ಬೆಂಗಳೂರು: ಹೊಸದಾಗಿ ಖರೀದಿಸಿದ ಹುಂಡೈ i20(Hyundai i20)ಕಾರಿಗೆ ಅಳವಡಿಸಲಾಗಿದ್ದ ಜಿಪಿಎಸ್ ಮೂಲಕ ಪತ್ನಿಯ ಅನೈತಿಕ ಸಂಬಂಧ(Illegal Affair) ಬೆಳಕಿಗೆ ಬಂದಿದೆ. ಹೌದು ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಪ್ರಿಯಕರನ ಜೊತೆ ನೈಟ್ ಔಟ್ ಹೋಗಿ ನಡೆಸಿದ ಚೆಲ್ಲಾಟವು ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ನಿಂದ ಗೊತ್ತಾಗಿದೆ. 2014 ರಲ್ಲಿ ನಿಖಿಲ್ ಅಂಗಡಿ ಮತ್ತು ಪ್ರಿಯಾಂಕಾ ಮದುವೆಯಾಗಿದ್ದರು. ದಂಪತಿಗೆ ಮುದ್ದಾದ 6 ವರ್ಷದ ಮಗು ಇದೆ. ಮುದೊಂದು ದಿನ ಪ್ರಿಯಾಂಕಾಳಿಗೆ ಪವನ್ ಎಂಬಾತನ ಪರಿಚಯವಾಗಿದೆ. ಈ ಪರಿಚಯ ಅಡ್ಡ ದಾರಿಗೆ ತಿರುಗಿದ್ದು, ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿದೆ. ಇದನ್ನ ತಿಳಿದ ಪತಿ ಇದೀಗ ಪೊಲೀಸ್ ಮೆಟ್ಟಿಲೇರಿದ್ದಾನೆ.
ಪತ್ನಿಯ ಅನೈತಿಕ ಸಂಬಂಧ ಬಯಲು ಮಾಡಿದ ಹುಂಡೈ i20 ಕಾರು
ಹೌದು ಹೊಸದಾಗಿ ತೆಗೆದುಕೊಂಡು ಕಾರಿನಿಂದ ಪತ್ನಿಯ ಕಳ್ಳಾಟ ಬಯಲಾಗಿದೆ. 2020 ರಲ್ಲಿ ಪತಿ ನಿಖಿಲ್ ಅಂಗಡಿ ಎಂಬುವವರು ಹೊಸದಾಗಿ ಹುಂಡೈ i20 ಕಾರು ಖರೀದಿಸಿದ್ದರು. ಇದಕ್ಕೆ ಜಿಪಿಎಸ್ ಅಳವಡಿಕೆಯಾಗಿತ್ತು. ಹೀಗೆ ಒಂದು ದಿನ ಗಂಡ ರಾತ್ರಿ ಪಾಳಿ ಕೆಲಸಕ್ಕೆ ಹೋದಾಗ ಪತ್ನಿಗೆ ಜಿಪಿಎಸ್ ಇರುವುದು ಗೊತ್ತಾಗದೆ ಕಾರು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಏರ್ಪೋರ್ಟ್ ಬಿ.ಇ.ಎಲ್ ಸರ್ಕಲ್ ಬಳಿ ಇರುವ ಲಾಡ್ಜ್ಗೆ ಬಂದಿದ್ದ ಕಾರು, ಅಲ್ಲಿದ್ದ ಖಾಸಗಿ ಹೊಟೇಲ್ನ ಮುಂದೆ ಬೆಳಗಿನ ಜಾವ 5 ಗಂಟೆಯವರೆಗೂ ಕಾರು ಪಾರ್ಕ್ ಆಗಿತ್ತು. ಇವೆಲ್ಲವನ್ನು ಪತಿ ಜಿಪಿಎಸ್ ಮುಖಾಂತರ ಮೊಬೈಲ್ನಲ್ಲಿ ತಿಳಿದುಕೊಂಡಿದ್ದಾರೆ.
ಇದನ್ನೂ ಓದಿ:Bengaluru Habba: ಮಾ. 25, 26ರಂದು ನಡೆಯಲಿರುವ ಬೆಂಗಳೂರು ಹಬ್ಬದ ಬಗ್ಗೆ ನೀವು ತಿಳಿಯಲೇಬೇಕಾದ 5 ಸಂಗತಿಗಳು
ಬಳಿಕ ಅನುಮಾನಗೊಂಡು ಹೊಟೇಲ್ನಲ್ಲಿ ವಿಚಾರಿಸಿದಾಗ ಪತ್ನಿಯ ಪ್ರಿಯಕರ ಹಾಗು ಪತ್ನಿ ಇಬ್ಬರು ಓಟರ್ ಐಡಿ ಒಂದೇ ರೂಂಗೆ ಬುಕ್ ಆಗಿತ್ತು. ಇದನ್ನ ಪ್ರಶ್ನಿಸಲು ಹೋದಾಗ ಪತ್ನಿ ಪ್ರಿಯಾಂಕ ಜೀವ ಬೆದರಿಕೆ ಹಾಕಿದ್ದಾರಂತೆ. ನಂತರ ತನ್ನನ್ನು ಪತ್ನಿ ವಂಚಿಸಿದ್ದು, ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ನ್ಯಾಯಕ್ಕಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Sat, 25 March 23