ಆನ್ಲೈನ್ ಹನಿ ಟ್ರಾಪ್: ಸಿಬಿಐ ಹೆಸರು ಬಳಸಿ ಬೆದರಿಕೆ; ಐದು ಲಕ್ಷ ಹಣ ವಸೂಲಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2022 | 1:28 PM

ಕಳ್ಳನೆಂದು ತಿಳಿದು ಸೆಕ್ಯುರಿಟಿ ಗಾರ್ಡ್ (Security Guard) ವ್ಯಕ್ತಿಯೊಬ್ಬನ ಕೊಲೆ ಮಾಡಿರುವ ಘಟನೆ ನಗರದ ಎಚ್ಎಎಲ್​ನಲ್ಲಿ ಸಂಭವಿಸಿದೆ.

ಆನ್ಲೈನ್ ಹನಿ ಟ್ರಾಪ್: ಸಿಬಿಐ ಹೆಸರು ಬಳಸಿ ಬೆದರಿಕೆ; ಐದು ಲಕ್ಷ ಹಣ ವಸೂಲಿ
ಆನ್ಲೈನ್ ಹನಿ ಟ್ರಾಪ್
Follow us on

ಬೆಂಗಳೂರು: ಹನಿ ಟ್ರಾಪ್​ಕಿಂತ ಈಗ ಆನ್ಲೈನ್ ಹನಿ ಟ್ರಾಪ್ (Online Honey Trap) ಹೆಚ್ಚಾಗಿದ್ದು, ನಗರದಲ್ಲಿ ಅಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮೊದಲಿಗೆ ಹನಿ ಟ್ರಾಪ್ ಮಾಡಿದ್ದು, ಕೊನೆಗೆ ಸಿಬಿಐ ಹೆಸರು ಬಳಸಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವಂತಹ ಘಟನೆ ನಡೆದಿದೆ. ಮೊದಲಿಗೆ ಫೇಸ್​ಬುಕ್ ಮೂಲಕ ಪರಿಚಯವಾಗಿ ಬಳಿಕ ಹಲವಾರು ದಿನ ಸ್ನೇಹಿತೆಯಾಗಿದ್ದು, ಚಾಟ್ ಮಾಡಲಾಗಿದೆ. ಬಳಿಕ ವಿಡಿಯೋ ಕಾಲ್​ನಲ್ಲಿ ಇಬ್ಬರು ನಗ್ನವಾಗಿದ್ದಾರೆ. ನಗ್ನವಾಗಿ ಮಾಡಿದ್ದ ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಹಣ ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಣ ನೀಡದೆ ದೂರುದಾರ ಸುಮ್ಮನಾಗಿದ್ದ. ನಂತರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮತ್ತೆ ಫೋನ್ ಕಾಲ್ ಮಾಡಿದ್ದು, ಕೇಸ್ ಈಗ ಸಿಬಿಐಗೆ ಹೋಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹಾಡಹಗಲೆ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ: 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ

ಸಿಬಿಐನಲ್ಲಿ ಈಗಾಗಲೇ ದಾಖಲಾಗಿರೋ ಎಫ್​ಐಆರ್​ಗೆ ಹೆಸರು ಎಡಿಟ್ ಮಾಡಿ ಬೆದರಿಕೆ ಹಾಕಿದ್ದು, ಕೇಸ್​​ನಲ್ಲಿ ನಿಮ್ಮನ್ನೆ ಅರೆಸ್ಟ್ ಮಾಡಿಸುತ್ತೆವೆ ಎಂದು ಆರೋಪಿಗಳು ಬೆದರಿಕೆ ಹಾಕಲಾಗಿದೆ. ಕೊನೆಗೆ ಐದು ಲಕ್ಷ ಹಣ ವಸೂಲಿ ಮಾಡಿದ್ದು, ಹಣ ನೀಡದೆ ಇದ್ದರೆ ಸಿಬಿಐ ನಿಮ್ಮ ಮನೆಗೆ ಬರುತ್ತಾರೆ ಎಂದು ಹೆದರಿಸಲಾಗಿದೆ. ಸದ್ಯ ಈ ಬಗ್ಗೆ ಅಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜ್ಯೋತಿಷಿ ಮೇಲೆ ಹಲ್ಲೆ ಮಾಡಿ 5 ಲಕ್ಷ ನಗದು, 400 ಗ್ರಾಂ ಚಿನ್ನ ದೋಚಿದ ಖದೀಮರು

ಕಳ್ಳನೆಂದು ತಿಳಿದು ಸೆಕ್ಯುರಿಟಿ ಗಾರ್ಡ್ ವ್ಯಕ್ತಿಯೊಬ್ಬನ ಕೊಲೆ

ಬೆಂಗಳೂರು: ಕಳ್ಳನೆಂದು ತಿಳಿದು ಸೆಕ್ಯುರಿಟಿ ಗಾರ್ಡ್ (Security Guard) ವ್ಯಕ್ತಿಯೊಬ್ಬನ ಕೊಲೆ ಮಾಡಿರುವ ಘಟನೆ ನಗರದ ಎಚ್ಎಎಲ್​ನಲ್ಲಿ ಸಂಭವಿಸಿದೆ. ಇದೇ ತಿಂಗಳು 5 ರಂದು ಮಾರತಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್​ಮೆಂಟ್ ಅಪರಿಚಿತ ವ್ಯಕ್ತಿ ಬಂದಿದ್ದ. ರಾತ್ರಿ ಎರಡು ಗಂಟೆ ಸುಮಾರಿಗೆ 30 ವರ್ಷದ ವ್ಯಕ್ತಿ ಆಗಮಿಸಿದ್ದ. ಈ ವೇಳೆ ಅಪಾರ್ಟ್​ಮೆಂಟ್ ಒಳಗೆ ಬರುತ್ತಿರುವುದನ್ನ ಗಮನಿಸಿದ ಸೆಕ್ಯುರಿಟಿ ಗಾರ್ಡ್, ಅತನನ್ನ ಪ್ರಶ್ನೆ ಮಾಡಲು ಮುಂದಾಗಿದ್ದ. ಯಾರು ನೀನು? ಏಕೆ ಬಂದಿದ್ದೀಯಾ? ಎಂದು ಕೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಎಷ್ಟೇ ಕೇಳಿದರು ಬಾಯಿಬಿಡದ ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಲು ಯತ್ನಿಸಿದ್ದ. ಕೊನೆಗೆ ಕಳ್ಳನೆಂದು ಭಾವಿಸಿ ಸೆಕ್ಯುರಿಟಿ ಗಾರ್ಡ್ ಅಲ್ಲೇ ಇದ್ದ ರಾಡ್ನಿಂದ ಆತನ ತಲೆಗೆ ಹೊಡೆದಿದ್ದಾನೆ. ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆ ವ್ಯಕ್ತಿ ಮೃತಪಟ್ಟಿದ್ದಾನೆ. ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಎಂಬಾತನಿಂದ ಈ ಕೃತ್ಯ ನಡೆದಿದೆ. ಪೊಲೀಸರ ತನಿಖೆಯಲ್ಲಿ ಕೊಲೆಯಾದ ವ್ಯಕ್ತಿಯ ಅಸಲಿ ಸತ್ಯ ತಿಳಿದುಬಂದಿದೆ.