
ಬೆಂಗಳೂರು, ಡಿ.11: ಹೊಸ ವರ್ಷ (Bengaluru New Year rules) ಬರುತ್ತಿದ್ದಂತೆ ಬೆಂಗಳೂರಿನ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನಿನ್ನೆ (ಡಿ.10) ವಿವಿಧ ಇಲಾಖೆ ಜೊತೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಬಿಎ, ಅಬಕಾರಿ, ಅಗ್ನಿಶಾಮಕ, ಬಿಎಂಟಿಸಿ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ನ್ಯೂ ಇಯರ್ ಸೆಲೆಬ್ರೆಷನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಹಾಗೂ ಹೊಸ ವರ್ಷದ ದಿನ ಯಾವೆಲ್ಲ ನಿಯಮಗಳನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ಇನ್ನು ಬೆಂಗಳೂರಿನಲ್ಲಿರುವ ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಕಠಿಣ ನಿಯಮಗಳನ್ನು ಮಾಡಲಾಗಿದೆ.
ವರ್ಷಾಚರಣೆಗೆ ಪಬ್, ಹೋಟೆಲ್, ರೆಸ್ಟೋರೆಂಟ್ ಗಳಿಗೆ ಸ್ಟ್ರಿಕ್ಟ್ ರೂಲ್ಸ್ ಮಾಡಲಾಗಿದೆ. ಕೇವಲ ಒಂದು ಇಲಾಖೆಯಿಂದ ಅನುಮತಿ ಪಡೆದರೆ ಸಾಲದು, ಪೊಲೀಸ್, ಅಗ್ನಿಶಾಮಕ ಹಾಗೂ ಅಬಕಾರಿ ಈ ಮೂರು ಇಲಾಖೆಯಿಂದ ಅನುಮತಿ ಪಡೆದರೆ ಮಾತ್ರ ನ್ಯೂ ಇಯರ್ ಸೆಲೆಬ್ರೆಷನ್ಗೆ ಅವಕಾಶ ನೀಡಲಾಗುವುದು. ಒಂದು ವೇಳೆ ಈ ಮೂರರಲ್ಲಿ ಒಂದು ಇಲಾಖೆ ಅನುಮತಿ ನೀಡಲು ನಿರಾಕರಿಸಿದರೆ ಹೊಸ ವರ್ಷದ ಸಂಭ್ರಮಕ್ಕೆ ಅನುಮತಿ ಸಿಗಲ್ಲ. ಇಂದಿನಿಂದಲೇ (ಡಿ.10) ಮೂರು ಇಲಾಖೆಗಳಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಪಬ್ಗಳ ಪರಿಶೀಲನೆ ಮಾಡಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಡಿಸಿಪಿಗಳು, ಅಬಕಾರಿ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳಿಂದ ಪಬ್, ಹೋಟೆಲ್, ರೆಸ್ಟೋರೆಂಟ್ ಪರಿಶೀಲನೆ ಮಾಡಲಾಗುವುದು. ನಗರದ ಎಲ್ಲಾ ಪಬ್ ಹಾಗೂ ಪಾರ್ಟಿ ಸ್ಥಳಗಳಲ್ಲಿ ಪರಿಶೀಲನೆ ಮಾಡಲು ಆದೇಶವನ್ನು ನೀಡಲಾಗಿದೆ. ಈ ವೇಳೆ ಅಧಿಕಾರಿಗಳಿಗೆ ಪಬ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ತೊಂದರೆ ಅಥವಾ ಸಮಸ್ಯೆ ಕಂಡು ಬಂದರೆ, 10 ದಿನ ಒಳಗೆ ಈ ಸಮಸ್ಯೆಗಳನ್ನು ಮಾಲೀಕರು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಸರಿಪಡಿಸಿಕೊಳ್ಳದಿದ್ದಾರೆ, ಅವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಗೋವಾದಲ್ಲಿ ಪಬ್ನಲ್ಲಿ ನಡೆದ ಬೆಂಕಿ ದುರಂತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪಬ್ಗಳ ಫೈರ್ ಸೇಫ್ಟಿ ಬಗ್ಗೆಯೂ ಅಗ್ನಿಶಾಮಕ ಸಿಬ್ಬಂದಿಗಳು ಪರಿಶೀಲನೆ ನಡೆಸಲಿದ್ದಾರೆ. ಇದರ ಜತೆಗೆ ಪಬ್ಗಳಲ್ಲಿರುವ ಎಂಟ್ರಿ ಎಕ್ಸಿಟ್ ಡೋರ್ಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಪಬ್ಗಳಲ್ಲಿ ಫೈರ್ ಎಮರ್ಜೆನ್ಸಿ ಸಿಲಿಂಡರ್ ಅಳವಡಿಕೆ ಆಗಿದ್ಯಾ ಎಂಬುದನ್ನು ಕೂಡ ನೋಡುತ್ತಾರೆ. ಇನ್ನು ಅಂಬಕಾರಿ ಅಧಿಕಾರಿಗಳು ಕೂಡ ಪಬ್ಗಳಲ್ಲಿ ನಕಲಿ ಮದ್ಯ ಮಾರಾಟದ ಮೇಲೆಯೂ ನಿಗಾ ಇಡಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬರೋಬ್ಬರಿ 1.28 ಕೋಟಿ ವಾಹನ ನೋಂದಣಿ: 1.50 ಕೋಟಿ ವಾಹನ ಸಂಚಾರ!
ಈ ಬಾರಿ ಡ್ರಗ್ಸ್ ಮುಕ್ತ ಹೊಸ ವರ್ಷ ಆಚರಣೆ ಮಾಡಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ. ಯಾವುದೇ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಗರಕ್ಕೆ ಬರುತ್ತಿರುವ ಡ್ರಗ್ಸ್ಗಳನ್ನು ಪತ್ತೆ ಮಾಡಲಾಗಿದೆ. ಯಾವ ರೂಪದಲ್ಲೂ ಡ್ರಗ್ಸ್ ಬಳಕೆಯಾಗದಂತೆ ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ಈ ಬಾರಿ ರೂಫ್ ಟಾಪ್ ಮೇಲೆ ಪಾರ್ಟಿ ನಡೆಸಲು ಯಾವುದೇ ಅವಕಾಶವಿಲ್ಲ.ಇನ್ನು ಪಾರ್ಟಿ ವೇಳೆ ಹೆಚ್ಚು ಗ್ರಾಹಕರು ಸೇರಿ ಅನಾಹುತ ಆದ್ರೆ ಮಾಲೀಕರು ಹೊಣೆ ಮಾಡಲಾಗುವುದು. ಸೆಲಬ್ರೇಷನ್, ಡ್ಯಾನ್ಸಿಂಗ್ ಫ್ಲೋರ್ ಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ