ಜಮೀರ್ ಧ್ವಜಾರೋಹಣ ಮಾಡುವುದು ಬೇಡವೇ ಬೇಡ: ಪಟ್ಟು ಹಿಡಿದ ಹಿಂದೂ ಸಂಘಟನೆಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2022 | 1:29 PM

ಜಮ್ಮೀರ್ ಧ್ವಜಾರೋಹಣ ಮಾಡಿದ್ರೆ ನಾವು ಬಿಡೋದಿಲ್ಲ. ಜಮೀರ್ 20 ವರ್ಷ ಧ್ವಜಾರೋಹಣಕ್ಕೆ ಅಡ್ಡಿ ಮಾಡಿದವರು. ಈಗ ಇವರು ಧ್ವಜಾರೋಹಣ ಮಾಡೋದು ಬೇಡ.

ಜಮೀರ್ ಧ್ವಜಾರೋಹಣ ಮಾಡುವುದು ಬೇಡವೇ ಬೇಡ: ಪಟ್ಟು ಹಿಡಿದ ಹಿಂದೂ ಸಂಘಟನೆಗಳು
ಈದ್ಗಾ ಮೈದಾನ, ಜಮೀರ್ ಅಹ್ಮದ್ ಖಾನ್
Follow us on

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ (chamrajpet Idgah Maidan) ಗಣೇಶ ಮೂರ್ತಿ ಪ್ರತಿಷ್ಠಾಪನೆ ಗಲಾಟೆ ಆಯ್ತು‌. ಈಗ ಧ್ವಜಾರೋಹಣ ವಿಚಾರವಾಗಿ ಸಮರ ಶುರುವಾಗಿದ್ದು, ಜಮೀರ್ ಧ್ವಜಾರೋಹಣ ಮಾಡುವುದು ಬೇಡವೇ ಬೇಡ ಎಂದು ಹಿಂದೂ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಪಟ್ಟು ಹಿಡಿದಿದೆ. ಜಮ್ಮೀರ್ ಧ್ವಜಾರೋಹಣ ಮಾಡಿದ್ರೆ ನಾವು ಬಿಡೋದಿಲ್ಲ. ಜಮೀರ್ 20 ವರ್ಷ ಧ್ವಜಾರೋಹಣಕ್ಕೆ ಅಡ್ಡಿ ಮಾಡಿದವರು. ಈಗ ಇವರು ಧ್ವಜಾರೋಹಣ ಮಾಡೋದು ಬೇಡ. ಜಮೀರ್ ಬರ್ಲಿ, ಸೆಲ್ಯೂಟ್ ಮಾಡಿ ಹೋಗ್ಲಿ. ಜಮೀರ್ ಸಲ್ಯೂಟ್​ಗೆ ಮಾತ್ರ ಸೀಮಿತವಾಗಿರಲಿ. ನಾವೇ ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದರು. ಇದಕ್ಕೆ ಒಪ್ಪಿಗೆ ನೀಡದಿದ್ರೆ ಅಶಾಂತಿ ಸೃಷ್ಟಿಯಾಗುವ ಎಚ್ಚರಿಕೆ ನೀಡಿದ್ದು, ಈ ಅಶಾಂತಿಗೆ ಸರ್ಕಾರವೇ ನೇರ ಹಣೆ ಆಗಲಿದೆ ಎಂದು ಸಂಘಟನೆಗಳು ಹೇಳುತ್ತಿವೆ.

ಇದನ್ನೂ ಓದಿ: Chamrajpet Idgah Maidan: ಅನುಮತಿ ಕೊಡಲಿ, ಬಿಡಲಿ ಚಾಮರಾಜಪೇಟೆ ಮೈದಾನದಲ್ಲಿ ಬಾವುಟ ಹಾರಿಸ್ತೀವಿ; ನಾಗರಿಕ ಒಕ್ಕೂಟದ ಖಚಿತ ನುಡಿ

ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿವಾದಾತ್ಮಕ ಹೇಳಿಕೆ: ಎಫ್‌ಐಆರ್‌ ದಾಖಲು

ಈದ್ಗಾ ಮೈದಾನದ ವಿವಾದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಬ್ರಿ ಮಸೀದಿ ರೀತಿ ಮೈದಾನದ ಗೋಡೆ ಕೆಡುವುದಾಗಿ ಹೇಳಿದ್ದರು. ಹೀಗಾಗಿ ಭಾಸ್ಕರನ್ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ಈದ್ಗಾ ಮೈದಾನದ ವಾರಸುದಾರಿಕೆ ವಿಚಾರಕ್ಕೆ ಚರ್ಚೆ ನಡೆಯುತ್ತಿದೆ. ಹಿಂದೂಪರ ಸಂಘಟನೆ, ಬಿಬಿಎಂಪಿ ಹಾಗೂ ಮುಸ್ಲಿಂ ವಕ್ಫ್ ಬೋರ್ಡ್ ನಡುವೆ ಸಂಘರ್ಷ ನಡೆಯುತ್ತಿತ್ತು. ಸದ್ಯ ಈದ್ಗಾ ಮೈದಾನ ಬಿಬಿಎಂಪಿ ಸ್ವತ್ತಾಗಿದೆ. ಎಲ್ಲರೂ ಆಟದ ಮೈದಾನ ಬಳಸಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ 6 ರೊಳಗೆ ಈದ್ಗಾ ಮೈದಾನದ ಗೋಡೆ ಕೆಡವಬೇಕು. ನಾವು ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ.

ಈಗಾಗಲೇ ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ತಯಾರಿ ನಡೆಸಿದ್ದೇವೆ. ಕರ್ನಾಟಕ ರಾಜ್ಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರದ ಹಿಂದೂಪರ ಸಂಘಟನೆಗಳ ಜೊತೆ ಟಚ್ನಲ್ಲಿ ಇದ್ದೇವೆ ಎಂದು ಭಾಸ್ಕರನ್ ಹೇಳಿದ್ದರು. ಭಾಸ್ಕರನ್ ಹೇಳಿಕೆಯಿಂದ ಕೋಮು ಸೌಹರ್ಧತೆಗೆ ಧಕ್ಕೆಯಾಗಲಿದೆ. ಅನ್ಯ ಧರ್ಮೀಯರು ಪೂಜಿಸುವ ಜಾಗದ ಬಗ್ಗೆ ಅವಮಾನಿಸಿ ಮಾತನಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತ ಹೇಳಿಕೆ ನೀಡಿದ್ದಾರೆ. ಅಲ್ಲದೇ ಡಿಸೆಂಬರ್ 6 ಡೇಟ್ ಬರೆದಿಟ್ಟುಕೊಳ್ಳಿ. ಈದ್ಗಾ ಮೈದಾನ ಗೋಡೆ ನೆಲಸಮ ಆಗುವುದು ಖಚಿತ ಎಂದು ಭಾಸ್ಕರನ್ ಹೇಳಿಕೆ ನೀಡಿದ್ದಾರೆ ಎಂದು ಪಿಎಸ್ಐ ನಾಗೇಂದ್ರ ದೂರು ದಾಖಲಿಸಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.