ಹಣ ಮಾಡೋಕೆ ಕಳ್ಳತನಕ್ಕಿಳಿದ ಒಂದೇ ಏರಿಯಾದ ಅಕ್ಕಪಕ್ಕದ ಮನೆಯವರು, ಕೊನೆಗೂ ಪೊಲೀಸ್ರಿಗೆ ಸಿಕ್ಕಿಬಿದ್ರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 25, 2023 | 7:48 AM

ಇತ್ತೀಚೆಗೆ ಮಹಾನಗರದಲ್ಲಿ ಕಳ್ಳತನ, ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸರು ಕೂಡ ಫುಲ್​ ಕೂಡ ಆ್ಯಕ್ಟೀವ್​ ಆಗಿದ್ದಾರೆ. ಅದರಂತೆ ಒಂದೇ ಏರಿಯಾದ ಅಕ್ಕ ಪಕ್ಕದ ಮನೆಯವರೆಲ್ಲಾ ಸೇರಿ ಕದಿಯುವುದನ್ನೆ ತಮ್ಮ ಕೆಲಸ ಮಾಡಿಕೊಂಡಿದ್ದ 8 ಜನ ಕಳ್ಳರನ್ನ ಇದೀಗ ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.

ಹಣ ಮಾಡೋಕೆ ಕಳ್ಳತನಕ್ಕಿಳಿದ ಒಂದೇ ಏರಿಯಾದ ಅಕ್ಕಪಕ್ಕದ ಮನೆಯವರು, ಕೊನೆಗೂ ಪೊಲೀಸ್ರಿಗೆ ಸಿಕ್ಕಿಬಿದ್ರು
ಆರೋಪಿಗಳು
Follow us on

ಬೆಂಗಳೂರು, ಜು.25: ಇತ್ತೀಚೆಗೆ ಮಹಾನಗರದಲ್ಲಿ ಕಳ್ಳತನ(Theft), ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸರು ಕೂಡ ಫುಲ್​ ಕೂಡ ಆ್ಯಕ್ಟೀವ್​ ಆಗಿದ್ದಾರೆ. ಅದರಂತೆ ಇಲ್ಲೊಂದು ಗ್ಯಾಂಗ್​ ಕಾಯಕವೇ ಕಳ್ಳತನ ಮಾಡುವುದು. ಹೌದು, ಒಂದೇ ಏರಿಯಾದ ಅಕ್ಕ ಪಕ್ಕದ ಮನೆಯವರೆಲ್ಲಾ ಸೇರಿ, ಕದಿಯುವುದನ್ನೆ ತಮ್ಮ ಕೆಲಸ ಮಾಡಿಕೊಂಡಿದ್ದ 8 ಜನರ ಗ್ಯಾಂಗ್​ನ್ನ ಇದೀಗ ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ. ಕದರಿ ವೇಲು, ಕನ್ಯಾಕುಮಾರ್, ಮಹೇಶ್, ಸುಂದರ್ ರಾಜ್, ಸಲೀಂ ಎಂಬುವವರು ಬಂಧಿತ ಆರೋಪಿಗಳು. ಒಂದು ಕಾಲದಲ್ಲಿ ಅಕ್ಕಪಕ್ಕದ ಮನೆಯ ಗೆಳೆಯರಾಗಿದ್ದ ಇವರು, ಕಳ್ಳತನಕ್ಕೀಳಿದ ಬಳಿಕ ಎಲ್ಲಾ ಒಂದೇ ಕುಟುಂಬದವರಾಗಿ, ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದರು. ಇದೀಗ ಹಲವು ವರ್ಷದಿಂದ ಆ್ಯಕ್ಟೀವ್ ಇದ್ದ ಗ್ಯಾಂಗ್ ಕೊನೆಗೂ ಪೊಲೀಸರಿಗೆ ಲಾಕ್ ಆಗಿದ್ದಾರೆ.

ಪತ್ನಿ ಚಿಕಿತ್ಸೆಗೆಂದು ಹಣ ತಗೆದುಕೊಂಡು ಹೋಗುತ್ತಿದ್ದವನ ಪಿಕ್​ ಪಾಕೇಟ್​ ಮಾಡಿ ಲಾಕ್​ ಆದ ಗ್ಯಾಂಗ್​

ಇನ್ನು ನಗರದಲ್ಲಿ ಹಲವು ವರ್ಷಗಳಿಂದ ಫುಲ್​ ಆಕ್ಟೀವ್​​ ಆಗಿದ್ದ ಗ್ಯಾಂಗ್​. ಪತ್ನಿ ಚಿಕಿತ್ಸೆಗೆಂದು ಬಸ್​ನಲ್ಲಿ ಹಣ ತೆಗೆದುಕೊಂಡು ಹೊಗುತಿದ್ದವನ ಪಿಕ್ ಪಾಕೇಟ್ ಮಾಡಿದ್ದರು. ಜೇಬಿನಲ್ಲಿದ್ದ ಬರೊಬ್ಬರಿ 1 ಲಕ್ಷ ನಗದು, ಪತ್ನಿ ಮಾಂಗಲ್ಯ ಸರ ಸಹಿತ 30ಗ್ರಾಂ ಚಿನ್ನವನ್ನ ಕದ್ದಿದ್ದರು. ಈ ಬಗ್ಗೆ ವ್ಯಕ್ತಿಯೋರ್ವ ಎಸ್ ಆರ್ ನಗರದಲ್ಲಿ ದೂರು ನೀಡಿದ್ದರು. ಬಳಿಕ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ ಪೊಲೀಸರು, 150 ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾವನ್ನ ಪರಿಶೀಲಿಸಿದ್ದರು. ಈ ವೇಳೆ ಖತರ್ನಾಕ್ ಗ್ಯಾಂಗ್ ಅಸಲಿ ಕಹಾನಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:10ನೇ ವಯಸ್ಸಿಗೆ ಕಳ್ಳತನಕ್ಕೆ ಎಂಟ್ರಿ; ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಖದೀಮ ಅರೆಸ್ಟ್​

ರಾತ್ರಿ ವೇಳೆ ಮಾತ್ರ ಎಂಟ್ರಿ ಕೊಡುತ್ತೆ ಈ ಗ್ಯಾಂಗ್

8 ಜನ ಸದಸ್ಯರಿರುವ ಈ ಗ್ಯಾಂಗ್, ನೈಟ್ ಟೈಂ ನಲ್ಲಿ ಮಾತ್ರ ಎಂಟ್ರಿ ಕೊಡುತ್ತಿತ್ತು. ಜೊತೆಗೆ ಎಲ್ಲರೂ ಒಂದೊಂದು ಏರಿಯಾ ಫಿಕ್ಸ್ ಮಾಡಿಕೊಂಡಿದ್ದರು. ಅದರಂತೆ ಕಲಾಸಿಪಾಳ್ಯದ ದೇವಸ್ಥಾನ ಬಳಿ ಸೇರಿ, ಬಳಿಕ ಮೆಜೆಸ್ಟಿಕ್, ಮಾರ್ಕೆಟ್, ಕಾರ್ಪೊರೇಷನ್​ನಂತೆ ಇನ್ನಿತರ ಸ್ಥಳಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೂ ಈ ಕೃತ್ಯ ಎಸಗಲಾಗುತ್ತಿತ್ತು. ಇನ್ನು ಇವರು ಹಣ, ಚಿನ್ನ ದೋಚಿ, ಚಿನ್ನದ ಜೊತೆಯಿದ್ದ ಮಾಂಗಲ್ಯವನ್ನ ಮಾರದೇ ತಮಿಳುನಾಡಿನ ದೇವಸ್ಥಾನದ ಹುಂಡಿಗೆ ಹಾಕಿದ್ದರಂತೆ, ಬಂಧನದ ಬಳಿಕ ವಿಚಾರಣೆ ವೇಳೆ ಆರೋಪಿಗಳ ಹೇಳಿದ್ದಾರೆ. ಸದ್ಯ ಐವರನ್ನು ಬಂಧಿಸಿದ ಎಸ್ ಆರ್ ನಗರ ಪೊಲೀಸರು, ಪ್ರಮುಖ ಆರೋಪಿ ಸಹಿತ ಉಳಿದವರಿಗಾಗಿ ಹುಡುಕಾಟ ಆರಂಭವಾಗಿದೆ. ಬಂಧಿತರಿಂದ 70 ಸಾವಿರ ನಗದು, 30 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Tue, 25 July 23