ವಾಣಿಜ್ಯ ಉದ್ದೇಶ ವಾಹನಗಳಿಂದ ಕೋಟ್ಯಾಂತರ ರೂಪಾಯಿ ದಂಡ ಬಾಕಿಯಿದೆ.. ಅಂತಹ ವಾಹನ ಮಾಲೀಕರು ದಂಡ ಕಟ್ಟದೇ ಇರುವುದರಿಂದ ಸಂಚಾರಿ ಪೊಲೀಸರು ಅಸಹಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರುವಂತೆ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮೂರು ನಾಲ್ಕು ಬಾರಿ ಸಭೆ ನಡೆಸಿದ್ದಾರೆ. ತತ್ಫಲವಾಗಿ ರಾಜ್ಯ ಸಾರಿಗೆ ಇಲಾಖೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಆದರೆ ವಾಸ್ತವದ ನೆಲೆಗಟ್ಟಿನಲ್ಲಿ ಯಲೋ ಬೋರ್ಡ್ ಚಾಲಕರು ಅಸಲಿಗೆ ಎಫ್ ಸಿ (Fitness Certificate) ಮಾಡಿಸುವುದಕ್ಕೇ ಪರದಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ RTO ಮತ್ತು ಪೊಲೀಸ್ ಇಲಾಖೆ ಜಾರಿಗೆ ತರಲು ಆಲೋಚಿಸುತ್ತಿರುವ ಎನ್ಓಸಿ (NOC) ನೀತಿ ಸರಿಯಿಲ್ಲ. ಕೂಡಲೇ ಅದನ್ನು ಕೈ ಬಿಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅಂದಹಾಗೆ ರಾಜ್ಯದಲ್ಲಿ 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿವೆ.
ಯಾಕೆ ಈ ನಿಮಯ ಅಂತ ನೋಡೋದಾದ್ರೆ
ಒಟ್ನಲ್ಲಿ ಯಲ್ಲೋ ಬೋರ್ಡ್ ವಾಹನ ಮಾಲೀಕರು ನೂರಾರು ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಎಫ್ ಸಿ ಗೆ ಟ್ರಾಫಿಕ್ ಪೊಲೀಸ್ ಫೈನ್ ಲೆಟರ್ ಕಡ್ಡಾಯ ಮಾಡಿ ಎಂದು ಸಾರಿಗೆ ಇಲಾಖೆ ಮೇಲೆ ಇತ್ತ ಟ್ರಾಫಿಕ್ ಪೊಲೀಸರು ಒತ್ತಡ ಹಾಕ್ತಿದಾರೆ. ಆದರೆ ಯಲ್ಲೋ ಬೋರ್ಡ್ ವಾಹನ ಮಾಲೀಕರು ಮಾತ್ರ ಇದು ಸರಿಯಲ್ಲ. ದಂಡ ಪಾವತಿ ಮಾಡಿದ್ರೆ ಮಾತ್ರ ಎಫ್ ಸಿ ಮಾಡ್ತೀವಿ ಅನ್ನೋ ಆದೇಶವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎನ್ನುತ್ತಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡಬೇಕಿದೆ..
ವರದಿ: ಕಿರಣ್ ಸೂರ್ಯ, ಟಿವಿ 9, ಬೆಂಗಳೂರು