ಬೆಂಗಳೂರಿನ ಮತ್ತೆ ಕಾಣಿಸಿಕೊಂಡ ಚಿರತೆ, ದೊಣ್ಣೆ ಹಿಡಿದು ಓಡಾಡುತ್ತಿರುವ ಜನ

| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2023 | 9:48 AM

ಕಾಡಿನಲ್ಲಿ ಮಾತ್ರ ಸಂಚರಿಸುತ್ತಾ ಆಗೊಮ್ಮೆ ಈಗೊಮ್ಮೆ ಕಾಡಾಂಚಿನ ಗ್ರಾಮಗಳಿಗೆ ಮಾತ್ರ ಎಂಟ್ರಿ ಕೊಡುತ್ತಿದ್ದ ಚಿರತೆ ಈಗ ಬೆಂಗಳೂರಿಗೂ ಲಗ್ಗೆ ಇಟ್ಟಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ತಡರಾತ್ರಿ 2 ಗಂಟೆ ಸಮಯದಲ್ಲಿ ಕೂಡ್ಲುಗೇಟ್ ಸಮೀಪ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಬೆಂಗಳೂರಿನ ಮತ್ತೆ ಕಾಣಿಸಿಕೊಂಡ ಚಿರತೆ, ದೊಣ್ಣೆ ಹಿಡಿದು ಓಡಾಡುತ್ತಿರುವ ಜನ
ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಪೊಲಿಸರ ಪರಿಶೀಲನೆ
Follow us on

ಬೆಂಗಳೂರು, (ಅಕ್ಟೋಬರ್ 31): ಕಾಡಿನ ಸುತ್ತಮುತ್ತಲಿನ ಗಾಮಗಳಿಗೆ ಚಿರತೆ, ಹುಲಿ, ಆನೆಗಳ ಹಾವಳಿ ವರದಿಯಾಗುತ್ತಿವೆ. ಆದ್ರೆ, ಬೆಂಗಳೂರಿನಂತಹ(Bengaluru) ಮಹಾನಗರಕ್ಕೆ ಚಿರತೆ (Leopard)ಲಗ್ಗೆ ಇಟ್ಟಿದೆ. ಹೌದು.. ಇದೀಗ ಆನೇಕಲ್‌ನಲ್ಲಿ ಚಿರತೆ ಭಯ ಆವರಿಸಿದೆ. ಅಕ್ಟೋಬರ್ 28ರ ಮಧ್ಯರಾತ್ರಿ 8ಅಡಿ ಎತ್ತರದ ಗೋಡೆ ಹಾರಿ ಅಪಾರ್ಟ್‌ಮೆಂಟ್‌ಗೆ ಚಿರತೆಯೊಂದು ನುಗ್ಗಿತ್ತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಕೂಡ್ಲುಗೇಟ್​​ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಕೈನಲ್ಲಿ ದೊಣ್ಣೆ ಹಿಡಿದುಕೊಂಡು ಆತಂಕದಲ್ಲಿಯೇ ಓಡಾಡುತ್ತಿದ್ದಾರೆ.

ತಡರಾತ್ರಿ 2 ಗಂಟೆ ಸಮಯದಲ್ಲಿ ಕೂಡ್ಲುಗೇಟ್ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ಕಾರಿನ ಗ್ಯಾರೇಜ್ ನಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಜನರಲ್ಲಿ ಚಿರತೆ ಭಯ ಮತ್ತಷ್ಟು ಹೆಚ್ಚಾಗಿದೆ. ಚಿರತೆ ಓಡಾಡಿರುವುದನ್ನು ಗಸ್ತಿನಲ್ಲಿದ್ದ ಪೊಲೀಸರು ನೋಡಿದ್ದಾರೆ. ಅಲ್ಲದೇ ಸ್ಥಳೀಯರು ಕೂಡ ಚಿರತೆ ನೋಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ ಶನಿವಾರ ಬೆಳಗಿನ ಜಾವ ಓಡಾಡಿರುವ ಚಿರತೆ ಪತ್ತೆಗೆ ದ್ರೋಣ್ ಬಳಕೆ

ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಪರಿಶೀಲನೆ ವೇಳೆ ಚಿರತೆ ಪತ್ತೆಯಾಗಿಲ್ಲ. ಈಗಾಗಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನುಗಳನ್ನು ಇಟ್ಟಿದ್ದು, ರಾತ್ರಿ ವೇಳೆ ಒಂಟಿಯಾಗಿ ಓಡಾಡದಂತೆ ಅರಣ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ, HSR ಲೇಔಟ್, BTM ಲೇಔಟ್​ನಲ್ಲಿ ಜನರಲ್ಲಿ ಚಿರತೆ ಆತಂಕ ಮನೆ ಮಾಡಿದೆ.

ಚಿರತೆ ಸೆರೆಗಾಗಿ ಸಿಸಿಎಸ್ ಲಿಂಗರಾಜು, ಡಿಎಫ್ಓ ರವೀಂದ್ರ ನೇತೃತ್ವದಲ್ಲಿ 5ತಂಡಗಳ ರಚನೆ ಮಾಡಲಾಗಿದೆ. ಆನೇಕಲ್, ಬನ್ನೇರುಘಟ್ಟ, ಕಗ್ಗಲೀಪುರ, ಕೆಆರ್ಪುಂ ಆರ್‌ಎಫ್‌ಓ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಎಇಸಿಎಫ್‌ ಲೇಔಟ್‌ಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಎರಡು ಬೋನ್ ಇರಿಸಲಾಗಿದ್ದು, ಅದರಲ್ಲಿಜೀವಂತ ಕೋಳಿಗಳನ್ನು ಬಿಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:47 am, Tue, 31 October 23