ಹಿಜಾಬ್ ವಿಚಾರವಾಗಿ ಹೈಕೋರ್ಟ್‌ ತೀರ್ಪು ಬೆನ್ನಲ್ಲೆ ವಿಧಾನಸೌಧದಲ್ಲಿ ಅನೌಪಚಾರಿಕ ಸಭೆ ನಡೆಸುತ್ತಿರುವ ಮುಸ್ಲಿಂ ನಾಯಕರು

| Updated By: ಆಯೇಷಾ ಬಾನು

Updated on: Mar 15, 2022 | 3:03 PM

ಶಾಸಕ ಜಮೀರ್ ಅಹ್ಮದ್, ಎನ್.ಎ.ಹ್ಯಾರೀಸ್, ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥ ಅಬ್ದುಲ್ ಜಬ್ಬಾರ್, ಇತರ ನಾಯಕರು ಸಮಾಲೋಚನೆ ಮಾಡುತ್ತಿದ್ದಾರೆ. ತೀರ್ಪು ವಿಚಾರವಾಗಿ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆ, ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ, ಪಕ್ಷದ ಮೇಲಾಗುವ ಪರಿಣಾಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಹಿಜಾಬ್ ವಿಚಾರವಾಗಿ ಹೈಕೋರ್ಟ್‌ ತೀರ್ಪು ಬೆನ್ನಲ್ಲೆ ವಿಧಾನಸೌಧದಲ್ಲಿ ಅನೌಪಚಾರಿಕ ಸಭೆ ನಡೆಸುತ್ತಿರುವ ಮುಸ್ಲಿಂ ನಾಯಕರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಶುರುವಾದ ಹಿಜಾಬ್ v/s ಕೇಸರಿ ಕದನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತ್ತು. ಸದ್ಯ 11 ದಿನಗಳ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಹೊರ ಬಿದ್ದಿದೆ. ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಾಲೆಗಳಿಗಿದೆ. ರಾಜ್ಯ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ ಎಂದು ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ. ಆದ್ರೆ ಕೆಲ ಕಡೆ ಮುಸ್ಲಿಂ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದ್ದು ಕೋರ್ಟ್ ತೀರ್ಪನ್ನು ಒಪ್ಪಲು ಸಿದ್ಧವಿಲ್ಲ. ಇನ್ನೂ ಕೆಲವರು ಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಸುಮ್ಮನಾಗಿದ್ದಾರೆ. ಸದ್ಯ ಹಿಜಾಬ್ ವಿಚಾರವಾಗಿ ಹೈಕೋರ್ಟ್‌ ತೀರ್ಪು ಹಿನ್ನೆಲೆ ವಿಧಾನಸೌಧದಲ್ಲಿ ಮುಸ್ಲಿಂ ನಾಯಕರ ಅನೌಪಚಾರಿಕ ಸಭೆ ನಡೆಯುತ್ತಿದೆ.

ಶಾಸಕ ಜಮೀರ್ ಅಹ್ಮದ್, ಎನ್.ಎ.ಹ್ಯಾರೀಸ್, ಅಲ್ಪಸಂಖ್ಯಾತ ಸಮುದಾಯದ ಮುಖ್ಯಸ್ಥ ಅಬ್ದುಲ್ ಜಬ್ಬಾರ್, ಇತರ ನಾಯಕರು ಸಮಾಲೋಚನೆ ಮಾಡುತ್ತಿದ್ದಾರೆ. ತೀರ್ಪು ವಿಚಾರವಾಗಿ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆ, ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ, ಪಕ್ಷದ ಮೇಲಾಗುವ ಪರಿಣಾಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಹಿರಿಯ ವಕೀಲರನ್ನು ಸಂಪರ್ಕಿಸಿ ಇನ್ನಿತರ ಕಾನೂನು ಅಭಿಪ್ರಾಯ ಪಡೆಯುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ.

ಕೋರ್ಟ್ ತೀರ್ಪು ವೈಯಕ್ತಿಕ ಹಕ್ಕು ತಡೆಯುವಂತಿರಬಾರದು
ಕೋರ್ಟ್ ತೀರ್ಪಿಗೆ ಗೌರವ ಕೊಡುತ್ತೇವೆ. ಆ ಬಗ್ಗೆ ಎರಡು ಮಾತಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ತೀರ್ಪು ವೈಯಕ್ತಿಕ ಹಕ್ಕು ತಡೆಯುವಂತಿರಬಾರದು. ಕೋರ್ಟ್‌ ಹಿಜಾಬ್ ಧರಿಸಬಾರದೆಂದು ಹೇಳಿಲ್ಲ. ಶಾಲೆಯಲ್ಲಿ ಸರ್ಕಾರ ಹೇಳೋದನ್ನೇ ಪಾಲನೆ ಮಾಡಬೇಕು. ಹೀಗಾಗಿ ಸರ್ಕಾರ ದೊಡ್ಡ ಮನಸ್ಸು ಮಾಡಬೇಕೆಂದ ಹ್ಯಾರಿಸ್ ಹೇಳಿದ್ರು.

ಹೈ ಕೋರ್ಟ್ ಆದೇಶದಿಂದ ನಮಗೆ ನೋವು ಆಗಿದೆ
ಹಿಜಾಬ್ ಕುರಿತು ಹೈಕೋರ್ಟ್ ನ ಆದೇಶದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ಆದೇಶದಿಂದ ನಮಗೆ ನೋವು ಆಗಿದೆ. ಈ ಆದೇಶ ವಿರುದ್ಧ ನಾವು ಸುಪ್ರೀಂಕೋರ್ಟ್ಗೆ ಹೋಗುತ್ತೇವೆ. ಇಷ್ಟು ದಿನದ ನಮ್ಮ ಹೋರಾಟ ವ್ಯರ್ಥ ಆಗಿದೆ. ಸಂವಿಧಾನ ಬದ್ಧ ಹಕ್ಕು ನಾವು ಬೇಡಿಕೆ ಇಟ್ಟಿದ್ದೇವು. ಹಿಜಾಬ್ ನಮ್ಮ ಧರ್ಮದಲ್ಲಿ ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ಇದೆ. ಹಿಜಾಬ್ ಇಲ್ಲದೇ ಕಾಲೇಜ್ಗೆ ಹೋಗುವುದಿಲ್ಲ. ಹಿಜಾಬ್ಗೆ ಸರಕಾರ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಅಸಮಾಧಾನ ಹೊರ ಹಾಕಿದ್ದಾರೆ.

ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಜಾ ಹಿನ್ನೆಲೆ ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ನಾವು ಹೇಳುತ್ತೇವೆ ಎಂದು ಹುಬ್ಬಳ್ಳಿ ನಗರದಲ್ಲಿ ಪೋಷಕಿ ಶಾಹೀನ್ ಕುರಹಟ್ಟಿ ಮಾತನಾಡಿದ್ದಾರೆ. ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ಆದರೆ ಅಲ್ಲಿಯವರೆಗೆ ಎಲ್ಲರೂ ಶಿಕ್ಷಣ ಪಡೆಯುವುದು ಅತ್ಯಗತ್ಯ. ಸದ್ಯ ಪರೀಕ್ಷೆ ಇರುವ ಹಿನ್ನೆಲೆ ಕೋರ್ಟ್ ಆದೇಶವನ್ನು ಪಾಲಿಸಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ನಿಷೇಧ​ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರುವಂತೆ ಕರೆಕೊಟ್ಟ ಅಸಾದುದ್ದೀನ್​ ಓವೈಸಿ

ಹೈಕೋರ್ಟ್​ ಸ್ಪಷ್ಟ ತೀರ್ಪು ಹೊರತಾಗಿಯೂ ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನಿಂದ ಹೊರನಡೆದ 35 ವಿದ್ಯಾರ್ಥಿನಿಯರು!