ಉತ್ತರ ಪ್ರದೇಶ: ಮಹಿಳೆಯ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ವೈದ್ಯ, ತನಿಖೆಗೆ ಆದೇಶ
ಮನೆಗೆ ಬಂದರೂ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಶಂಶೇರ್ ಅಲಿ ಆಕೆಯನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ನಜ್ರಾನಾಳ ಹೊಟ್ಟೆ ನೋವಿನ ಹಿಂದಿನ ಸತ್ಯ ಗೊತ್ತಾಗಿದ್ದು ಮತ್ತೊಂದು ಆಪರೇಷನ್ ಮಾಡಿ ಟವೆಲ್ ಹೊರತೆಗೆಯಲಾಗಿದೆ.
ಅಮ್ರೋಹಾ: ಉತ್ತರ ಪ್ರದೇಶದ (Uttar Pradesh) ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ಹೆರಿಗೆ ನೋವು (labour pain) ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಮಹಿಳೆಯ ಆಪರೇಶನ್ ನಡೆಸಿದ ವೈದ್ಯರೊಬ್ಬರು ಆಕೆಯ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಘಟನೆ ವರದಿಯಾಗಿದೆ. ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ವೈದ್ಯ ಮತ್ಲೂಬ್ ಅವರು ಅಮ್ರೋಹಾದ ನೌಗಾವಾನಾ ಸಾದತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ನಡೆಸುತ್ತಿದ್ದ ಸೈಫೀ ನರ್ಸಿಂಗ್ ಹೋಮ್‌ನಲ್ಲಿ ಆಪರೇಶನ್ ನಡೆಸಿದ ನಂತರ ನಜ್ರಾನಾ ಅವರ ಹೊಟ್ಟೆಯಲ್ಲಿ ಟವೆಲ್ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಸಿಎಂಒ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಟವೆಲ್ ನಜ್ರಾನಾ ಅವರ ಹೊಟ್ಟೆಯೊಳಗೆ ಉಳಿದಿದೆ. ಮಹಿಳೆ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ, ಅವರು ಅವಳನ್ನು ಇನ್ನೂ ಐದು ದಿನಗಳವರೆಗೆ ಅಡ್ಮಿಟ್ ಮಾಡಿದರು. ಹೀಗೆ ಯಾಕೆ ಅಡ್ಮಿಟ್ ಮಾಡಿದ್ದೀರಿ ಎಂದು ಕೇಳಿದಾಗ ಹೊರಗಿನ ಚಳಿಯಿಂದ ಆಕೆಗೆ ಹೊಟ್ಟೆ ನೋವು ಆಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎನ್ನಲಾಗಿದೆ.
ಮನೆಗೆ ಬಂದರೂ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಶಂಶೇರ್ ಅಲಿ ಆಕೆಯನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ನಜ್ರಾನಾಳ ಹೊಟ್ಟೆ ನೋವಿನ ಹಿಂದಿನ ಸತ್ಯ ಗೊತ್ತಾಗಿದ್ದು ಮತ್ತೊಂದು ಆಪರೇಷನ್ ಮಾಡಿ ಟವೆಲ್ ಹೊರತೆಗೆಯಲಾಗಿದೆ. ಈ ಖಾಸಗಿ ವೈದ್ಯ ಮತ್ಲೂಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲಿ ಸಿಎಂಒಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದ ಪ್ರೇಮಿ; ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ
“ನಾನು ಘಟನೆಯ ಬಗ್ಗೆ ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡಿದ್ದೇನೆ ಮತ್ತು ಈ ಬಗ್ಗೆ ಪರಿಶೀಲಿಸಲು ನೋಡಲ್ ಅಧಿಕಾರಿ ಡಾ.ಶರದ್ ಅವರನ್ನು ಕೇಳಿದ್ದೇನೆ. ತನಿಖೆ ಪೂರ್ಣಗೊಂಡ ನಂತರವೇ ನಾವು ಹೆಚ್ಚಿನ ವಿವರಗಳನ್ನು ನೀಡಬಹುದು” ಎಂದು ಸಿಎಂಒ ಸಿಂಘಾಲ್ ಮಂಗಳವಾರ ಹೇಳಿದ್ದಾರೆ.
ಆದರೆ, ಶಂಶೇರ್ ಅಲಿ ಈ ಬಗ್ಗೆ ಯಾವುದೇ ಲಿಖಿತ ದೂರು ನೀಡಿಲ್ಲ. ವೈದ್ಯರ ನಿರ್ಲಕ್ಷ್ಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂಒ ಭರವಸೆ ನೀಡಿದ್ದಾರೆ
ಸಿಎಂಒ ತನಿಖೆಯ ವರದಿ ಬಂದ ನಂತರ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ