ಈರುಳ್ಳಿ ದರ ಏರಿಕೆ ಚಿಂತೆ ಬೇಡ: ಮನೆ ಬಾಗಿಲಿಗೆ ಬರುತ್ತವೆ ಕಡಿಮೆ ಬೆಲೆಗೆ ಈರುಳ್ಳಿ ನೀಡುವ ವ್ಯಾನ್​ಗಳು!

ಈರುಳ್ಳಿ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೆಜಿಗೆ 35 ರೂಪಾಯಿಯಂತೆ ನೀವು 3 ಕೆಜಿವರೆಗೂ ಈರುಳ್ಳಿ ಖರೀದಿಸಬಹುದು, ಅದೂ ನಿಮ್ಮ ಮನೆ ಬಾಗಿಲಿನಲ್ಲಿಯೇ! ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಕಡೆಗಳಲ್ಲಿಯೂ ಈ ಸೇವೆ ಲಭ್ಯವಿರಲಿದೆ. ಅದ್ಹೇಗೆ, ಸರ್ಕಾರ ಏನು ವ್ಯವಸ್ಥೆ ಮಾಡಿದೆ ಎನ್ನುತ್ತೀರಾ? ಇಲ್ಲಿದೆ ನೋಡಿ ವಿವರ.

ಈರುಳ್ಳಿ ದರ ಏರಿಕೆ ಚಿಂತೆ ಬೇಡ: ಮನೆ ಬಾಗಿಲಿಗೆ ಬರುತ್ತವೆ ಕಡಿಮೆ ಬೆಲೆಗೆ ಈರುಳ್ಳಿ ನೀಡುವ ವ್ಯಾನ್​ಗಳು!
ಈರುಳ್ಳಿ ಬೆಲೆ ಏರಿಕೆ (ಸಾಂದರ್ಭಿಕ ಚಿತ್ರ)
Follow us
|

Updated on: Sep 24, 2024 | 8:12 AM

ಬೆಂಗಳೂರು, ಸೆಪ್ಟೆಂಬರ್ 24: ಈರುಳ್ಳಿ ಬೆಲೆ ಏರಿಕೆ ಸಮಸ್ಯೆಗೆ ಸದ್ಯದ ಮಟ್ಟಿಗೆ ಮುಕ್ತಿ ನೀಡಲು ಮತ್ತು ಗ್ರಾಹಕರ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ಬೆಂಗಳೂರು ಶಾಖೆ ಮಹತ್ವದ ಕ್ರಮ ಕೈಗೊಂಡಿದೆ. ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ನೀಡುವ ಮೊಬೈಲ್ ವ್ಯಾನ್‌ಗಳಿಗೆ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಮೊಬೈಲ್ ವ್ಯಾನ್​ಗಳಲ್ಲಿ ಪ್ರತಿ ಕೆಜಿಗೆ 35 ರೂ.ಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಬೆಲೆ ಸ್ಥಿರೀಕರಣ ನಿಧಿ (PSF) ಅಡಿಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮಾತ್ರವಲ್ಲದೆ, ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ.

ಬೆಂಗಳೂರು: ಈರುಳ್ಳಿ ದರ ವಿವರ

ಸೋಮವಾರದಂದು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಈರುಳ್ಳಿ ಬೆಲೆ ಕೆಜಿಗೆ 45 ರಿಂದ 52 ರೂ.ವರೆಗೆ ಇದ್ದರೆ, ಚಿಲ್ಲರೆ ಬೆಲೆ ಕೆಜಿಗೆ 60 ರಿಂದ 70 ರೂ. ಇತ್ತು. ಮೊಬೈಲ್ ವ್ಯಾನ್‌ಗಳು ಈರುಳ್ಳಿಯನ್ನು ಕೆಜಿಗೆ 35 ರೂ.ನಂತೆ ಮಾರಾಟ ಮಾಡುತ್ತಿವೆ.

ಯಾವೆಲ್ಲ ಏರಿಯಾಗೆ ಬರುತ್ತಿವೆ ಈರುಳ್ಳಿ ವ್ಯಾನ್?

ಬೆಂಗಳೂರಿನ ನಂದಿನಿ ಲೇಔಟ್, ಸುಂಕದಕಟ್ಟೆ, ನಾಗರಭಾವಿ, ರಾಜಾಜಿನಗರ, ಲಗ್ಗೆರೆ, ಮಲ್ಲೇಶ್ವರಂ, ಯಶವಂತಪುರ ಮತ್ತು ಮೆಜೆಸ್ಟಿಕ್‌ನಂತಹ ಪ್ರದೇಶಗಳಲ್ಲಿ ಸದ್ಯ 30 ಟನ್ ಸಾಮರ್ಥ್ಯದ 15 ಟ್ರಕ್‌ಗಳನ್ನು ನಿಯೋಜಿಸಲಾಗಿದೆ. ಗುರುವಾರದ ವೇಳೆಗೆ ನಗರಕ್ಕೆ ಒಟ್ಟು 50 ಮೊಬೈಲ್ ವ್ಯಾನ್‌ಗಳು ಬರಲಿದ್ದು, ಇತರ ಪ್ರದೇಶಗಳಿಗೂ ಈರುಳ್ಳಿ ವಿತರಣೆ ಮಾಡಲಿವೆ ಎಂದು ಎನ್‌ಸಿಸಿಎಫ್ ಶಾಖಾ ವ್ಯವಸ್ಥಾಪಕ ರವಿಚಂದ್ರ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಬರುವ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ ಮತ್ತು ಹಲವಾರು ತಿಂಗಳುಗಳವರೆಗೆ ಸಂಗ್ರಹಿಸಿಡಬಹುದು. ಇವುಗಳನ್ನು ಕರ್ನಾಟಕಕ್ಕೆ ಆಮದು ಮಾಡಿಕೊಳ್ಳಲು ಎನ್‌ಸಿಸಿಎಫ್‌ಗೆ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷಾಂತ್ಯದ ವರೆಗೆ ಈರುಳ್ಳಿ ಮಾರಾಟ

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಿಂದ ನಮ್ಮಲ್ಲಿ ಕನಿಷ್ಠ 5 ಲಕ್ಷ ಟನ್ ಈರುಳ್ಳಿ ದಾಸ್ತಾನು ಇದೆ. ಆದ್ದರಿಂದ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವವರೆಗೆ, ಅಗತ್ಯವಿದ್ದಲ್ಲಿ ಜನವರಿವರೆಗೆ ವ್ಯಾನ್‌ಗಳ ಮೂಲಕ ಈರುಳ್ಳಿ ಪೂರೈಕೆ ಮುಂದುವರಿಯುತ್ತದೆ. ನಾವು ಪ್ರತಿ ವಾರ ಹೆಚ್ಚಿನ ಈರುಳ್ಳಿ ವಿತರಣೆ ಮಾಡುತ್ತೇವೆ. ನಗರ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಪೂರೈಕೆ ಮುಂದುವರಿಯಲಿದೆ ಎಂದು ರವಿಚಂದ್ರ ಮಾಹಿತಿ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತೆ ಏರಿಕೆ: ಉತ್ಪಾದನೆ ಭಾರಿ ಕುಸಿತ 

ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ವಿಜಯಪುರದಲ್ಲಿ ಎನ್‌ಸಿಸಿಎಫ್ ಮೊಬೈಲ್ ವ್ಯಾನ್ ಮಾರಾಟ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದ್ದು, ಮುಂದಿನ ವಾರದ ವೇಳೆಗೆ ಇಡೀ ರಾಜ್ಯಕ್ಕೆ ವಿಸ್ತರಣೆಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ
ಅಶ್ವಿನ್ ವಿರುದ್ಧ ಪತ್ನಿ ಪ್ರೀತಿ ಹೊರಿಸಿದ ಆರೋಪವೇನು? ವಿಡಿಯೋ ನೋಡಿ
ಅಶ್ವಿನ್ ವಿರುದ್ಧ ಪತ್ನಿ ಪ್ರೀತಿ ಹೊರಿಸಿದ ಆರೋಪವೇನು? ವಿಡಿಯೋ ನೋಡಿ