನ್ನು ದೂರ ತೆಗೆದುಕೊಂಡು ಹೋಗಿ ಸುಡಲು ನಿರ್ಧರಿಸಿದ್ದರು. ನಂತರ ದಂಪತಿ ತಮ್ಮ ಸ್ನೇಹಿತರಾದ ನಾಗರಾಜ್ (18) ಮತ್ತು ವಿನೋದ್ (19) ಅವರ ಸಹಾಯವನ್ನು ಕೋರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (Source)

ಇದನ್ನೂ ಓದಿ
Image
Love Story: ಕತ್ತಲೆಯಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ತೆಗೆದ ಭೂಪ; ಕೋಪಗೊಂಡ ಜನರು ಮಾಡಿದ್ದೇನು?
Image
ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಬೇರೆ ಬೇರೆ ಯುವತಿಯರಿಗೂ ಪ್ರೀತಿಸಲು ಪೀಡಿಸುತ್ತಿದ್ದ ಆರೋಪಿ ನಾಗೇಶ್
Image
Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!
Image
Shocking News: ಬೆಳ್ಳಿ ಗೆಜ್ಜೆ ಆಸೆಗೆ 4 ವರ್ಷದ ಬಾಲಕಿಯನ್ನು ಕೊಂದು, ಮನೆ ಹಿಂದೆ ಹೂತಿಟ್ಟ ಮಹಿಳೆ!

ಸೋಮವಾರ ತಡರಾತ್ರಿ ಎರಡು ಬೈಕ್‌ಗಳಲ್ಲಿ ಚನ್ನಪಟ್ಟಣಕ್ಕೆ ಅವರು ಹೊರಟಿದ್ದರು. ಒಂದರಲ್ಲಿ ರಘು ಮತ್ತು ದುರ್ಗಾ, ಇನ್ನೊಂದರಲ್ಲಿ ವಿನೋದ್ ಮತ್ತು ನಾಗರಾಜ್ ಸೌಮ್ಯಳ ಮೃತದೇಹವನ್ನು ಇಟ್ಟುಕೊಂಡು ಹೊರಟಿದ್ದರು. ಬೆಂಗಳೂರಿನಿಂದ 40 ಕಿ.ಮೀ ಹೋಗಿ, ರಾಮನಗರ ಪಟ್ಟಣದ ಪೊಲೀಸ್‌ ಉಪ ಆಯುಕ್ತರ ಕಚೇರಿ ಎದುರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಗಮಿಸಿದ ವಿನೋದ್‌ ಸ್ಪೀಡ್‌ ಬ್ರೇಕರ್​ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ವಿನೋದ್, ನಾಗರಾಜ್ ಮತ್ತು ಸೌಮ್ಯ ಅವರ ಶವ ರಸ್ತೆ ಮೇಲೆ ಬಿದ್ದಿತು. ಆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಮತ್ತು ಗಸ್ತಿನಲ್ಲಿದ್ದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಮೂವರನ್ನೂ ರಾಮನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಪಘಾತದ ಬಗ್ಗೆ ತಿಳಿಯದ ರಘು ಮತ್ತು ದುರ್ಗಾ ಮುಂದೆ ಹೋಗಿ ಚನ್ನಪಟ್ಟಣ ಬಳಿ ಕಾದು ಕುಳಿತಿದ್ದರು.

ಆಸ್ಪತ್ರೆಗೆ ಸೇರಿಸಿದ ನಂತರ ಡ್ಯೂಟಿ ಡಾಕ್ಟರ್ ಸೌಮ್ಯಳ ದೇಹವನ್ನು ಪರೀಕ್ಷಿಸಿ 8 ಗಂಟೆಗಳ ಹಿಂದೆಯೇ ಅವಳು ಸತ್ತಿದ್ದಾಳೆ ಎಂದು ಹೇಳಿದಾಗ ಪೊಲೀಸರಿಗೆ ಶಾಕ್ ಆಯಿತು. ಪೊಲೀಸರು ವಿನೋದ್ ಮತ್ತು ನಾಗರಾಜನನ್ನು ಹಿಡಿದು, ರಘುಗೆ ಕರೆ ಮಾಡಿದರು. ಅವರು ಇರುವ ಜಾಗವನ್ನು ತಿಳಿದುಕೊಂಡು ಅವರಿಬ್ಬರನ್ನೂ ಬಂಧಿಸಿದರು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Wed, 11 May 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ