ವಿದೇಶಕ್ಕೆ ರಫ್ತು ಮಾಡುತ್ತಿದ್ದ 3.5 ಕೆ.ಜಿ ಹ್ಯಾಶಿಶ್ ಆಯಿಲ್ ಜಪ್ತಿ, ಮೂವರು ಅರೆಸ್ಟ್
ಎರ್ನಾಕುಲಂ ಏರ್ ಕೊರಿಯರ್ನಲ್ಲಿ ಹ್ಯಾಶಿಶ್ ಪತ್ತೆಯಾಗಿತ್ತು. ಬಳಿಕ ಕೊರಿಯರ್ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಎನ್ಸಿಬಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು: ವಿದೇಶಕ್ಕೆ ಹ್ಯಾಶಿಶ್ ಆಯಿಲ್ ರಫ್ತು ಮಾಡುತ್ತಿದ್ದ ಮೂವರನ್ನು ಎನ್ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಬಹ್ರೇನ್‌ಗೆ ಕಳಿಸುತ್ತಿದ್ದ 3.5 ಕೆ.ಜಿ ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಎರ್ನಾಕುಲಂ ಏರ್ ಕೊರಿಯರ್ನಲ್ಲಿ ಹ್ಯಾಶಿಶ್ ಪತ್ತೆಯಾಗಿತ್ತು. ಬಳಿಕ ಕೊರಿಯರ್ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಎನ್ಸಿಬಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಇನ್ನು ಬಂಧಿತ ವ್ಯಕ್ತಿ ಈ ಹಿಂದೆ ಬಹ್ರೇನ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಶಿಫ್ಟ್ ಆಗಿ ಈ ದಂಧೆಯಲ್ಲಿ ತೊಡಗಿಕೊಂಡಿದ್ದ ಎಂಬುವುದು ತಿಳಿದು ಬಂದಿದೆ. ಹಾಗೂ ಬಂಧಿತ ವ್ಯಕ್ತಿ ಮಾಹಿತಿ ಮೇರೆಗೆ ಮತ್ತೋರ್ವನ ಬಂಧನವಾಗಿದೆ. ಕೊಚ್ಚಿ NCBಯಿಂದ ಕಾಸರಗೋಡಿನಲ್ಲಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ. ಈ ರೀತಿ ವಿದೇಶಕ್ಕೆ ಹ್ಯಾಶಿಶ್ ಆಯಿಲ್ ರಫ್ತು ಮಾಡುತ್ತಿದ್ದ ಮೂವರನ್ನು ಎನ್ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಇನ್ನು ಮತ್ತೊಂದೆಡೆ ಆಸ್ಟ್ರೇಲಿಯಾಗೆ ಕಳಿಸುತ್ತಿದ್ದ 16 ಕೆ.ಜಿ ಸ್ಯೂಡೋಪೆಡ್ರೈನ್ ವಶಕ್ಕೆ ಪಡೆಯಲಾಗಿದೆ. ಚೆನ್ನೈ ಇಂಟರ್ನ್ಯಾಷನಲ್ ಏರ್ ಕಾರ್ಗೋನಲ್ಲಿ ಸ್ಯೂಡೋಪೆಡ್ರೈನ್ ಜಪ್ತಿ ಮಾಡಲಾಗಿದೆ. ಚೆನ್ನೈ NCBಯಿಂದ ಕೊರಿಯರ್ ಕಳಿಸುತ್ತಿದ್ದ ಓರ್ವನ ಸೆರೆ ಹಿಡಿಯಲಾಗಿದೆ. ಆತನ ಮಾಹಿತಿ ಮೇರೆಗೆ ಆಸ್ಟ್ರೇಲಿಯಾ ಅಧಿಕಾರಿಗಳು ಕಾಱಚರಣೆ ನಡೆಸಿ ಆಸ್ಟ್ರೇಲಿಯಾಗೆ ಕಳಿಸಲಾಗಿದ್ದ 4 ಕೆ.ಜಿ ಸ್ಯೂಡೋಪೆಡ್ರೈನ್ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಕೋರ್ಟ್ಗೆ 3 ಬಾರಿ ಗೈರು; ಶಾಸಕ ಸಾ ರಾ ಮಹೇಶ್ಗೆ ಸಮನ್ಸ್