Corona 3rd Wave: ಬೆಂಗಳೂರಿನಲ್ಲಿ ಶುರುವಾಯ್ತು ಕೊರೊನಾ 3ನೇ ಅಲೆ ಭೀತಿ, ದಿನಕ್ಕೆ 50-60 ಪಾಸಿಟಿವ್ ಮಕ್ಕಳು ಪತ್ತೆ
ಕಳೆದ 4 ದಿನದಲ್ಲಿ 400 ಮಕ್ಕಳಿಗೆ ಕೊರೊನಾ ಧೃಡಪಟ್ಟಿದೆ. 3ನೇ ಅಲೆ ಆತಂಕದ ಮಧ್ಯೆ ಮಕ್ಕಳಿಗೆ ಸೋಂಕು ಪತ್ತೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲೂ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ದಿಲ್ಲದೆ ಮಕ್ಕಳಿಗೆ ಕೊರೊನಾ(Corona 3rd Wave) ಅಟ್ಯಾಕ್ ಮಾಡುತ್ತಿದೆ. ಪ್ರತಿದಿನ ಪತ್ತೆಯಾಗುತ್ತಿರುವ ಕೊರೊನಾ(Coronavirus) ಸೋಂಕಿತರ ಪೈಕಿ ಶೇಕಡಾ 12ರಷ್ಟು ಮಕ್ಕಳು ಪತ್ತೆಯಾಗುತ್ತಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಕೊರೊನಾ(Corona in Children) ಸೋಂಕು ದೃಢವಾಗುತ್ತಿದೆ. ಪ್ರತಿದಿನ 50-60 ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಂಡು ಬರುತ್ತಿದೆ.
3ನೇ ಅಲೆ ಆತಂಕದ ಮಧ್ಯೆ ಮಕ್ಕಳಿಗೆ ಸೋಂಕು ಪತ್ತೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲೂ ಕೊರೊನಾ ಲಕ್ಷಣಗಳು ಪತ್ತೆಯಾಗಿವೆ. ಇಂಥ ಸಮಯದಲ್ಲಿ ಶಾಲೆ ಆರಂಭ ಬೇಡವೆಂದು ತಜ್ಞರು ಸಲಹೆ ನೀಡಿದ್ದಾರೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಕೊರೊನಾ 3ನೇ ಅಲೆಗೆ ಬ್ರೇಕ್ ಹಾಕೋಕೆ ಭರ್ಜರಿ ಸಿದ್ಧತೆ ಹುಬ್ಬಳ್ಳಿಯಲ್ಲಿ ಕೊರೊನಾ 3ನೇ ಅಲೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಬಂದ ಕೊರೊನಾ ಎರಡು ಅಲೆಗಳು ಕೊಡ ಭೀಕರ ಪರಿಸ್ಥಿಯನ್ನ ತಂದಿದ್ವು. ಸಾವಿರಾರು ಜನ ಪ್ರಾಣ ಬಿಟ್ಟು, ಲಕ್ಷಾಂತರ ಜನ ಆಸ್ಪತ್ರೆಯಲ್ಲಿ ನರಳಾಡಿದ್ದಾರೆ. ಈಗ 3ನೇ ಬರುವ ಸೂಚನೆ ಸಿಕ್ಕಿದೆ. ಆದ್ರೆ ಒಂದು ಮತ್ತು ಎರಡನೇ ಅಲೆಯಲ್ಲಿ ಆದ ಅನಾಹುತ ಈಗ ಆಗಬಾರದು ಅಂತ ಹುಬ್ಬಳ್ಳಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕಳೆದ ಬಾರಿ ಬೆಡ್, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಮಸ್ಯೆ ಎದುರಿಸಿದ್ದ ಜಿಲ್ಲಾಡಳಿತ ಈ ಸಲ 500ಕ್ಕೂ ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲ ಪ್ರಾರಂಭಿಕ ಹಂತದಲ್ಲೇ ಮ್ಯಾನ್ ಪವರ್ ಹಾಗೂ ಮೂಲ ಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಜೊತೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯಲ್ಲಿ ಔಷಧಿ, ಕೊವಿಡ್‌ಗೆ ಬೇಕಾದ ಉಪಕರಣಗಳನ್ನ ರೆಡಿಯಾಗಿ ಇರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ತಜ್ಞ ವೈದ್ಯರನ್ನು ಹೆಚ್ಚುವರಿ ನೇಮಿಸಿಕೊಳ್ಳುವ ಪ್ರಕ್ರಿಯೆ ಕೂಡಾ ನಡೆದಿದೆ.
ಜಿಲ್ಲೆಯಲ್ಲಿ ಕೊರೊನಾ ಈಗ ಕಮ್ಮಿಯಾಗಿದೆ. ದಿನಕ್ಕೆ 8-10 ಕೊವಿಡ್ ಕೇಸ್ ಮಾತ್ರ ಬರುತ್ತಿದೆ. ಆದ್ರೆ ಗಡಿ ಜಿಲ್ಲೆಗಳಲ್ಲಿ ಕೊವಿಡ್ ಕೇಸ್ ಹೆಚ್ಚಾಗಿದ್ದು, ಮೂರನೇ ಅಲೆ ಬರುವ ಸಾಧ್ಯತೆಯಿದೆ. ಹೀಗಾಗಿ ಈಗಾಗಲೇ 3ನೇ ಅಲೆ ಎದುರಿಸಲು ಆಸ್ಪತ್ರೆಗಳಲ್ಲಿ ಪೂರ್ವಸಿದ್ಧತೆ ನಡೆಸಲಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್ ಅಸ್ತಿತ್ವಕ್ಕೆ ತರಲಾಗಿದೆ. ಕಿಮ್ಸ್, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ತರದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಗಣಿನಾಡಲ್ಲಿ ಕೊರೊನಾ 3ನೇ ಅಲೆ ಆತಂಕ, ಸೋಂಕಿತರ ಸಂಖ್ಯೆ 1 ಲಕ್ಷಕ್ಕೇರೋ ಬಗ್ಗೆ ತಜ್ಞರಿಂದ ವಾರ್ನಿಂಗ್
Published On - 7:21 am, Wed, 11 August 21