AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಯುವಕ ನೇಣಿಗೆ ಶರಣು

ಮೈಸೂರಿನ ಜನತಾ ನಗರದ ನಿವಾಸಿ ಲೋಹಿತ್ ರಾಜ್ (28) ಎಂಬಾತ ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತು ಯುವಕ ನೇಣಿಗೆ ಶರಣು
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 31, 2023 | 2:15 PM

Share

ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತ ಯುವಕ ಲೋಹಿತ್ ರಾಜ್ (28) ಎಂಬಾತ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಜನತಾ ನಗರದಲ್ಲಿ ನಡೆದಿದೆ. ಬಿಇ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದ ಮೃತ ಲೋಹಿತ್ ರಾಜ್ ತನ್ನ ವಿದ್ಯಾರ್ಹತೆಗೆ ಅನುಗುಣವಾದ ಉದ್ಯೋಗ ಸಿಗದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆನ್ಜ್ ಕಾರಿನಿಂದ ಹಿಟ್ ಆಂಡ್ ರನ್ ಪ್ರಕರಣ; ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ‌

ಬೆಂಗಳೂರು: ಬೆನ್ಜ್ ಕಾರಿನಿಂದ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ. ಬೆನ್ಜ್ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ‌ಯಾಗಿದೆ. ಆರ್ ಟಿ ನಗರದ ಚೋಳನಾಯಕನಹಳ್ಳಿ ನಿವಾಸಿ ಡಿ.ಎನ್ ವೆಂಕಟೇಶ್ ಮೃತ ವ್ಯಕ್ತಿಯಾಗಿದ್ದು. ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ವೆಂಕಟೇಶ್​ಗೆ ಬೆನ್ಜ್ ಕಾರೊಂದರಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಮಲ್ಲೇಶ್ವರಂನ ತನ್ನ ಅಣ್ಣನ ಮನೆಗೆ ಹೋಗಿ ಬರುತ್ತಿದ್ದ ವೆಂಕಟೇಶ್, ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ಹೊರಟಿದ್ದ. ಈ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ಅಪಘಾತ ಎಸಗಿದ ಬೆನ್ಜ್ ಕಾರು ಇನ್ನೂ ಪತ್ತೆಯಾಗಿಲ್ಲ. ಬೆನ್ಜ್ ಕಾರು ಪತ್ತೆಗೆ ಎರಡು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು. ಹೆಬ್ಬಾಳ, ಮೇಖ್ರಿ ಸರ್ಕಲ್ ಸೇರಿ ನಗರದ ಹಲವು ಕಡೆಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಕಾರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಈ ಕುರಿತು ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Uttar Pradesh Accident: ಉನ್ನಾವೋ ಬಳಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ 6 ಮಂದಿ ಸಾವು

ವಿವಿಧೆಡೆ ಬೈಕ್​ಗಳ ಕಳ್ಳತನ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ

ದೇವನಹಳ್ಳಿ: ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲು ಕಳ್ಳತನ ಮಾಡುತ್ತಿದ್ದ ಅರುಣ್ ಕುಮಾರ್ ಮತ್ತು ಶ್ರೀಧರ್ ಎಂಬಿಬ್ಬರು ಇದೀಗ ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಆರು ದ್ವೀಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಬಂಧಿತರು ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ ಮತ್ತು ತಮಿಳುನಾಡಿನಲ್ಲಿ ಕಳ್ಳತನ ಮಾಡುತ್ತಿದ್ದು, ಅರುಣ್ ಎಂಬ ಆರೋಪಿ ಮೇಲೆ ಕೊಲೆ, ಕಳ್ಳತನ ಸೇರಿದಂತೆ‌ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ದೂರುಗಳಿವೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Mon, 30 January 23

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು