ಬೆಂಗಳೂರು: ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ್ದ ಪೋಷಕರು ರಸ್ತೆಯಲ್ಲಿ ನಿಂತು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದರು. CBSE ಮಾನ್ಯತೆ ಪಡೆದ ಶಾಲೆ ಅಂತಾ ಹೇಳಿ ಪೋಷಕರಿಂದ ಲಕ್ಷಾಂತರ ರೂ. ಹಣ ಕಟ್ಟಿಸಿಕೊಂಡಿದ್ದ ನಾಗರಬಾವಿ ಬ್ರ್ಯಾಂಚ್ನ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆ (Orchid International School) ಮಕ್ಕಳ ಭವಿಷ್ಯಕ್ಕೆ ತಣ್ಣೀರು ಎರಚಿತ್ತು. ಸದ್ಯ ಪೋಷಕರು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಇದರ ಮಧ್ಯೆ ಆರ್ಕಿಡ್ ಇಂಟರ್ನ್ಯಾಷನಲ್ ತಮ್ಮ ಬೋರ್ಡ್ ಬದಲಾವಣೆ ಮಾಡಿದೆ. CBSE ಮಾನ್ಯತೆ ಪಡೆದ ಶಾಲೆ ಅಂತಾ ಇದ್ದ ಬೋರ್ಡ್ನ್ನು ಕೊನೆಗೂ ಕೆಳಗಿಸಿದ ಶಾಲಾ ಆಡಳಿತ ಮಂಡಳಿ, 1-8ನೇ ತರಗತಿಗೆ ಕರ್ನಾಟಕದಿಂದ ಮಾನ್ಯತೆ ಪಡೆದ ಶಾಲೆ ಅಂತಾ ನಾಮಫಲಕ ಅಳವಡಿಕೆ ಮಾಡಿದೆ. ಮತ್ತೊಂದೆಡೆ ಶಾಲಾ ಮಕ್ಕಳ ಪೋಷಕರಿಂದ ಕಾನೂನು ಹೋರಾಟಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ.
ಮಹಾಲಕ್ಷ್ಮೀಲೇಔಟ್ನ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ ಮುಂದೆ ಮತ್ತೆ ಪೋಷಕರು ಜಮಾಯಿಸಿದ್ದು, ಶಾಲಾ ಆಡಳಿತ ಮಂಡಳಿ ಸಂಜೆ ಪೋಷಕರ ಸಭೆ ಕರೆದಿದೆ. ಆದರೆ ಸಭೆಗೆ ಆಹ್ವಾನಿಸಿದ ಆಡಳಿತ ಮಂಡಳಿ ಗೇಟ್ ಹೊರಗಡೆ ನಿಲ್ಲಿಸಿದ್ದು, ಮಂಡಳಿ ವರ್ತನೆಗೆ ಪೋಷಕರು ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಸಿಬಿಎಸ್ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ
ಸಿಬಿಎಸ್‌ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ. ಸ್ಟೇಟ್ ಸಿಲಬಸ್ನಲ್ಲೇ ಪರೀಕ್ಷೆ ಬರೆಯುವಂತಿದ್ದರೆ ಯಾಕೆ ಫೀಸ್ ಕಟ್ಬೇಕು. ನಾವ್ಯಾಕೆ ಲಕ್ಷ ಲಕ್ಷ ಫೀಸ್ ಕಟ್ಟಬೇಕೆಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ದಿನದಿಂದ ದಿನಕ್ಕೆ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಯ ಕಳ್ಳಾಟ ಬಯಲಾಗುತ್ತಿದೆ. ಬೆಂಗಳೂರಿನ 17 ಆರ್ಕಿಡ್ ಶಾಲೆಗಳಿಗೆ ಸಿಬಿಎಸ್‌ಇ ಮಾನ್ಯತೆ ಇಲ್ಲ.
ಮಕ್ಕಳಿಗೆ ಎಲ್‌ಕೆಜಿಯಿಂದ 12th ಸ್ಟ್ಯಾಂಡರ್ಡ್‌ವರೆಗೂ ಬೆಸ್ಟ್ ಎಜುಕೇಷನ್ ಕೊಡ್ತೀವಿ ಅಂತಾ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿರೋ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ ಸುಳ್ಳು ಹೇಳಿದೆ. ಆದ್ರೆ ಸರ್ಕಾರ ಐದು ಮತ್ತು 8ನೇ ತರಗತಿಗೆ ಪಬ್ಲಿಕ್ ಎಕ್ಸಾಂ ಮಾಡ್ತೀವಿ ಅಂತಿದ್ದಂಗೆ ಈ ಶಾಲೆಯ ಬಣ್ಣ ಬಯಲಾಗಿದೆ. ಈ ಶಾಲೆಯಲ್ಲಿರೋದು ಸಿಬಿಎಸ್‌ಇ ಅಲ್ಲ. ಸ್ಟೇಟ್ ಸಿಲೆಬಸ್ ಅಂತಾ ಅನ್ನೋದು ಜಗಜ್ಜಾಹೀರಾಗಿದೆ. ಇದರಿಂದ ಕೆರಳಿದ ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ರು. ಆದ್ರಿಗ ಈ ಒಂದು ಶಾಲೆಯಲ್ಲ. ಇದೀಗ 17 ಶಾಲೆಗಳ ನಿಜ ಬಣ್ಣ ಪೋಷಕರ ನಿದ್ದೆಗೆಡಿಸಿದೆ.
ಶಾಲೆಯ ಕಳ್ಳಾಟದ ಬಳಿಕ ಈಗ ಪೋಷಕರ ಬಳಿ ರಿಕ್ವೇಸ್ಟ್ ಮಾಡಿ ಪತ್ರದಲ್ಲಿ ಸಹಿ ಪಡೆಯುತ್ತಿದ್ದಾರೆ. ಸಿಬಿಎಸ್ಸಿ ಶಾಲೆ ಅಂತಾ ಬೇರೆ ಬೇರೆ ರಾಜ್ಯದಿಂದ ಬಂದಿರುವ ಪೋಷಕರ ಮಕ್ಕಳ ದಾಖಲಾತಿ ಮಾಡಿದ್ದಾರೆ. ಆದ್ರೆ ಈಗ ರಾಜ್ಯ ಪಠ್ಯಕ್ರಮ ಅಂದ್ರೆ ನಮ್ಮ ಮಕ್ಕಳ ಭವಿಷ್ಯ ಏನು ಅಂತಾ ಗಲಾಟೆ ಮಾಡುತ್ತಿದ್ದಾರೆ. ಸಿಬಿಎಸ್ಸಿಗೂ ರಾಜ್ಯ ಪಠ್ಯಕ್ರಮದ ಶಿಕ್ಷಣಕ್ಕೂ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಈ ಶಾಲಾ ಆಡಳಿತ ಮಂಡಳಿ ವಂಚನೆ ಮಾಡುವ ಮೂಲಕ ಪೋಷಕರನ್ನ ಪೂಲ್ ಮಾಡಿದೆ. ನಮ್ಗೆ ದುಡ್ಡು ಮುಖ್ಯ ಇಲ್ಲ. ಮಕ್ಕಳ ಭವಿಷ್ಯದ ಗತಿ ಏನು? ಇಷ್ಟು ವರ್ಷದಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗಿದೆ ಇದನ್ನ ಯಾರೂ ಕೊಡ್ತಾರೆ ಎಂದು ಪೋಷಕರು ತಮ್ಮ ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.