ಬೆಂಗಳೂರು, ಜೂನ್ 25: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಹಲವು ನಗರಗಳಲ್ಲಿ ಇಂದು (ಜೂ.25) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ.
ಕ.ವಿ.ಪ್ರ.ನಿ.ನಿ ಲೈನ್ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/pMf8qrljOB ಸಂಪರ್ಕಿಸಿ. pic.twitter.com/3X8UEaUtKB
— Namma BESCOM | ನಮ್ಮ ಬೆಸ್ಕಾಂ (@NammaBESCOM) June 24, 2024
ಮಾರೇನಹಳ್ಳಿ, ವಿಜಯನಗರದ ಕೆಲವು ಪ್ರದೇಶ, ಚಂದ್ರಾಲೇಔಟ್, ನಾಗರಭಾವಿ, ಗಂಗೊಂಡನಳ್ಳಿ, ಎಲ್&ಟಿ ಹಂತ 1, 2 ಮತ್ತು ಎಲ್&ಟಿ ಟೆಕ್ ಪಾರ್ಕ್, ಸ್ಪರ್ಕ್ ಒನ್ ಮಾಲ್, ಪಾರ್ವತಮ್ಮ ಲೇಔಟ್, ಟೆಲಿಕಾಂ ಲೇಔಟ್, ತಿಂಡ್ಲು ಹಳ್ಳಿ, ಅಮೃತಹಳ್ಳಿ, ಶಬರಿನಗರ, ಕೆಎಸ್ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೆಬರ್ವಸ್ ಕಾಲೋನಿ, ಪುರ್ವಾಂಕರ ಅಪಾರ್ಟ್ಮೆಂಟ್, ಅಮೃಥಸಾಗರ, ಎಸ್ಪಿ ತೋಟ, ವಡ್ಡರಪಾಳ್ಯ, ಕೆಂಬಾಥಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಬಿಡಬ್ಲೂಎಸ್ಎಸ್ಬಿ ಎಸ್ಟಿಪಿ, ಜಕ್ಕಸಂದ್ರ, ಹೆಚ್ಎಸ್ಆರ್ ಐದನೇ ಹಂತ ಟೀಚರ್ಸ್ ಕಾಲೊನಿ, ವೆಂಕಟಾಪುರದ ಕೆಲವು ಪ್ರದೇಶ, ಗ್ರೀಏಜ್ ಅಪಾರ್ಟ್ಮೆಂಟ್, ಕೋರಮಂಗಲದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Tue, 25 June 24