ಹಾಡಹಗಲೆ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ: 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ
ಹಾಡಹಗಲೆ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ನಡೆದಿದೆ.
ಕೋಲಾರ: ಹಾಡಹಗಲೆ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ (Theft) ಮಾಡಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ನಡೆದಿದೆ. ಕೆಂಪು ಬಣ್ಣದ ಕಾರ್‌ನಲ್ಲಿ ಬಂದ ವ್ಯಕ್ತಿಯಿಂದ ಕೃತ್ಯ ಎಸಗಲಾಗಿದೆ. ನಿವೃತ್ತ ಮುಖ್ಯಪೇದೆ ಮಲ್ಲಿಕಾರ್ಜುನಯ್ಯ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಟೆರೇಸ್ ಮೇಲೆ ಬಟ್ಟೆ ಒಣಗಿ ಹಾಕಲು ಮಹಿಳೆ ತೆರಳಿದ್ದು, ಮನೆಯಲ್ಲಿ ಬೀರುವಿನಲ್ಲಿದ್ದ 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅವಳು ನನ್ನವಳೆಂದು ಯುವಕರಿಬ್ಬರ ಜಗಳ, ಇಬ್ಬರಿಗೂ ಯಾಮಾರಿಸಿ ಯುವತಿ ಎಸ್ಕೇಪ್..!
ತಪಾಸನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆಗೆ ದುರ್ವರ್ತನೆ:
ವಿಜಯಪುರ: ಬಾರ್ ಸಹಿತವಿರೋ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ತಪಾಸನೆಗೆ ತೆರಳಿದ್ದ ಅಬಕಾರಿ ಅಧಿಕಾರಿಗಳ ಜೊತೆಗೆ ದುರ್ವರ್ತನೆ ಮಾಡಿರುವಂತಹ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ನಿನ್ನೆ ನಡೆದಿದೆ. ಅಬಕಾರಿ ಇಲಾಖೆ ಇನ್ಸಪೆಕ್ಟರ್ ಬೀರಪ್ಪಾ ನಾಗಠಾಣ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪಲ್ಲವಿ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಮಾಲೀಕ ಸಂಗಮೇಶ ಕರಂಭಂಟನಾಳ ಹಾಗೂ ಸಹೋದರರಿಂದ ದುರ್ವರ್ತನೆ ಎಸಗಲಾಗಿದೆ ಎನ್ನಲಾಗುತ್ತಿದೆ. ಸಂಗಮೇಶ ಸಹೋದರರಾದ ಮಹಾಂತೇಶ ಹಾಗೂ ಬಸವರಾಜರಿಂದ ಕೃತ್ಯ ಎಸಗಲಾಗಿದ್ದು, ಈ ಮೂಲಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಲಾಗಿದೆ. ಪಲ್ಲವಿ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ಮಾಲೀಕ ಹಾಗೂ ಸಹೋದರರ ಮೇಲೆ ಕಲಂ 353, 342, 504, 506, 34 ಅಡಿಯಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಘಟನೆ ವಿಡಿಯೋ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳ್ಳನೆಂದು ತಿಳಿದು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿದ ಸೆಕ್ಯುರಿಟಿ ಗಾರ್ಡ್!
ಹಟ್ಟಿಚಿನ್ನದಗಣಿ ಆವರಣದಲ್ಲಿನ ಗಂಧದ ಮರ ಕಳ್ಳತನ:
ರಾಯಚೂರು: ಹಟ್ಟಿಚಿನ್ನದಗಣಿ ಆವರಣದಲ್ಲಿನ ಗಂಧದ ಮರ ಕಳ್ಳತನ ಮಾಡಿರುವಂತಹ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಕಂಪನಿಯಲ್ಲಿ ನಡೆದಿದೆ. ಕಂಪನಿಯ ವಿಲ್ಹೇಜ್ ಶಾಫ್ಟ್ನೊಳಗೆ ನುಗ್ಗಿ ನಿನ್ನೆ ತಡರಾತ್ರಿ ಕೃತ್ಯವೆಸಗಲಾಗಿದೆ. ಅರಣ್ಯ ಇಲಾಖೆ ಹಾಗೂ ಕಂಪನಿ ಭದ್ರತಾ ಸಿಬ್ಬಂದಿ ವೈಫಲ್ಯ ಆರೋಪಿಸಿದ್ದು, ಚಿನ್ನದಗಣಿ ಆವರಣದಲ್ಲಿ ಪದೇ ಪದೇ ಗಂಧದ ಮರಗಳ ಕಳ್ಳತನ ನಡೆಯುತ್ತಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.