Whitefield Metro Station: ನಮ್ಮ ಮೆಟ್ರೋದಲ್ಲಿ ನಮ್ಮ ಮೋದಿ; ವೈಟ್‌ ಫೀಲ್ಡ್‌ ಮೆಟ್ರೋಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಸಂವಾದ

PM Modi Inaugurates Whitefield Metro Station: ಪ್ರಧಾನಿ ನರೇಂದ್ರ ಮೋದಿಯವರು ವೈಟ್‌ಫೀಲ್ಡ್‌- ಕೆಆರ್‌ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿದ್ದಾರೆ. ಸುಮಾರು 13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು ಇದರಿಂದ ಐಟಿಬಿಟಿ ನೌಕರರಿಗೆ ಹೆಚ್ಚಿನ ಖುಷಿಯಾಗಿದೆ.

ಆಯೇಷಾ ಬಾನು
|

Updated on:Mar 25, 2023 | 2:15 PM

ಬಹು ನಿರೀಕ್ಷಿತ ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಸಂಚಾರಕ್ಕೆ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಸ್ವತಃ ಪ್ರಧಾನಿ ಮೋದಿಯೇ ಬೆಂಗಳೂರಿಗೆ ಆಗಮಿಸಿ ಯೋಜನೆ ಲೋಕಾರ್ಪಣೆ ಗೊಳಿಸಿದ್ದಾರೆ.

1 / 6
ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಕೂಡ ಪ್ರಯಾಣಿಸಿದರು. ಈ ವೇಳೆ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.

2 / 6
ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು.  13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್‌.ಪುರ, ವೈಟ್‌ ಫೀಲ್ಡ್‌ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಅಲ್ಪಮಟ್ಟಿಗೆ ನಿವಾರಣೆಯಾಗಲಿದೆ.

3 / 6
ವೈಟ್​​ಫೀಲ್ಡ್​​ನಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದ್ರೆ ಕೆ.ಆರ್.ಪುರಂ ನಿಲ್ದಾಣ ಇನ್ನೂ ಅಪೂರ್ಣವಾಗಿದೆ. ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ.

4 / 6
ಅಲ್ಲದೆ ಕೆ.ಆರ್.ಪುರದಿಂದ ಬೈಯ್ಯಪ್ಪನಹಳ್ಳಿಗೆ ಇನ್ನೂ ಕನೆಕ್ಟಿವಿಟಿ ಕಲ್ಪಿಸಿಲ್ಲ. ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ ಟ್ರೀಪಾರ್ಕ್‌, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಾಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್‌ ಪಾಳ್ಯ, ಸಿಂಗಯ್ಯನಪಾಳ್ಯ, ಕೆಆರ್‌ಪುರದಲ್ಲಿ ಮೆಟ್ರೋ ನಿಲ್ದಾಣಗಳಿವೆ. 

5 / 6
ಕೆಆರ್‌ಪುರ, ವೈಟ್‌ಫೀಲ್ಡ್‌ ನಿಲ್ದಾಣದಿಂದ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಇದ್ದು ಕೆಆರ್‌ಪುರ ಮತ್ತು ವೈಟ್‌ಫೀಲ್ಡ್‌ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‌ ಪಾರ್ಕಿಂಗ್‌ಗೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.

6 / 6

Published On - 2:15 pm, Sat, 25 March 23

Follow us