Bengaluru: ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿ ಆಡಳಿತ ಮಂಡಳಿಯಿಂದ ಮಹಿಳೆ ಮೇಲೆ ಹಲ್ಲೆ
ನಗರದ ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಹಲ್ಲೆ ಮಾಡಿರುವ ಅಮಾನುಷ ಘಟನೆ ನಡೆದಿದೆ.
ಬೆಂಗಳೂರು: ನಗರದ ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಕಳೆದ ಡಿ.21 ರಂದು ಪೂಜೆಗೆ ಹೋಗಿದ್ದ ಹೇಮಾವತಿ ಎಂಬ ಮಹಿಳೆಯ ಮೇಲೆ ಆಡಳಿತ ಮಂಡಳಿಯವರು ದೇವರೆದುರೆ ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಿ, ಜಡೆ ಹಿಡಿದು ಹೊರೆಗೆ ಎಳೆದೊಯ್ದು ಬಿಸಾಕಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನನ್ನನ್ನು ದೇವಸ್ಥಾನದ ಒಳಗೆ ಬಿಡಲು ನಿರಾಕರಿಸಿ ಹಲ್ಲೆ ಮಾಡಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು, ಈ ವಿಚಾರ ತಡವಾಗಿ ಪತಿಗೆ ತಿಳಿಸಿದ್ದ ಹೇಮಾವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮತ್ತೆ ವಾಪಾಸ್ಸು ತೆಗೆದುಕೊಂಡಿದ್ದಾಳೆ.
ಆದರೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣ ಪೊಲೀಸರ ಎದುರು ಹೇಳಿರೋದೆ ಬೇರೆ, ನನ್ನ ಮೇಲೆ ದೇವರು ಬರುತ್ತದೆ. ವೆಂಕಟೇಶ್ವರ ನನ್ನ ಪತಿ ಗರ್ಭಗುಡಿಯಲ್ಲಿ ನಾನು ವೆಂಕಟೇಶ್ವರನ ಪಕ್ಕ ಕುಳಿತುಕೊಳ್ಳಬೇಕು ಎಂದು ದೇವಸ್ಥಾನದಲ್ಲಿ ಪಟ್ಟು ಹಿಡಿದಿದ್ದ ಮಹಿಳೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಚಕರ ಮೇಲೆಯೇ ಉಗಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಎಷ್ಟೇ ಮನವಿ ಮಾಡಿಕೊಂಡರು ಹೋಗದಿದ್ದಾಗ ಆಡಳಿತ ಮಂಡಳಿಯವರು ಸೇರಿ ಥಳಿಸಿದ್ದೇವೆ, ಜೊತೆಗೆ ಘಟನೆ ನಡೆದ ಕೆಲ ದಿನಗಳ ನಂತರ ದೇವಾಲಯಕ್ಕೆ ಬಂದು ಕ್ಷಮೆ ಕೇಳಿದ್ದಳು ಎಂದಿದ್ದಾರೆ. ಸದ್ಯ ಮಹಿಳೆ ದೂರು ಹಿಂಪಡೆದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ