ಸರ್ಕಾರದ ವಿರುದ್ಧ ಹೈಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಚುನಾವಣಾ ಆಯೋಗ

ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್​ನಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಇದು ರಾಜ್ಯ ಸರ್ಕಾರ ಹೊಸ ತಲೆನೋವಾಗಿ ಪರಣಮಿಸಿದೆ. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಜುಲೈ 11 ರಂದು ನಡೆಸಲಿದೆ.

ಸರ್ಕಾರದ ವಿರುದ್ಧ ಹೈಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಚುನಾವಣಾ ಆಯೋಗ
ಹೈಕೋರ್ಟ್​
Follow us
|

Updated on: Jun 25, 2024 | 8:59 AM

ಬೆಂಗಳೂರು, ಜೂನ್​ 25: ರಾಜ್ಯ ಚುನಾವಣಾ ಆಯೋಗವು (Election Commission) ರಾಜ್ಯ ಸರ್ಕಾರಕ್ಕೆ (Karnataka Government) ಶಾಕ್​ ನೀಡಿದೆ. ನ್ಯಾಯಾಲಕ್ಕೆ ನೀಡಿದ್ದ ಭರಸವತೆಯಂತೆ ರಾಜ್ಯ ಸರ್ಕಾರ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಮೀಸಲಾತಿ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್​ಗೆ ನ್ಯಾಯಾಂಗ ನಿಂದನೆ (Contempt of court) ಅರ್ಜಿ ಸಲ್ಲಿಸಿದೆ. ಚುನಾವಣಾ ಆಯೋಗ ಸಲ್ಲಿಸದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್​.ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಜು.11ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ವಾದ ಮಂಡಿಸಿದರು. ಈ ಹಿಂದೆ ಸರ್ಕಾರ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯತ್​ ಮತ್ತು ತಾಲೂಕು ಪಂಚಾಯತ್​ ಚುನಾವಣೆಗೆ ಮೀಸಲಾತಿ ಅಂತಿಮಗೊಳಿಸಿಲ್ಲ. ಇದರಿಂದ ಸರ್ಕಾರದ ವಿರುದ್ಧ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಬಳಿಕ ಸರ್ಕಾರದ ಪರ ಹಾಜರಿದ್ದ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಈ ಬಗ್ಗೆ ಅಡ್ವೋಕೇಟ್​ ಜನರಲ್​ ಕೆ. ಶಶಿಕಿರಣ್​ ಶೆಟ್ಟಿ ವಾದ ಮಂಡಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.

ಇದನ್ನೂ ಓದಿ: 13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಅವಧಿ ಮುಗಿದ ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​ಗೆ ಚುನಾವಣೆ ನಡೆಸಲು ಕೋರಿ ಚುನಾವಣಾ ಆಯೋಗ ಈ ಹಿಂದೆ ನ್ಯಾಯಾಲಯದಲ್ಲಿ ಪಿಐಎಲ್​ ಸಲ್ಲಿಸಿತ್ತು. ಅರ್ಜಿಯಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ ಆಯೋಗ ರಚಿಸಿರುವುದನ್ನೂ ಪ್ರಶ್ನಿಸಿತ್ತು.

ಈ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರ 2023ರ ಡಿಸೆಂಬರ್​ 19ರಂದು ಪುನರ್​​ವಿಂಗಡೆ ಅಧಿಸೂಚನೆ ಹೊರಡಿಸುವುದಾಗಿ ಹೇಳಿತ್ತು. ಸರ್ಕಾರದ ಹೇಳಿಕೆ ಪರಿಗಣಿಸಿ ಹೈಕೋರ್ಟ್​ ಅರ್ಜಿ ಇತ್ಯರ್ಥಪಡಿಸಿತ್ತು. ಆದರೆ, ಸರ್ಕಾರ ತಾನು ಹೇಳಿದಂತೆ ನಡೆದುಕೊಂಡಿಲ್ಲ ಎಂದು ಚುನಾವಣಾ ಆಯೋಗ ಇದೀಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ದರ್ಶನ್ ನಡೆದು ಬಂದ ಹಾದಿಯ ಬಗ್ಗೆ ಸಾರಾ ಗೋವಿಂದು ವಿಶ್ಲೇಷಣೆ
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ತೆರಿಗೆ ಹಣ ಹಂಚಿಕೆ ತಾರತಮ್ಯವಾದರೆ ಪ್ರತಿಭಟನೆ ನಡೆಸುವ ಬಗ್ಗೆ ಸಿಎಂ ಸುಳಿವು
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿ: ಕಿಮ್ಸ್​​​ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ಹಿರೀಕ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ನಿನ್ನೆ ನಾನು ಕರೆದ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು: ಸಿದ್ದರಾಮಯ್ಯ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
ಬೆವರು ಸುರಿಸದೆ ಬದುಕು ನಡೆಸುವ ಸಲಹೆಯನ್ನು ಶ್ರೀಗಳು ನೀಡಿದ್ದಾರೆ: ರಾಜಣ್ಣ
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’
'13 ಜನ ಸ್ಪಾಟ್​ನಲ್ಲೇ ಸಾವನಪ್ಪಿದ್ದು ಕೇಳಿ ಇಡೀ ಗ್ರಾಮ ಆಘಾತಕ್ಕೊಳಗಾಗಿದೆ’