ಮತಾಂತರಗೊಂಡು ಐಸಿಸ್ ಸೇರಲು ಹೊರಟಿದ್ದವನನ್ನು ಬಂಧಿಸಿದ ಎನ್ಐಎ, ದೆಹಲಿಯಲ್ಲಿ ವಿಚಾರಣೆ

| Updated By: ಆಯೇಷಾ ಬಾನು

Updated on: Aug 11, 2021 | 9:54 AM

ಅಫ್ಘಾನಿಸ್ತಾನ ಮಾರ್ಗವಾಗಿ ಸಿರಿಯಾಗೆ ತೆರಳಲು ಸಿದ್ದನಾಗಿದ್ದ ಮಾದೇಶ್ ಎನ್ಐಎ ಬಲೆಗೆ ಬಿದ್ದಿದ್ದಾನೆ. ಮಾದೇಶ್ ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ತನ್ನ ಕಾರ್ಯಚಟುವಟಿಕೆ ನಡೆಸಿದ್ದ. ಸುಮಾರು ಮೂರು ತಿಂಗಳ ಕಾಲ ಮಾದೇಶ್ಗಾಗಿ ಎನ್ಐಎ ಕಾದು ಕುಳಿತಿದ್ದು ಈಗ ಮಾದೇಶ್ ಬಂಧಿಯಾಗಿದ್ದಾನೆ.

ಮತಾಂತರಗೊಂಡು ಐಸಿಸ್ ಸೇರಲು ಹೊರಟಿದ್ದವನನ್ನು ಬಂಧಿಸಿದ ಎನ್ಐಎ, ದೆಹಲಿಯಲ್ಲಿ ವಿಚಾರಣೆ
ಎನ್ಐಎ
Follow us on

ಬೆಂಗಳೂರು: ಮತಾಂತರಗೊಂಡು ಐಸಿಸ್ ಸೇರಲು ಹೊರಟವನನ್ನು ಎನ್ಐಎ ಹೆಡೆಮುರಿ ಕಟ್ಟಿದೆ. ರೆಡಿ ಫಾರ್ ಆ್ಯಕ್ಷನ್ ಎಂಬ ಯೋಜನೆಯಡಿ ಮತಾಂತರಗೊಳ್ಳಲು ಸಿದ್ಧನಾಗಿದ್ದ ಮಾದೇಶ್ ವೆಂಕಟೇಶ್ ಪೆರುಮಾಳ್ ಎಂಬುವವರನ್ನು ಎನ್ಐಎ ಬಂಧಿಸಿದೆ.

ಅಫ್ಘಾನಿಸ್ತಾನ ಮಾರ್ಗವಾಗಿ ಸಿರಿಯಾಗೆ ತೆರಳಲು ಸಿದ್ದನಾಗಿದ್ದ ಮಾದೇಶ್ ಎನ್ಐಎ ಬಲೆಗೆ ಬಿದ್ದಿದ್ದಾನೆ. ಮಾದೇಶ್ ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ತನ್ನ ಕಾರ್ಯಚಟುವಟಿಕೆ ನಡೆಸಿದ್ದ. ಸುಮಾರು ಮೂರು ತಿಂಗಳ ಕಾಲ ಮಾದೇಶ್ಗಾಗಿ ಎನ್ಐಎ ಕಾದು ಕುಳಿತಿದ್ದು ಈಗ ಮಾದೇಶ್ ಬಂಧಿಯಾಗಿದ್ದಾನೆ.

ಐಸಿಸ್ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ ಮಾದೇಶ್. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಅಲಿ ಮೌವೀಯಾ ಆಗಿ ಬದಲಾಗಿದ್ದ. ಮನೆಯಲ್ಲಿ ಕುಳಿತು ಐಸಿಸ್ ಸೇರ್ಪಡೆಗೆ ಉತ್ಸುಕನಾಗಿದ್ದ. ಐಸಿಸ್ ಜೊತೆ ಸಂಪರ್ಕ ಸಾಧಿಸುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ. ಸದ್ಯ ಐಸಿಸ್ ಸೇರಲು ಬಂದ ಆಹ್ವಾನದಲ್ಲಿ ತನ್ನ ಒಂದು ಚಾಟ್ ನಲ್ಲಿ ರೆಡಿ ಫಾರ್ ಆ್ಯಕ್ಷನ್ ಎಂದು ಸಂದೇಶ ಕಳಿಸಿದ್ದ. ತಕ್ಷಣ ಅಲರ್ಟ್ ಆದ ಎನ್ಐಎ ಬೆಂಗಳೂರಿನ ವೈಟ್ ಫೀಲ್ಡ್ ನ ಮಾದೇಶ್ ಮನೆ ಮೇಲೆ ದಾಳಿ ಮಾಡಿತ್ತು. ಆಗಸ್ಟ್ 4ರಂದು ಮಾದೇಶ್ ಶಂಕರ್ ಅಲಿಯಾಸ್ ಅಲಿ ಮೌವಿಯಾನನ್ನ ಬಂಧಿಸಿದ್ರು. ಸದ್ಯ ಈಗ ದೆಹಲಿಯ ಎನ್ಐಎ ಕಚೇರಿಯಲ್ಲಿ ಮಾದೇಶ್ ಅಲಿಯಾಸ್ ಅಲಿ ಮೌವೀಯಾನ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ISIS Link: ಇದ್ದಿನಬ್ಬ ಪುತ್ರ ಬಿ.ಎಂ.ಭಾಷಾರ ಸೊಸೆ ಎನ್‌ಐಎ ವಶಕ್ಕೆ?