ಗೇಟ್​​ ತೆರೆಯದಕ್ಕೆ ಮಂದಮರ್ರಿ ಟೋಲ್​​​ ಪ್ಲಾಜಾ ಸಿಬ್ಬಂದಿ ಮೇಲೆ ಬಿಆರ್​​ಎಸ್​​ ಶಾಸಕ ದುರ್ಗಂ ಚಿನ್ನಯ್ಯ ಹಲ್ಲೆ

ವರದಿಗಳ ಪ್ರಕಾರ, ಘಟನೆ ನಿನ್ನೆ (ಮಂಗಳವಾರ) ರಾತ್ರಿ ನಡೆದಿದೆ. ವಿಡಿಯೊದಲ್ಲಿ, ಟೋಲ್ ಪ್ಲಾಜಾ ಉದ್ಯೋಗಿ ಮೇಲೆ ರೇಗಾಡದಂತೆ ನಿಯಂತ್ರಿಸಲು ಸಿಬ್ಬಂದಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ಗೇಟ್​​ ತೆರೆಯದಕ್ಕೆ ಮಂದಮರ್ರಿ ಟೋಲ್​​​ ಪ್ಲಾಜಾ ಸಿಬ್ಬಂದಿ ಮೇಲೆ ಬಿಆರ್​​ಎಸ್​​ ಶಾಸಕ ದುರ್ಗಂ ಚಿನ್ನಯ್ಯ ಹಲ್ಲೆ
ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ಶಾಸಕ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 04, 2023 | 1:47 PM

ಮಂದಮರ್ರಿ: ಮಂದಮರ್ರಿ (Mandamarri)ಟೋಲ್ ಬೂತ್​​ನಲ್ಲಿ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಶಾಸಕ ದುರ್ಗಂ ಚಿನ್ನಯ್ಯ(Durgam Chinnaiah) ರೇಗಾಡಿ ಹಲ್ಲೆ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿ ಚಿನ್ನಯ್ಯ ಕಾರಿಗೆ ಗೇಟ್ ತೆರೆಯದ ಕಾರಣಕ್ಕೆ ಟೋಲ್ ಬೂತ್ ಅಟೆಂಡರ್ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ದುರ್ಗಂ ಚಿನ್ನಯ್ಯ ತೆಲಂಗಾಣದ ಬೆಳ್ಳಂಪಲ್ಲೆ ಶಾಸಕರಾಗಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಘಟನೆ ನಿನ್ನೆ (ಮಂಗಳವಾರ) ರಾತ್ರಿ ನಡೆದಿದೆ. ವಿಡಿಯೊದಲ್ಲಿ, ಟೋಲ್ ಪ್ಲಾಜಾ ಉದ್ಯೋಗಿ ಮೇಲೆ ರೇಗಾಡದಂತೆ ನಿಯಂತ್ರಿಸಲು ಸಿಬ್ಬಂದಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅಷ್ಟೊತ್ತರಲ್ಲಿ ಶಾಸಕ ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಸಂತ್ರಸ್ತ ಕಾರ್ಮಿಕನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಟೋಲ್ ಬೂತ್‌ನ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾರ್ಮಿಕರು ಹೇಳಿದ್ದಾರೆ. ಈ ವಿಡಿಯೊವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ, ಟೋಲ್ ಪ್ಲಾಜಾ ಸಿಬ್ಬಂದಿಯಿಂದ ನಮಗೆ ಇನ್ನೂ ಯಾವುದೇ ದೂರು ಬಂದಿಲ್ಲ, ಆದರೆ ನಾವು ಈಗ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು  ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Wed, 4 January 23