ಮೆಟ್ರೋ ಪ್ರಯಾಣಿಕರೇ ಗಮನಿಸಿ: ಅಕ್ಟೋಬರ್ 3ರ ಶನಿವಾರ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಲಾಂಗ್ ವೀಕೆಂಡ್ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬಿಎಂಆರ್‌ಸಿಎಲ್ (BMRCL) ಅಕ್ಟೋಬರ್ 3ರ ಶನಿವಾರದಂದು ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಿದ್ದು, ಪ್ರಮುಖ ಟರ್ಮಿನಲ್‌ಗಳಿಂದ ಕೊನೆಯ ರೈಲುಗಳ ಸಮಯವನ್ನು ಪ್ರಕಟಿಸಿದೆ. ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರಯಾಣಿಕರು QR ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ NCMC ಕಾರ್ಡ್‌ಗಳನ್ನು ಬಳಸುವಂತೆಯೂ ಮನವಿ ಮಾಡಿಕೊಂಡಿದೆ.

ಬೆಂಗಳೂರು, ಅಕ್ಟೋಬರ್ 02: ಲಾಂಗ್ ವೀಕೆಂಡ್ ಹಿನ್ನೆಲೆ ಊರುಗಳಿಗೆ ತೆರಳುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಜನರ ಓಡಾಟ ಬೆಂಗಳೂರಿನಲ್ಲಿ ಹೆಚ್ಚಿದೆ. ಹೀಗಾಗಿ ಪ್ರಯಾಣಿಕರ ದಟ್ಟಣೆ ನಿವಾರಸುವ ನಿಟ್ಟಿನಲ್ಲಿ ಮತ್ತು ಜನರ ಅನುಕೂಲಕ್ಕಾಗಿ ಅಕ್ಟೋಬರ್ 3ರ ಶನಿವಾರದಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಹಿತಿ ಹಂಚಿಕೊಂಡಿದ್ದು, ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ಸಮಯದ ಮಾಹಿತಿಯನ್ನೂ ನೀಡಿದೆ.
ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ಸಮಯ
Media Release – Namma Metro services extended on 3rd oct 2026. pic.twitter.com/KgcQFJ6u3d
— ನಮ್ಮ ಮೆಟ್ರೋ (@OfficialBMRCL) October 2, 2026
- ನೇರಳೆ ಮಾರ್ಗ: ವೈಟ್‌ಫೀಲ್ಡ್ (ಕಾಡುಗೋಡಿ) ರಾತ್ರಿ 12:00ಕ್ಕೆ ಕೊನೆಯ ರೈಲು ಸಂಚರಿಸಲಿದ್ದರೆ, ಚಲ್ಲಘಟ್ಟ ಮೆಟ್ರೋ ಸ್ಟೇಷನ್ನಿಂದ ರಾತ್ರಿ 12:20ಕ್ಕೆ ಕೊನೆಯ ರೈಲು ಹೊರಡಲಿದೆ.
- ಹಸಿರು ಮಾರ್ಗ: ಮಾದಾವರದಿಂದ ರಾತ್ರಿ 12:15ಕ್ಕೆ ಲಾಸ್ಟ್ ಮೆಟ್ರೋ ರೈಲು ಹೊರಡಲಿದ್ದರೆ, ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಕೊನೆಯ ರೈಲು ರಾತ್ರಿ 12:20ಕ್ಕೆ ಸಂಚರಿಸಲಿದೆ.
- ಹಳದಿ ಮಾರ್ಗ: ಆರ್.ವಿ.ರಸ್ತೆಯಿಂದ ರಾತ್ರಿ 1:15ಕ್ಕೆ ಕೊನೆಯ ರೈಲು ಹೊರಡಲಿದ್ದರೆ, ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹೊರಡುವ ಕೊನೆಯ ಮೆಟ್ರೋ ರೈಲಿನ ಸಮಯ ರಾತ್ರಿ 11:55 ಆಗಿದೆ.
- ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12:55ಕ್ಕೆ ಹೊರಡಲಿದೆ.
ಇದನ್ನೂ ಓದಿ: ಬೆಂಗಳೂರಿನಿಂದ 6 ಏರಿಯಾ, ಊರುಗಳಿಗೆ ಮೆಟ್ರೋ ಸಂಚಾರ: ಬಿಎಂಆರ್ಸಿಎಲ್ ಕೈಸೇರಿದ ಫಿಸಿಬಿಲಿಟಿ ಸ್ಟಡಿ ವರದಿ
ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರಯಾಣಿಕರು QR ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ NCMC ಕಾರ್ಡ್‌ಗಳನ್ನು ಬಳಸಿ. ಜೊತೆಗೆ ಸುಗಮ ಸಂಚಾರಕ್ಕಾಗಿ ಮೆಟ್ರೋ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಸಹಕರಿಸುವಂತೆಯೂ ಇದೇ ವೇಳೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




