ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ 7ನೇ ಚಾಲಕರಹಿತ ರೈಲು ಬೆಂಗಳೂರು ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಿ, ರೈಲುಗಳ ನಡುವಿನ ಓಡಾಟದ ಸಮಯವನ್ನು 8-10 ನಿಮಿಷಗಳಿಗೆ ಇಳಿಸಲಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ವೇಗದ ಸೇವೆ ಲಭ್ಯವಾಗಲಿದೆ. ಪಿಂಕ್ ಲೈನ್ ಮೆಟ್ರೋ 2026ರ ಮೇ ತಿಂಗಳಲ್ಲಿ ಚಾಲಕ ರಹಿತ ರೈಲುಗಳೊಂದಿಗೆ ಆರಂಭವಾಗುವ ನಿರೀಕ್ಷೆಯಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು
ಮೆಟ್ರೋ ರೈಲು
Edited By:

Updated on: Dec 18, 2025 | 5:45 PM

ಬೆಂಗಳೂರು, ಡಿಸೆಂಬರ್​​ 18: ನಮ್ಮ ಮೆಟ್ರೋದ ಯೆಲ್ಲೋ ಮಾರ್ಗದ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡ್ರೈವರ್ಲೆಸ್ 7ನೇ ರೈಲು ಬೆಂಗಳೂರು ತಲುಪಿದ್ದು, ಈ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಸಮಯ ಹೊಸ ವರ್ಷಕ್ಕೆ ಮತ್ತಷ್ಟು ಕಡಿಮೆ ಆಗಲಿದೆ. ಹೊಸ ರೈಲು ಹಳಿಗಿಳಿದ ಬೆನ್ನಲ್ಲೇ 8-10 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚರಿಸಲಿದೆ.

ಹೆಬ್ಬಗೋಡಿ ಡಿಪೋ ತಲುಪಿದ ರೈಲು

ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಡಿಸೆಂಬರ್ 10ರಂದು ಕೊಲ್ಕತ್ತಾದ ಟಿಟಾಗರ್​​ನಿಂದ ಹೊರಟಿದ್ದ ಡ್ರೈವರ್ಲೆಸ್ 7ನೇ ರೈಲು ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಜನವರಿಯಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಆರ್​​.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಯೆಲ್ಲೋ ಲೈನ್​​ನಲ್ಲಿ ಓಡಾಡಲಿದೆ. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 5 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. ಆಗಸ್ಟ್ 10ರಂದು ಯೆಲ್ಲೋ ಲೈನ್​​ ಉದ್ಘಾಟನೆಯಾಗಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು.

ಇದನ್ನೂ ಓದಿ: ಹಳದಿ ಮಾರ್ಗದಲ್ಲಿನ ಮೆಟ್ರೋ ಸ್ಟೇಷನ್​​ಗಳ ಸಮೀಪ ಬಿಎಂಟಿಸಿ ಬಸ್​​ ನಿಲ್ದಾಣಗಳ ವ್ಯವಸ್ಥೆ

ಮೇನಿಂದ ಪಿಂಕ್​​ ಲೈನ್​​ ಮೆಟ್ರೋ ಸಂಚಾರ ಸಾಧ್ಯತೆ

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ರೈಲಿನ ಮಾದರಿಯನ್ನು ಬಿಇಎಂಎಲ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL  ಸಿದ್ಧತೆ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಬ್ಲ್ಯೂ ಲೈನ್​​ ಮತ್ತು ಪಿಂಕ್​​ ಲೈನ್​​ ಮೆಟ್ರೋಗಳಿಗಾಗಿ ಒಟ್ಟು 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ. ಮೆಟ್ರೋ ಟ್ರೇನ್‌ಸೆಟ್‌ಗಳನ್ನು ಸಂಪೂರ್ಣವಾಗಿ ಬೆಂಗಳೂರಿನ BEMLನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಜಿನಿಯರಿಂಗ್​​ ಮತ್ತು ನಿರ್ಮಾಣ ಎಲ್ಲವೂ ಇಲ್ಲಿಯೇ ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.