ಬೆಂಗಳೂರು: ನಗರದಲ್ಲಿ ನೇಪಾಳ ಮೂಲದ (Nepal-based) ಕಳ್ಳರ ಕೈಚಳಕ ಮತ್ತೆ ಹೆಚ್ಚಾಗಿದ್ದು, ಮೇ 23ರಂದು ಮುಂಜಾನೆ ಅಪಾರ್ಟ್ಮೆಂಟ್ಗೆ ನುಗ್ಗಿ ಬೈಕ್ ಕಳವು ಮಾಡಿರುವಂತಹ ಘಟನೆ ಹೆಚ್ಎಎಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಲ್ಸರ್ ಬೈಕ್ ಹ್ಯಾಂಡಲ್ ಲಾಕ್ ಮುರಿದು ನೇಪಾಳಿ ಮೂಲದ ಕಳ್ಳ ಕದ್ದೊಯ್ದಿದ್ದಾನೆ. ಬೆಳಂಬೆಳಗ್ಗೆ ಕಳ್ಳತನದ ಕೈಚಳಕ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ಐಎಸ್ಎಫ್ ಪಡೆ ಸಿಬ್ಬಂದಿಗಳಾದ ಪಿಎಸ್ಐ ನಾರಾಯಾಣ್, ಪ್ರಶಾಂತ್, ನಾಗರಾಜ್ರಿಂದ ಇಬ್ಬರು ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ಏಳು ಗಂಟೆಗೆ ವೇಳೆ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮುಗಿಸಿಕೊಂಡು ಯುವತಿ ಮನೆಗೆ ಹೋಗುತ್ತಿದ್ದ ವೇಳೆ ವಿಧಾನಸೌದ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಫಾಲೋ ಮಾಡಿ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ.
ಇದನ್ನೂ ಓದಿ: Bangalore News: ಬೊಮ್ಮನಹಳ್ಳಿ; ಪೊಲೀಸರು ವಶಕ್ಕೆ ಪಡೆಯಲು ತೆರಳಿದಾಗ ನಾಲ್ಕನೇ ಮಹಡಿಯಿಂದ ನಗ್ನನಾಗಿ ಬಿದ್ದು ಆರೋಪಿ ಸಾವು
ಏಕಾ ಏಕಿ ಯುವತಿಯನ್ನ ಎಳೆದು ಕಾರಿನಲ್ಲಿ ಕೂರಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಎಸ್ಐಎಸ್ಎಫ್ ತಂಡ ಅಲರ್ಟ್ ಆಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ಯುವತಿಯನ್ನ ರಕ್ಷಿಸಿದ್ದಾರೆ. ಸದ್ಯ ಇಬ್ಬರನ್ನೂ ವಿಧಾನಸೌಧ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರನ್ನೂ ವಶಪಡೆದಿರುವ ವಿಧಾನಸೌಧ ಪೊಲೀಸರು ವಿಚಾರಣೆ ಮಾಡುತ್ತಿದ್ದು, ಯುವತಿ ಸಂಬಂಧಿಕರಿಂದಲೇ ಕಿಡ್ನಾಪ್ ಯತ್ನ ಶಂಕೆ ವ್ಯಕ್ತವಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಯುವತಿಯ ತಂದೆ ಮೃತರಾಗಿದ್ದರು. ತಂದೆಯ ಎಫ್‌ಡಿಎ ಕೆಲಸ ಮಗಳಿಗೆ ಬಂದಿತ್ತು. ಈ ವಿಚಾರಕ್ಕೆ ಯುವತಿಯ ಮೇಲೆ ಸಂಬಂಧಿಕರು ಕಣ್ಣಿಟ್ಟಿದ್ದರು. ಯುವತಿಯ ತಂದೆಯ ಎರಡನೇ ಪತ್ನಿಯ ಸೋದರ ಎಂದು ಮಾಹಿತಿ ನೀಡಲಾಗಿದೆ. ಎಫ್‌ಡಿಎ ಕೆಲಸ ಅಕ್ಕನಿಗೆ ಬರಬೇಕಿತ್ತು ಎಂದು ಕ್ಯಾತೆ ತೆಗೆಯಲಾಗಿದೆ. ಅಲ್ಲದೇ ಯುವತಿಯನ್ನ ಮದುವೆಯಾಗೋದಕ್ಕೆ ಆರೋಪಿ ಪ್ಲಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: Hasan News: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ: ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಹಲ್ಲೆಗೈದ ಆರೋಪ
ಆದರೆ ಯುವತಿಗೆ ಆರೋಪಿ ಇಷ್ಟ ಇರಲಿಲ್ಲ. ಇಂದು ವಿಧಾನಸೌಧ ಮೆಟ್ರೋ ಸ್ಟೇಷನ್ ಬಳಿ ಕಿಡ್ನಾಪ್ ಯತ್ನಿಸಿದ್ದು, ಈ ವೇಳೆ ಯುವತಿ ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಸಿಬ್ಬಂದಿ ಅಲರ್ಟ್ ಆಗಿ ಕಾರು ಅಡ್ಡ ಹಾಕಿದ್ದಾರೆ. ಕೂಡಲೇ ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:57 pm, Wed, 24 May 23