ಮೊಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ ಕಾರ್ಯಕ್ರಮ; ಎಸ್​​.ಎಂ.ಕೃಷ್ಣ ಭಾಗಿ

| Updated By: ವಿವೇಕ ಬಿರಾದಾರ

Updated on: Jun 11, 2022 | 4:11 PM

ಮಾಜಿ ಸಚಿವೆ ಮೊಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಡಾ. ಜಿ ಪರಮೇಶ್ವರ್ ,  ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ, ಬಿ ಟಿ ಲಲಿತಾ ನಾಯಕ್  ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಮೊಟಮ್ಮ ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ ಕಾರ್ಯಕ್ರಮ; ಎಸ್​​.ಎಂ.ಕೃಷ್ಣ ಭಾಗಿ
ಬಿದಿರು ನೀನ್ಯಾರಿಗಲ್ಲದವಳು ಪುಸ್ತಕ ಬಿಡುಗಡೆ
Follow us on

ಬೆಂಗಳೂರು:  ಮಾಜಿ ಸಚಿವೆ ಮೊಟಮ್ಮ (Motamma) ಆತ್ಮಕಥನ ‘ಬಿದಿರು ನೀನ್ಯಾರಿಗಲ್ಲದವಳು’ ಬಿಡುಗಡೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ (SM Krishna) , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar), ಡಾ. ಜಿ ಪರಮೇಶ್ವರ್ (G Parmeshwar),  ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ, ಬಿ ಟಿ ಲಲಿತಾ ನಾಯಕ್  ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ. ಮೊಟಮ್ಮರ ಆತ್ಮಕಥನ ಬಿಡುಗಡೆ ಮಾಡಿದ ಎಸ್ ಎಂ ಕೃಷ್ಣ ಮೊಟಮ್ಮ ಅವರು ಇಷ್ಟು ಬೇಗ ಯಾಕೆ ಆತ್ಮಕಥನ ಬರೆದುಕೊಂಡರು ಎಂಬುದು ನನಗೆ ಗೊತ್ತಗುತ್ತಿಲ್ಲ. ಯಾಕೆಂದರೆ ಅವರಿಗೆ ಇನ್ನೂ ವಯಸ್ಸಿದೆ.  ಮೊಟಮ್ಮ ನಮ್ಮೂರಿನವರು, ಅವರು ವೆಂಕಟರಮಣ ಅವರನ್ನು ಮದುವೆ ಆಗಿದ್ದಾರೆ. ವೆಂಕರಮಣ ಅವರು ಮಂಡ್ಯದ ಕಿಲಾರದವರು. ಇರವರದ್ದು ಪ್ರೇಮ-ಪ್ರಣಯ ವಿವಾಹ ಎಂದು ಹೇಳಿದರು. ಈ ವೇಳೆ ಮೊಟಮ್ಮ ನಗುತ್ತಲೇ ಕೃಷ್ಣಾರಿಗೆ ಕೈಮುಗಿದಿದ್ದಾರೆ.

ಇದನ್ನು ಓದಿ: ಅಂದು ದ್ರಾವಿಡ್ ಬಾರಿಸಿದ ಸಿಕ್ಸ್ ಹೋಗಿ ಬಿದ್ದಿದ್ದು ಎಲ್ಲಿ ಗೊತ್ತಾ?

ಮೊಟಮ್ಮ ಅಲ್ಲ ಅಂತಾರೆ, ವೆಂಕಟರಮಣ ಪ್ರೇಮ ವಿವಾಹ ಎಂಬುದನ್ನು ಒಪ್ಪಿಕೊಳ್ತಾರೆ.  ಆಗ ವೇದಿಕೆ ಮೇಲಿದ್ದ ವೆಂಕಟರಮಣ ನಗುತ್ತ ಕೈಮುಗಿದಿದ್ದಾರೆ.  ಸ್ತ್ರೀ ಸಬಲೀಕರಣಕ್ಕಾಗಿ ಮೊಟಮ್ಮ ಶ್ರಮಿಸಿದ್ದಾರೆ.  ಸ್ತ್ರೀಶಕ್ತಿ ಸಂಘಗಳ ಯೋಜನೆಯನ್ನು ಪರಿಣಾಮಕಾರಿಯಾಗಿ ಮೊಟಮ್ಮ ಜಾರಿಗೆ ತಂದಿದ್ದಾರೆ. ನಾನು ನಿನ್ನೆ ಎಲ್ಲೊ ಬಿದ್ದುಬಿಟ್ಟೆ, ಹೀಗಾಗಿ ಸ್ವಲ್ಪ ಕುಂಟುತ್ತಿದ್ದೇನೆ. ಬಹುಶಃ ಮೊಟಮ್ಮ ಅವರದಲ್ಲದೆ ಬೇರೆ ಯಾವುದೇ ಕಾರ್ಯಕ್ರಮ ಆಗಿದ್ದರೂ ಹೋಗುತ್ತಿರಲಿಲ್ಲ. ಮೋಟಮ್ಮ ಅವರ ಕಾರ್ಯಕ್ರಮ ಆಗಿದ್ದರಿಂದ ಪೇನ್ ಕಿಲ್ಲರ್ ತೆಗೆದುಕೊಂಡು ಬಂದು ಕುಳಿತಿದ್ದೇನೆ. ಈಗ ಎಕ್ಸ್ ರೇ ತೆಗೆಸಬೇಕು, ಮಲ್ಯ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಹೀಗಾಗಿ ನಾನು ತೆರಳುತ್ತಿದ್ದೇನೆ ಎಂದು ಹೇಳಿದರು. ಎಸ್ಎಂಕೆ ತೆರಳುವುದಕ್ಕಿಂತ ಮೊದಲು ಮೊಟಮ್ಮ ಅವರನ್ನು ಸನ್ಮಾನಿಸಿದರು.

ಇದನ್ನು ಓದಿ: NT ಅವಾರ್ಡ್ಸ್ 2022 ಪ್ರಶಸ್ತಿ ಪಡೆದ ಟಿವಿ9 ನೆಟ್​ವರ್ಕ್​! ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಟಿವಿ9 ಸಮೂಹ

ರಾಜ್ಯದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲು ಮೊಟಮ್ಮ ಕಾರಣರಾಗಿದ್ದಾರೆ. ಮೊಟಮ್ಮ ಸಾಧನೆಗೆ ಅವರ ಪತಿ ವೆಂಟರಮಣ ಅವರು ಕಾರಣ.  ಬಹಳಷ್ಟು ಕಷ್ಟಪಟ್ಟು ಸಾಧನೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:11 pm, Sat, 11 June 22