ನೊಯ್ಡಾದ ರೆಸಿಡೆನ್ಷಿಯಲ್ ಪ್ರದೇಶದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಅರಣ್ಯಾಧಿಕಾರಿಗಳಿಂದ ತೀವ್ರ ಹುಡುಕಾಟ
ನೋಯ್ಡಾದ ಸೆಕ್ಟರ್ 16ರಲ್ಲಿ ಅಜ್ನಾರಾ ಲೀ ಗಾರ್ಡನ್ ಸೊಸೈಟಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆಯ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಆರಂಭಿಸಿದೆ.
ನೋಯ್ಡಾ: ನೊಯ್ಡಾದ (Noida) ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿ ಮತ್ತೆ ಚಿರತೆ (Leopard) ಕಾಣಿಸಿಕೊಂಡಿದೆ. ಜನವರಿ 3ರಂದು ಹೌಸಿಂಗ್ ಸೊಸೈಟಿಯ ಆವರಣದಲ್ಲಿ ಚಿರತೆ ಅಡ್ಡಾಡುತ್ತಿರುವುದು ಕಂಡುಬಂದಿದೆ. ಈ ರೆಸಿಡೆನ್ಷಿಯಲ್ ಏರಿಯಾದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಯತ್ತ ಚಿರತೆ ಓಡುತ್ತಿರುವ ವಿಡಿಯೋ (Video Viral) ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಚಿರತೆಯ ದೃಶ್ಯವು ನೊಯ್ಡಾದ ಸೆಕ್ಟರ್ 16ರಲ್ಲಿರುವ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ.
ಚಿರತೆಯ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಆರಂಭಿಸಿದೆ. ನೋಯ್ಡಾದ ಸೆಕ್ಟರ್ 16ರಲ್ಲಿ ಅಜ್ನಾರಾ ಲೀ ಗಾರ್ಡನ್ ಸೊಸೈಟಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ (ಎಫ್‌ಡಿಒ) ಪ್ರಮೋದ್ ಶ್ರೀವಾಸ್ತವ ಖಚಿತಪಡಿಸಿದ್ದಾರೆ. ಆ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡವೊಂದು ಧಾವಿಸಿದೆ. ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳ ತಂಡಕ್ಕೆ ಸಹಾಯ ಮಾಡಲು ಮೀರತ್‌ನ ತಜ್ಞರನ್ನು ಸಹ ನಿಯೋಜಿಸಲಾಗಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಹಾಕಲು ಆದೇಶಿಸಲಾಗಿದೆ.
Leopard Spotted at Ajnara Le Garden Society in Greater Noida pic.twitter.com/fMvoygXLML
— Mamta Gusain (@Mamtagusain5) January 3, 2023
ಇದನ್ನೂ ಓದಿ: Mandya News: ಮಂಡ್ಯದಲ್ಲಿ ಮುಂದುವರೆದ ಚಿರತೆ ದಾಳಿ, ಚಿರತೆ ಬಾಯಿಗೆ ತುತ್ತಾದ ಹಸು, ಮಾಲೀಕನ ಗೋಳಾಟ
ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು ಹಿಡಿಯಲು ಹಲವು ಗಂಟೆಗಳ ಕಾಲ ಪ್ರಯತ್ನಿಸಿತು. ಆದರೆ ಯಶಸ್ವಿಯಾಗಲಿಲ್ಲ. ನಿರ್ಮಾಣ ಹಂತದಲ್ಲಿರುವ ಸೊಸೈಟಿಯ ಕಟ್ಟಡದಲ್ಲಿ ಚಿರತೆಗೆ ಓಡಲು ಮತ್ತು ಅಡಗಿಕೊಳ್ಳಲು ಸಾಕಷ್ಟು ಜಾಗವಿದ್ದುದರಿಂದ ಚಿರತೆ ತಪ್ಪಿಸಿಕೊಂಡಿತು.