ಆರ್​ಎಸ್​ಎಸ್​ನಲ್ಲಿ ಯಾರು ದೇಶ ಭಕ್ತರಿಲ್ಲ, ದೇಶಕ್ಕಾಗಿ ಒಬ್ಬರು ಸತ್ತಿಲ್ಲ; ಬಿಜೆಪಿಯವರೇ ತಾಲಿಬಾನಿಗಳು ಎಂದ ಸಿದ್ದರಾಮಯ್ಯ

| Updated By: sandhya thejappa

Updated on: Sep 26, 2021 | 1:15 PM

ನಾನು ಏಳು ಕೆ.ಜಿ ಅಕ್ಕಿ ಕೊಡುತ್ತಿದ್ದೆ. ಬಿಜೆಪಿ ಸರ್ಕಾರ ಬಂದು ಐದು ಕೆಜಿ ಕೊಡುತ್ತಿದ್ದಾರೆ. ಏಳು ಕೆಜಿ ಅಕ್ಕಿ ಕೊಟ್ಟರೆ ಇವರಪ್ಪನ ಮನೆ ಗಂಟೇನು ಹೋಗುತ್ತೆ. ನಮ್ಮ ಸರ್ಕಾರ ಮತ್ತೆ ಬಂದರೆ ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ.

ಆರ್​ಎಸ್​ಎಸ್​ನಲ್ಲಿ ಯಾರು ದೇಶ ಭಕ್ತರಿಲ್ಲ, ದೇಶಕ್ಕಾಗಿ ಒಬ್ಬರು ಸತ್ತಿಲ್ಲ; ಬಿಜೆಪಿಯವರೇ ತಾಲಿಬಾನಿಗಳು ಎಂದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಆರ್​ಎಸ್​​ಎಸ್​ನವರು (RSS) ಚಡ್ಡಿ ಬಿಟ್ಟು ಇದೀಗ ಪ್ಯಾಂಟ್ ಹಾಕುತ್ತಿದ್ದಾರೆ. ಆರ್​ಎಸ್​ಎಸ್​ನಲ್ಲಿ ಯಾರು ದೇಶ ಭಕ್ತರು ಇಲ್ಲ. ಆರ್​ಎಸ್​ಎಸ್​ನಿಂದ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ, ಆರ್​ಎಸ್​ಎಸ್​ನವರು ದೇಶಕ್ಕಾಗಿ ಒಬ್ಬರು ಸತ್ತಿಲ್ಲ. ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಂಪುರದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಬಡವರ ವಿರೋಧಿಗಳು. ಬಿಜೆಪಿ ತಮ್ಮ ಕಚೇರಿಯಲ್ಲಿ ಆಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಸಹ ಹಾಕುತ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕುತ್ತಾರೆ. ತಾಲಿಬಾನ್​ಗಳೇ ಬಿಜೆಪಿ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಅಕ್ಕಿ ಕೊಡಲು ಬಿಜೆಪಿಯವರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ. ಬಸವರಾಜ ಬೊಮ್ಮಾಯಿ ಸಿಎಂ ಮಾಡಿದ್ದು ಆರ್​ಎಸ್​ಎಸ್. ಆಎಸ್​ಎಸ್​ನವರು ಅಂದ್ರೆ ಗೊತ್ತಿದೆಯಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮೊದಲು ಚಡ್ಡಿ ಹಾಕಿಕೊಂಡು ದೊಣ್ಣೆ ಹಿಡಿದು ಬರುತ್ತಿದ್ದರು. ಆರ್​ಎಸ್​ಎಸ್​ನವರು ದೇಶಭಕ್ತರಲ್ಲ. ದೇಶಕ್ಕಾಗಿ ಬಿಜೆಪಿಯ ಯಾರೊಬ್ಬರೂ ಸತ್ತಿಲ್ಲ. ಬಿಜೆಪಿಯವರು ಬಡವರು, ದಲಿತರ ವಿರೋಧಿಗಳು. ಇವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬರಬೇಕು. ಬಿಜೆಪಿಯವರೇ ತಾಲಿಬಾನಿಗಳು ಹುಷಾರಾಗಿರಿ. ಉದ್ಯೋಗ ಕೇಳಿದರೆ ಪಕೋಡಾ ಮಾರಿ ಅಂತ ಹೇಳುತ್ತಾರೆ. ಪಕೋಡ ಮಾಡಿ ಮಾರಲು ಎಣ್ಣೆ ಬೆಲೆನೂ ಹೆಚ್ಚಾಗಿದೆ ಎಂದು ಹೇಳಿದರು.

ನಾನು ಏಳು ಕೆ.ಜಿ ಅಕ್ಕಿ ಕೊಡುತ್ತಿದ್ದೆ. ಬಿಜೆಪಿ ಸರ್ಕಾರ ಬಂದು ಐದು ಕೆಜಿ ಕೊಡುತ್ತಿದ್ದಾರೆ. ಏಳು ಕೆಜಿ ಅಕ್ಕಿ ಕೊಟ್ಟರೆ ಇವರಪ್ಪನ ಮನೆ ಗಂಟೇನು ಹೋಗುತ್ತೆ. ನಮ್ಮ ಸರ್ಕಾರ ಮತ್ತೆ ಬಂದರೆ ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ. ಬಿಜೆಪಿ ಅಂದರೆ ಡೊಂಗಿಗಳು, ಬರಿ ಸುಳ್ಳು ಹೇಳುವುದೆ ಕೆಲಸ. ಸಭ್ ಕಾ ಸಾಥ್… ಸಭ್ ಕಾ ವಿಕಾಸ್ ಅಂತಾರೆ. ಒಬ್ಬನೆ ಒಬ್ಬ ರಾಜ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಮಂತ್ರಿ ಇಲ್ಲ. ಮುಂಬಾಗಿಲ ಮೂಲಕ ಅಧಿಕಾರಕ್ಕೆ ಬಿಜೆಪಿ ಬಂದೆ ಇಲ್ಲ. ಹಿಂಬಾಗಿಲ ಮೂಲಕ ಆಪರೇಶನ್ ಕಮಲ ಮಾಡಿ ಬಂದರು. ಈಗ ಆಪರೇಶನ್ ಮಾಡಿದ ಯಡಿಯೂರಪ್ಪ ತೆಗೆದು ಬೊಮ್ಮಾಯಿ ತಂದಿದ್ದಾರೆ. ಬೊಮ್ಮಾಯಿ ಆರ್​ಎಸ್​ಎಸ್​, ಯಡಿಯೂರಪ್ಪ ಹೇಳಿದಂತೆ ಕೇಳುತ್ತಾರೆ. ಇವರಿಂದ ಯಾವ ಅಭಯ ನಿರೀಕ್ಷೆ ಮಾಡೋಕೆ ಸಾಧ್ಯ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ದಾರಿದ್ರ್ಯದ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮಾನ ಮರ್ಯಾದೆ ಇಲ್ಲದ ಸರ್ಕಾರ ಇದು. ಈ ಸರ್ಕಾರವನ್ನು ಕಿತ್ತು ಹಾಕಿ ಅಂತ ಜನರಿಗೆ ಮನವಿ ಮಾಡಿದರು. ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇರಬೇಕು. ಹೃದಯ ವೈಶಾಲ್ಯತೆ ಇದ್ರೆ ಬಡವರ ಪರ ಚಿಂತಿಸುತ್ತಾರೆ. ಗುಂಡೂರಾವ್ ಬಡವರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿದ್ದರು. ನನ್ನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಬಡವರು ಹಸಿವಿನಿಂದ ಮಲಗಬಾರದೆಂದು ಯೋಜನೆ ಜಾರಿ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತಂದ ಪ್ರಧಾನಿ ಮೋದಿ; ಇಲ್ಲಿವೆ ಫೋಟೋಗಳು

(Opposition leader Siddaramaiah talk about RSS and bjp Government in Bengaluru)