ಆರ್.ಆರ್.ನಗರ ಹಾಗೂ ಕೆಂಗೇರಿ ಪುಂಡಾಟ ಪ್ರಕರಣ; ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಆರ್.ಆರ್.ನಗರದ ಕೃಷ್ಣ ಗಾರ್ಡನ್, ಕೆಂಗೇರಿಯ ಭಾಗೇಗೌಡ ಲೇಔಟ್​ನಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರ್.ಆರ್.ನಗರ ಹಾಗೂ ಕೆಂಗೇರಿ ಪುಂಡಾಟ ಪ್ರಕರಣ; ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ
ಕಾರ್​ ಗ್ಲಾಸ್​ ಪುಡಿ ಮಾಡಿದ ವಿದ್ಯಾರ್ಥಿಗಳ ಬಂಧನ
Follow us
TV9 Web
| Updated By: preethi shettigar

Updated on:Sep 26, 2021 | 12:10 PM

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಮನೆ ಮುಂದೆ ನಿಂತಿದ್ದ ಕಾರಿನ ಗ್ಲಾಸ್​ಗಳನ್ನು ಒಡೆದು ಪರಾರಿಯಾಗಿದ್ದ ಐವರು ಆರೋಪಿಗಳನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೈಕ್​ನಲ್ಲಿ ಬಂದಿದ್ದ ಆರೋಪಿಗಳು 17 ಕ್ಕೂ ಅಧಿಕ ಕಾರ್​ಗಳ ಫ್ರೇಂಟ್ ಗ್ಲಾಸ್ ಹಾಗೂ ಸೈಡ್ ಗ್ಲಾಸ್‌ ಒಡೆದು ಪುಡಿ ಪುಡಿ ಮಾಡಿದ್ದರು. ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿತ್ತು. ಸದ್ಯ ಮದ್ಯದ ಅಮಲಿನಲ್ಲಿ ಇಂಜಿನಿಯರ್ ವಿದ್ಯಾರ್ಥಿಗಳು ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಆರ್. ಆರ್. ನಗರ ಹಾಗೂ ಕೆಂಗೇರಿಯಲ್ಲಿ ನಡೆದ ಪುಂಡಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಲಾಗಿದೆ. ಎರಡು ಬೈಕ್​ಗಳಲ್ಲಿ ಬಂದಿದ್ದ ಐವರು ಯುವಕರು, ಕೈನಲ್ಲಿ ಬ್ಯಾಟ್ ಹಿಡಿದು ಕೃತ್ಯ ಎಸಗಿದ್ದರು. ಆರ್.ಆರ್.ನಗರದ ಕೃಷ್ಣ ಗಾರ್ಡನ್, ಕೆಂಗೇರಿಯ ಭಾಗೇಗೌಡ ಲೇಔಟ್​ನಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯದ ಅಮಲಿನಲ್ಲಿ ಕೃತ್ಯ ತಡರಾತ್ರಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮದ್ಯ ಸೇವಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ನಶೆಯಲ್ಲಿಯೇ ಕಾರಿನ ಗ್ಲಾಸ್ ಒಡೆದಿದ್ದಾರೆ. ಬಂಧಿತ ವಿದ್ಯಾರ್ಥಿಗಳು ಹೊರ ರಾಜ್ಯದ ಯುವಕರು ಎಂದು ತಿಳಿದುಬಂದಿದೆ. ರಾಜಸ್ಥಾನ ಮೂಲದ ರೋಹಿನ್ ಸೈನಿ ಹುಟ್ಟುಹಬ್ಬದಲ್ಲಿ ಭಾಗಿಯಾದ ವಿದ್ಯಾರ್ಥಿಗಳು, ಈ ಕೃತ್ಯ ಎಸಗಿದ್ದಾರೆ. ಯೂಪಿ ಮೂಲದ ಸಕ್ಕಂ ಬಾರದ್ವಾಜ್,ರೋಹಿನ್ ಸೈನಿ, ಬಿಹಾರದ ಮಾಯಾಂ ವೈಆರ್, ಅದ್ನಾನ್ ಪಹಾದ್, ಜಯಸ್ ಬಂಧಿತರು.

ಇನ್ನು ಜುಲೈ ತಿಂಗಳಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಸತೀಶ್ (26) ಎಂಬಾತ ಕುಡಿದ ಮತ್ತಿನಲ್ಲಿ ಕಂಡ ಕಂಡ ಕಾರ್​ಗಳ ಗಾಜು ಹೊಡೆದು ಪುಂಡಾಟ ಮೆರೆದಿದ್ದ. ಕುಡಿದ ಮತ್ತಿನಲ್ಲಿ ಮಹಾಲಕ್ಷ್ಮೀ ಲೇಔಟ್​ನಲ್ಲಿ ಮತ್ತು ಬಸವೇಶ್ವರನಗರದಲ್ಲಿ 5 ಕಾರುಗಳನ್ನು ಜಖಂಗೊಳಿಸಿದ್ದ. ಕುಡಿದ ಮತ್ತಿನಲ್ಲಿ ಬೈಕ್​ನಲ್ಲಿ ಬಂದು ಕೃತ್ಯ ಎಸಗಿದ್ದ.

ಮನೆಗಳ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಗಾಜನ್ನು ದೊಣ್ಣೆಯಿಂದ ಹೊಡೆದು ಭೀಕರವಾಗಿ ವರ್ತಿಸಿದ್ದ. ಘಟನೆ ಬಳಿಕ ತಲಾಶ್ ಶುರು ಮಾಡಿದ್ದ ಬಸವೇಶ್ವರನಗರ ಪೊಲೀಸರು ಆರೋಪಿ ಸತೀಶ್​ನನ್ನು ಬಂಧಿಸಿದ್ದರು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಬೈಕ್​ನಲ್ಲಿ ಬಂದವರಿಂದ ಮನೆ ಮುಂದೆ ನಿಲ್ಲಿಸಿದ್ದ 17 ಕಾರಿನ ಗಾಜುಗಳು ಪುಡಿ ಪುಡಿ

ಮೊಬೈಲ್​ ಗೇಮ್​ ಆಡಿ 1.33 ಲಕ್ಷ ರೂಪಾಯಿ ಖಾಲಿ ಮಾಡಿದ ಮಗ, ನಷ್ಟ ಭರಿಸಲು ಕಾರ್​ ಮಾರಿದ ಅಪ್ಪ; ಎಚ್ಚರ ಪೋಷಕರೇ ಎಚ್ಚರ!

Published On - 11:56 am, Sun, 26 September 21