AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲಿ ದೊಡ್ಡ ಬ್ಯಾಗ್ ಕೊಂಡೊಯ್ಯೋ ಮುನ್ನ ಹುಷಾರ್! ಟಿಕೆಟ್ ತಗೊಳ್ಳದಿದ್ರೆ ಬೀಳುತ್ತೆ ದಂಡ

ನಮ್ಮ ಮೆಟ್ರೋ ಲಗೇಜ್ ಶುಲ್ಕ ವಿವರ: ನಮ್ಮ ಮೆಟ್ರೋ ರೈಲಿನಲ್ಲಿ ದೊಡ್ಡ ಗಾತ್ರದ ಬ್ಯಾಗ್ ಕೊಂಡೊಯ್ದ ಪ್ರಯಾಣಿಕರೊಬ್ಬರಿಂದ ಇತ್ತೀಚೆಗೆ ಶುಲ್ಕ ಪಡೆದಿರುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ, ಮೆಟ್ರೋ ರೈಲಿನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು? ಲಗೇಜ್ ಗಾತ್ರದ ಮಿತಿ ಎಷ್ಟು? ಹೆಚ್ಚಿನ ಲಗೇಜ್​​ಗೆ ಎಷ್ಟು ದರ ಪಾವತಿಸಬೇಕು? ಟಿಕೆಟ್ ಪಡೆಯದಿದ್ದರೆ ದಂಡ ಎಷ್ಟು ಪೂರ್ಣ ವಿವರ ಇಲ್ಲಿದೆ

ಮೆಟ್ರೋದಲ್ಲಿ ದೊಡ್ಡ ಬ್ಯಾಗ್ ಕೊಂಡೊಯ್ಯೋ ಮುನ್ನ ಹುಷಾರ್! ಟಿಕೆಟ್ ತಗೊಳ್ಳದಿದ್ರೆ ಬೀಳುತ್ತೆ ದಂಡ
ನಮ್ಮ ಮೆಟ್ರೋದಲ್ಲಿ ಬ್ಯಾಗ್​ಗೆ ಶುಲ್ಕ
ವಿವೇಕ ಬಿರಾದಾರ
|

Updated on:Aug 19, 2025 | 1:09 PM

Share

ಬೆಂಗಳೂರು, ಆಗಸ್ಟ್ 19: ಇತ್ತೀಚಿಗೆ ಬೆಂಗಳೂರಿನ (Bengaluru) ನಮ್ಮ ಮೆಟ್ರೋದ (Namma Metro) ಟಿಕೆಟ್​ ದರ ಏರಿಕೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ನಮ್ಮ ಮೆಟ್ರೋದಲ್ಲಿ ಕೊಂಡಯ್ಯುವ ಬ್ಯಾಗ್​ಗೂ ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಹೌದು, ಓರ್ವ ಪ್ರಯಾಣಿಕ ತನ್ನ ದೊಡ್ಡ ಗಾತ್ರದ ಬ್ಯಾಗ್​ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿ ಮಾಡಿದ್ದಾರೆ. ಈ ಕುರಿತು ಪ್ರಯಾಣಿಕ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಾಕಿ ಬಿಎಂಆರ್​ಸಿಎಲ್ (BMRCL)​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕನ ಪೋಸ್ಟ್​

“ನಮ್ಮ ಮೆಟ್ರೋ ರೈಲಿನಲ್ಲಿ ಬ್ಯಾಗ್​ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿಸಬೇಕು ಎಂದು ಕೇಳಿ ನಾನು ದಿಗ್ಬ್ರಾಂತ​ನಾದೆ. ಬೆಂಗಳೂರು ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್​ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್​ಸಿಎಲ್ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮೆಟ್ರೋದಲ್ಲಿ ಲಗೇಜ್​ ಶುಲ್ಕ ಎಷ್ಟಿದೆ?

ನಮ್ಮ ಮೆಟ್ರೋದಲ್ಲಿ ಒಬ್ಬ ವ್ಯಕ್ತಿ 60 ಸೆಂ.ಮೀ X 45 ಸೆಂ ಮೀ X 25 ಸೆಂ ಮೀ (ಉದ್ದ X ಅಗಲ X ಎತ್ತರ) 15 ಕೆಜಿ ಒಳಗಿನ ಬ್ಯಾಗ್​ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್​ /ಹೆಚ್ಚುವರಿ ಬ್ಯಾಗ್​ ಮತ್ತು ದೊಡ್ಡ ಗಾತ್ರದ ಬ್ಯಾಗ್​ ಅನ್ನು ಕೊಂಡೊಯ್ಯಲು ಪ್ರತಿ ಬ್ಯಾಗ್​ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು. ಈ ಲಗೇಜ್ ಟಿಕೆಟ್ ಅನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಖರೀದಿಸಬಹುದು,” ಎಂದು ನಮ್ಮ ಮೆಟ್ರೋ ನಿಯಮಗಳಲ್ಲಿ ಇದೆ.

ಇದನ್ನೂ ಓದಿ: ಆರೆಂಜ್ ಲೈನ್​ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ: ಪರಿಸರ ಹೋರಾಟಗಾರರ ಜತೆ ಅಧಿಕಾರಿಗಳ ಸಭೆ

ಬ್ಯಾಗ್​ ಟಿಕೆಟ್​ ಪಡೆಯದಿದ್ದರೆ ಎಷ್ಟು ದಂಡ?

ಹೆಚ್ಚುವರಿ ಬ್ಯಾಗ್​ಗೆ ಟಿಕೆಟ್ ಖರೀದಿಸದಿದ್ದರೆ, ರೂ. 250 ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಬ್ಯಾಗ್​ಗೆ ಶುಲ್ಕ ಪಾವತಿಸದೆ ಪ್ರಯಾಣಿಸುವಾಗ, ಮೆಟ್ರೋ ರೈಲ್ವೆ ಆಡಳಿತ ಮಂಡಳಿಯ ಯಾವುದೇ ಅಧಿಕಾರಿ ಆ ಪ್ರಯಾಣಿಕನನ್ನು ರೈಲಿನಿಂದ ಹೊರಗೆ ಕಳುಹಿಸುವ ಅಧಿಕಾರ ಹೊಂದಿದ್ದಾರೆ” ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Tue, 19 August 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್