ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ನಿರ್ಮಾಣ, ನಿರ್ವಹಣೆ ಹೊಣೆ ಹೊತ್ತಿರುವ ಬಿಎಂಆರ್ಸಿಎಲ್ ವಿರುದ್ಧ ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ. ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಈ ಆರೋಪ ಮಾಡಿದ್ದಾರೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ನಮ್ಮ ಮೆಟ್ರೋ ಮಾರ್ಗದಲ್ಲಿ ಪಿಲ್ಲರ್ಗಳ ಸುತ್ತಲೂ ರಸ್ತೆ ಕುಸಿಯುತ್ತಿದ್ದು ಆತಂಕ ಸೃಷ್ಟಿಯಾಗಿದೆ. ನಿನ್ನೆ ಬುಧವಾರ ಬಿಬಿಎಂಪಿ ಮುಖ್ಯವಾಗಿ ಆಯುಕ್ತ ಗೌರವ್ ಗುಪ್ತಾ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಟಿವಿ9 ಗೆ ಈ ಮಾಹಿತಿ ನೀಡಿದ್ದಾರೆ.
ನಾಯಂಡಹಳ್ಳಿ-ಕೆಂಗೇರಿವರೆಗಿನ ಸುಮಾರು 8 ಕಿ.ಮೀ. ರಸ್ತೆಯು ನಮ್ಮ ಮೆಟ್ರೊ 2ನೇ ಹಂತದ ವಿಸ್ತರಣೆ ಕಾಮಗಾರಿ ಸಲುವಾಗಿ ಬಿಬಿಎಂಪಿಯಿಂದ BMRCLಗೆ ರಸ್ತೆ ಹಸ್ತಾಂತರಿಸಲಾಗಿತ್ತು. ನಮ್ಮ ಮೆಟ್ರೋ ಕಾಮಗಾರಿ ನಂತರ BMRCLನಿಂದ ರಸ್ತೆ ನಿರ್ಮಾಣಗೊಂಡಿದೆ. ಬಿಬಿಎಂಪಿಗೆ ಮತ್ತೆ ರಸ್ತೆ ಹಸ್ತಾಂತರಕ್ಕೆ BMRCLಗೆ ಕೋರಲಾಗಿತ್ತು. ಕೆಂಗೇರಿ ವಲಯದ AE ಮತ್ತು AEE ಗಳು ರಸ್ತೆ ತಪಾಸಣೆ ನಡೆಸಿ, ವರದಿ ಸಲ್ಲಿಸಿದ್ದಾರೆ. ಆಗ ಪಿಲ್ಲರ್ಗಳ ಪಕ್ಕದಲ್ಲಿ ರಸ್ತೆ ಕುಸಿತ ಕಂಡಿರುವುದು ಪತ್ತೆಯಾಗಿದೆ. ಸರಿಯಾಗಿ ರಸ್ತೆ ನಿರ್ಮಿಸದ ಕಾರಣ ಪಿಲ್ಲರ್ಗಳ ಪಕ್ಕ ಕುಸಿತ ಕಂಡುಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆರೋಪ ಮಾಡಿದ್ದಾರೆ.
ನಮ್ಮ ಮೆಟ್ರೋ ಮಾರ್ಗದ ಪಿಲ್ಲರ್ ಗಳ ಸುತ್ತಲೂ ಕಳಪೆ ಕಾಮಗಾರಿಯಿಂದ ರಸ್ತೆ ಸಿಂಕ್ ಆಗುತ್ತಿದೆ. ತಾಂತ್ರಿಕ ದೋಷಗಳಿಂದಾಗಿ ಈ ರಸ್ತೆಗಳು ಪದೇ ಪದೇ ಹದಗೆಡುತ್ತಿವೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಭಾಗಶಃ ಪಿಲ್ಲರ್ ಗಳ ಪಕ್ಕದಲ್ಲಿ ರಸ್ತೆ ಕುಸಿತವುಂಟಾಗಿದೆ. ಮೆಟ್ರೋ ಪಿಲ್ಲರ್ಗಳಿಗೂ ಧಕ್ಕೆಯಾಗುವ ಬಗ್ಗೆ ನಮ್ಮ ಮೆಟ್ರೋ ಅಧಿಕಾರಿಗಳು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ಇದನ್ನೂ ಓದಿ:
ರಾಮನಗರ, ಮಾಗಡಿ ಕಡೆಗೆ ನಮ್ಮ ಮೆಟ್ರೋ; 4ನೇ ಹಂತದಲ್ಲಿ ಬಿಡದಿಗೂ ಸಿಗಲಿದೆ ಮೆಟ್ರೋ ರೈಲು ಸಂಚಾರ ಭಾಗ್ಯ
ಇದನ್ನೂ ಓದಿ:
ಮೆಟ್ರೋ ಕಾಮಗಾರಿ ಸ್ಥಳದಲ್ಲಿ 30 ಅಡಿ ಕುಸಿದ ಮಣ್ಣು; ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ
(nayandahalli kengeri namma metro road construction of poor quality alleges bbmp)
Published On - 10:40 am, Thu, 21 October 21