ಪಬ್, ಬಾರ್ ನಿಗದಿತ ಸಮಯದಲ್ಲಿ ಬಂದ್ ಮತ್ತು ಅಪ್ರಾಪ್ತರಿಗೆ ಪ್ರವೇಶ ನಿಷೇಧ; ಬೆಂಗಳೂರು ಪೊಲೀಸರಿಂದ ಆದೇಶ
ಬಾರ್ ಮತ್ತು ಪಬ್ಗಳನ್ನು ನಿಗದಿತ ಸಮಯದಲ್ಲಿ ಬಂದ್ ಮಾಡಬೇಕು ಮತ್ತು ಅಪ್ರಾಪ್ತರಿಗೆ ಪ್ರವೇಶ ನಿಷೇಧಿಸಿ ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ಬಾರ್ (Bar) ಮತ್ತು ಪಬ್ಗಳನ್ನು (Pub) ನಿಗದಿತ ಸಮಯದಲ್ಲಿ ಬಂದ್ ಮಾಡಬೇಕು ಮತ್ತು ಅಪ್ರಾಪ್ತರಿಗೆ ಪ್ರವೇಶ ನಿಷೇಧಿಸಿ ಬೆಂಗಳೂರು ಪೊಲೀಸರು (Bengaluru Police) ಆದೇಶ ಹೊರಡಿಸಿದ್ದಾರೆ. ಬಾರ್ ಮತ್ತು ಪಬ್ ಮಾಲಿಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತರಿಗೆ ಪ್ರವೇಶ ನೀಡಿದ್ದ ಪಬ್ ಮತ್ತು ಬಾರ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರತಿನಿತ್ಯ ಎಲ್ಲಾ ಪಬ್ ಮತ್ತು ಬಾರ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ಕೇಂದ್ರ ವಿಭಾಗದ 9 ಪಬ್ ಅಂಡ್ ಬಾರ್ ಮೇಲೆ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಪೂರ್ವ ವಿಭಾಗದಲ್ಲಿ 79 ಪಬ್ ಮತ್ತು ಬಾರ್ಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಮಾಡಲಾಗಿದೆ. ಉತ್ತರ ವಿಭಾಗದಲ್ಲಿ ಒಟ್ಟು 3 ಪ್ರಕರಣ ದಾಖಲಾಗಿದೆ. ಅಗ್ನೇಯ ವಿಭಾಗದಲ್ಲಿ ನಿಯಮ ಉಲ್ಲಂಘಿಸಿದ 2 ಪಬ್ ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ.
ದಕ್ಷಿಣ ವಿಭಾಗದ 2 ಪಬ್ ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ. ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುತ್ತಿದ್ದ ಬಾರ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಅಪ್ರಾಪ್ತರನ್ನು ಬಾರ್ಗೆ ಕರೆದು ಕೊಂಡು ಹೋದವರ ಮೇಲೂ ಅಬಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸುತ್ತಿದ್ದಾರೆ.