NT ಅವಾರ್ಡ್ಸ್ 2022 ಪ್ರಶಸ್ತಿ ಪಡೆದ ಟಿವಿ9 ನೆಟ್ವರ್ಕ್! ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಟಿವಿ9 ಸಮೂಹ
ಟಿವಿ9 ಬಾಂಗ್ಲಾ, ಟಿವಿ9 ಭಾರತ್ವರ್ಷ್, ಟಿವಿ9 ಮರಾಠಿ, ಟಿವಿ9 ತೆಲುಗು, ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022ಗೆ ಆಯ್ಕೆಯಾಗಿದೆ. ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ತರುವ ಮೂಲಕ ತನ್ನದೇ ಆದ ಸಾಧನೆಯನ್ನು ಟಿವಿ9 ಸಮೂಹ ಮಾಡಿದೆ. ಪ್ರತಿಷ್ಠಿತ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022ಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಟಿವಿ9 ನೆಟ್ ವರ್ಕ್, ಪ್ರತಿಷ್ಠಿತ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022 ರಲ್ಲಿ ಅಗ್ರ ಗೌರವಗಳನ್ನು ಗಳಿಸಿದೆ. ವಿವಿಧ ವಿಭಾಗಗಳಲ್ಲಿ 46 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಟಿವಿ9 ನೆಟ್ವರ್ಕ್ ಗ್ರೂಪ್ ಹೆಚ್ಚು ಪ್ರಶಸ್ತಿ ಪಡೆದ ಚಾನೆಲ್ ಆಗಿದೆ. ಇದರ ಜೊತೆಗೆ ಬೇರೆ ಬೇರೆ ವಿಭಾಗದಲ್ಲಿ ವೈಯಕ್ತಿಕ ಸಾಧನೆಯನ್ನು ಮಾಡಿದೆ. ಟಿವಿ9 ನೆಟ್ವರ್ಕ್ನ ಬೇರೆ ಭಾಷೆಗಳ ಚಾನಲ್ನಲ್ಲಿ ತನ್ನದೇ ಆಗಿರುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಪ್ರಶಸ್ತಿ ಲಭಿಸಿದೆ. ಭಾರತದ ನ್ಯೂಸ್ ನೆಟ್ವರ್ಕ್ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ.
ಟಿವಿ9 ಬಾಂಗ್ಲಾ, ಟಿವಿ9 ಭಾರತ್ವರ್ಷ್, ಟಿವಿ9 ಮರಾಠಿ, ಟಿವಿ9 ತೆಲುಗು, ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022ಗೆ ಆಯ್ಕೆಯಾಗಿದೆ. ಟಿವಿ9 ನೆಟ್ವರ್ಕ್ನಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ತರುವ ಮೂಲಕ ತನ್ನದೇ ಆಗಿರುವ ಸಾಧನೆಯನ್ನು ಮಾಡಿದೆ. ಪ್ರತಿಷ್ಠಿತ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022 ಕಾರ್ಯಕ್ರಮವು ನಾಳೆ ( ಭಾನುವಾರ) ಸಂಜೆ ದೆಹಲಿಯ ಹಾಲಿಡೇ ಇನ್ ಹೋಟೆಲ್‌ನಲ್ಲಿ ನಡೆಯಲಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಹಿಂದಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ TV9 ಭಾರತ್ವರ್ಷ್: ಭಾರತದ ಅತಿದೊಡ್ಡ ನ್ಯೂಸ್ ನೆಟ್ವರ್ಕ್ ಆಗಿ ಹೊರಹೊಮ್ಮಿದ TV9 ಸಮೂಹ
ಟಿವಿ9 ಬಾಂಗ್ಲಾ
ಟಿವಿ9 ಬಾಂಗ್ಲಾ ಒಟ್ಟು 14 ವಿಭಾಗಗಳಲ್ಲಿ ಸಾಧನೆಯನ್ನು ಮಾಡಿದ್ದು, ಬೇರೆ ಬೇರೆ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಮಹಿಳಾ ವಿಭಾಗದಲ್ಲಿ ರುಮೇಲಾ ಚಕ್ರವರ್ತಿ ಬೆಸ್ಟ್ ಟಿವಿ ನ್ಯೂಸ್ ಪ್ರೆಸೆಂಟರ್, ಬೆಸ್ಟ್ ಚಾನೆಲ್ ಪ್ರೋಮೋ, ಡೈಲಿ ನ್ಯೂಸ್ ಬುಲೆಟಿನ್, ಸುದ್ದಿ ನೆಟ್‌ವರ್ಕ್‌ನಿಂದ ಸಾಮಾಜಿಕ ಕೊಡುಗೆ ಹೀಗೆ ಹಲವು ವಿಭಾಗಗಳಲ್ಲಿ ಸಾಧನೆಯನ್ನು ಮಾಡಿದೆ.
ಟಿವಿ9 ಭಾರತ್ವರ್ಷ್ (ಹಿಂದಿ)
ಪ್ರಸ್ತುತ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022ನಲ್ಲಿ ಟಿವಿ9 ಭಾರತ್ವರ್ಷ್ ಭಾಗಿಯಾಗಿದೆ. ಟಿವಿ9 ಭಾರತ್ವರ್ಷ್ 6 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಸ್ಟ್ ಕ್ಯಾಮರ್ ಮ್ಯಾನ್, ಡೈಲಿ ನ್ಯೂಸ್ ಬುಲೆಟಿನ್, ಸುದ್ದಿ ನೆಟ್‌ವರ್ಕ್‌ನಿಂದ ಸಾಮಾಜಿಕ ಕೊಡುಗೆ ಹಾಗೂ ಇನ್ನೂ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದು ಸಾಧನೆಯನ್ನು ಮಾಡಿದೆ.
ಟಿವಿ9 ಮರಾಠಿ
ಟಿವಿ9 ಮರಾಠಿ ನ್ಯೂಸ್ ಕೂಡಾ ಟೆಲಿವಿಷನ್ ಅವಾರ್ಡ್ಸ್ 2022ನಲ್ಲಿ ಭಾಗವಹಿಸಲಿದೆ. ಅತ್ಯುತ್ತಮ ಸುದ್ದಿ ಚರ್ಚೆ ಕಾರ್ಯಕ್ರಮ, ಸುದ್ದಿ ವಾಹಿನಿಯಿಂದ ಅತ್ಯುತ್ತಮ ಮಾರ್ಕೆಟಿಂಗ್, ಡೈಲಿ ನ್ಯೂಸ್ ಬುಲೆಟಿನ್, ಸೇರಿದಂತೆ ಒಟ್ಟು 7 ವಿಭಾಗದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ.
ಟಿವಿ9 ತೆಲುಗು
ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ 2022ನಲ್ಲಿ ಟಿವಿ9 ತೆಲುಗು ಪ್ರಶಸ್ತಿಗೆ ಭಾಜನವಾಗಿದೆ. 19 ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೇರೆ ಬೇರೆ ವಿಭಾಗದಲ್ಲಿ ತನ್ನದೇ ಆಗಿರುವ ಸಾಧನೆಯನ್ನು ಮಾಡಿದೆ. ಟಿವಿ9 ತೆಲುಗು ಸಾಮಾಜಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸುದ್ದಿಯನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದರ ಜೊತೆಗೆ ಅತ್ಯುತ್ತಮ ವಿಡಿಯೋ ಸಂಕಲನಕಾರ, ನಿರೂಪಕ, ಎಂಬ ಪ್ರಶಸ್ತಿಯೂ ಸಿಕ್ಕಿದೆ.
ಭಾರತದ ಅತಿದೊಡ್ಡ ನ್ಯೂಸ್ ನೆಟ್ವರ್ಕ್ ಆಗಿ ಹೊರಹೊಮ್ಮಿದ TV9 ಸಮೂಹ
ಟಿವಿ9 ಸಮೂಹದ ಭಾರತ್ವರ್ಷ್ (Tv9 Bharatvarsh) ಭಾರತದ ನಂಬರ್ 1 ಹಿಂದಿ ಸುದ್ದಿವಾಹಿನಿ ಸ್ಥಾನಕ್ಕೆ ಏರಿದೆ. ಸತತ 74 ವಾರಗಳ ಅವಿರತ ಪರಿಶ್ರಮವು ಹಿಂದಿ ಸುದ್ದಿಜಗತ್ತಿನಲ್ಲಿ ಹೊಸ ನಾಯಕನ ಉದಯವನ್ನು ಸಾಧ್ಯವಾಗಿಸಿದೆ. ಟಿವಿ9 ಸಮೂಹದ ಕನ್ನಡ, ತೆಲುಗು, ಮರಾಠಿ, ಗುಜರಾತಿ ಮತ್ತು ಬೆಂಗಾಲಿ ಸುದ್ದಿವಾಹಿನಿಗಳು ಉತ್ತಮ ಸಾಧನೆ ಮಾಡಿವೆ. ಹೀಗಾಗಿಯೇ ರಾಷ್ಟ್ರಮಟ್ಟದಲ್ಲಿ ಟಿವಿ9 ಸಮೂಹವು ಮೊದಲ ಸ್ಥಾನಕ್ಕೇರಲು ಸಾಧ್ಯವಾಗಿದೆ. ಟಿವಿ9 ಸಮೂಹದ ಮೂರು ಚಾನೆಲ್ಗಳು ಅವುಗಳ ಭಾಷೆಯಲ್ಲಿ ಮೊದಲ ಸ್ಥಾನದಲ್ಲಿವೆ. ಇತರ ಚಾನೆಲ್ಗಳು ಮುನ್ನಡೆ ಕಾಯ್ದುಕೊಂಡಿವೆ. ಟಿವಿ9 ಸಮೂಹವು 292 ಮಿಲಿಯನ್ ಎಎಂಎ (Average Minute Audience – AMA) ಸಾಧಿಸಿದೆ. ಇದು ಸಮೀಪದ ಪ್ರತಿಸ್ಪರ್ಧಿಯಾಗಿರುವ ಝೀ ನೆಟ್ವರ್ಕ್ಗೆ ಹೋಲಿಸಿದರೆ ಶೇ 25ರಷ್ಟು ಮುನ್ನಡೆಯಾಗಿದೆ. ಝೀ ನೆಟ್ವರ್ಕ್ ಒಟ್ಟು 13 ಚಾನೆಲ್ ಹೊಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ