PSI ನೇಮಕಾತಿ ಅಕ್ರಮ ಪ್ರಕರಣ; 400 ಕ್ಕೂ ಹೆಚ್ಚು ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ, ಗೈರಾದ ಅಭ್ಯರ್ಥಿಗಳು ನೀಡಿದ ಕಾರಣಗಳು ನೋಡಿ

| Updated By: sandhya thejappa

Updated on: May 01, 2022 | 10:56 AM

ಓಎಂಆರ್ ಶೀಟ್, ಕಾರ್ಬನ್ ಕಾಫಿ ಸಮೇತ ವಿಚಾರಣೆಗೆ ಬರುವುದಕ್ಕೆ ಸಿಐಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಕಾರ್ಬನ್ ಕಾಪಿ ಕಳೆದು ಹೋಗಿದೆ, ಆರೋಗ್ಯ ಸರಿಯಿಲ್ಲ ಎಂಬ ನಾನಾ ಕಾರಣ ನೀಡಿ ಗೈರಾದಗಿದ್ದಾರೆ.

PSI ನೇಮಕಾತಿ ಅಕ್ರಮ ಪ್ರಕರಣ; 400 ಕ್ಕೂ ಹೆಚ್ಚು ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ, ಗೈರಾದ ಅಭ್ಯರ್ಥಿಗಳು ನೀಡಿದ ಕಾರಣಗಳು ನೋಡಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಕಿಂಗ್ಪಿನ್ಗಳ ಬಂಧನವಾಗಿದೆ. ಸಿಐಡಿ (CID) ಪೊಲೀಸರು ಉತ್ತೀರ್ಣರಾಗಿದ್ದ 545 ಪಿಎಸ್ಐ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಈ ಪೈಕಿ ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಚಾರಣೆಗೆ ಒಳಗಾಗಿದ್ದರು. ಆದರೆ ಉಳಿದ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಚಾರಣೆಗೆ ಹಾಜರಾಗದೆ ಗೈರಾಗಿದ್ದಾರೆ. ಓಎಂಆರ್ ಶೀಟ್, ಕಾರ್ಬನ್ ಕಾಫಿ ಸಮೇತ ವಿಚಾರಣೆಗೆ ಬರುವುದಕ್ಕೆ ಸಿಐಡಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಕಾರ್ಬನ್ ಕಾಪಿ ಕಳೆದು ಹೋಗಿದೆ, ಆರೋಗ್ಯ ಸರಿಯಿಲ್ಲ ಎಂಬ ನಾನಾ ಕಾರಣ ನೀಡಿ ಗೈರಾದಗಿದ್ದಾರೆ. ಹೀಗೆ ಕಾರಣ ನೀಡಿ ವಿಚಾರಣೆಗೆ ತಪ್ಪಿಸಿಕೊಮಡ ಅಭ್ಯರ್ಥಿಗಳ ಮೇಲೆ ಸಿಐಡಿ ಹೆಚ್ಚು ನಿಗಾ ಇಟ್ಟಿದೆ.

ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾದ 400 ಅಭ್ಯರ್ಥಿಗಳ ಪೈಕಿ 27 ಅಭ್ಯರ್ಥಿಗಳನ್ನ ಲಿಸ್ಟ್ ಔಟ್ ಮಾಡಿದ್ದಾರೆ. ಮೊದಲ ಹಂತದಲ್ಲಿ 27 ಅಭ್ಯರ್ಥಿಗಳ ಓಎಂಆರ್​ ಹಾಗೂ ಕಾರ್ಬನ್ ಕಾಪಿ ಲಿಸ್ಟ್ ರೆಡಿ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನ FSL ಕೇಂದ್ರಕ್ಕೆ ಸಂಶಯಾಸ್ಪದ ಪ್ರತಿಗಳನ್ನ ಕಳಿಸಿಕೊಟ್ಟಿದ್ದಾರೆ.

27 ಅಭ್ಯರ್ಥಿಗಳ ಪೈಕಿ 22 ಜನ ಬೆಂಗಳೂರಿನವರು. 05 ಅಭ್ಯರ್ಥಿಗಳು ಕಲಬುರಗಿಯವರು. ಬೆಂಗಳೂರಿನ ವಿವಿಧ 07 ಪರೀಕ್ಷಾ ಕೇಂದ್ರಗಳಲ್ಲಿ 22 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕಲಬುರಗಿಯ ಒಂದೇ ಕೇಂದ್ರದಲ್ಲಿ ಐದು ಮಂದಿ ಪರೀಕ್ಷೆ ಬರೆದಿದ್ದರು. 27 ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು ಬೆಂಗಳೂರು ಮೂಲದವರು. ಆ 12 ಅಭ್ಯರ್ಥಿಗಳಲ್ಲಿ ನಿನ್ನೆ ಸಂಜೆ 9 ಜನ, ಆ ಬಳಿಕ ರಾತ್ರಿ ವೇಳೆಗೆ ಮತ್ತೆ ಮೂವರು ಸೇರಿ 12 ಜನರನ್ನು ಬಂಧಿಸಲಾಗಿದೆ.

10 ಕ್ಕೂ ಹೆಚ್ಚು ಅಭ್ಯರ್ಥಿಗಳು ಎಸ್ಕೇಪ್:
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭ್ಯರ್ಥಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಪ್ರತ್ಯೇಕ ಪ್ರಕರಣವು ಇಂದು ಸಿಐಡಿಗೆ ವರ್ಗಾವಣೆ ಸಾಧ್ಯತೆಯಿದೆ ಅಂತ ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬಂಧಿತ 12 ಮಂದಿಯನ್ನ ಸಿಐಡಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಸಿಐಡಿ ಪೊಲೀಸರಿಂದ ಅಜ್ಞಾತ ಸ್ಥಳದಲ್ಲಿ ಬಂಧಿತ 12 ಅಭ್ಯರ್ಥಿಗಳಿಗೂ ವಿಚಾರಣೆ ನಡೆಸಲಾಗುತ್ತದೆ. ಉಳಿದ 10 ಕ್ಕೂ ಹೆಚ್ಚು ಅಭ್ಯರ್ಥಿಗಳು ಎಸ್ಕೇಪ್ ಆಗಿದ್ದಾರೆ. ಬಂಧನ ಭೀತಿಯಲ್ಲಿ ಎಸ್ಕೇಪ್ ಆಗಿರುವ ಅಭ್ಯರ್ಥಿಗಳಿಗೆ ಸಿಐಡಿಯಿಂದ ತಲಾಶ್ ಮುಂದುವರೆದಿದೆ.

ಪ್ರತ್ಯೇಕ ಸಿಐಡಿ ತಂಡದಿಂದ ತನಿಖೆ:
ಸಿಐಡಿ ಅಧಿಕಾರಿಗಳ ಪ್ರತ್ಯೇಕ ತಂಡದಿಂದ ಬೆಂಗಳೂರಿನಲ್ಲಿ ಅಕ್ರಮ ಕುರಿತು ತನಿಖೆ ನಡೆಯುತ್ತದೆ. ಅಭ್ಯರ್ಥಿಗಳ ಪರೀಕ್ಷಾ ಅಕ್ರಮಕ್ಕೆ ಸಾತ್ ನೀಡಿದವರು ಯಾರು? ಯಾವೆಲ್ಲಾ ಪರೀಕ್ಷಾ ಕೇಂದ್ರಗಳು ಅಕ್ರಮ ಪರೀಕ್ಷಾ ಕೇಂದ್ರಗಳಾಗಿತ್ತು? ಬೆಂಗಳೂರಿನ ಆ ಪರೀಕ್ಷಾ ಕೇಂದ್ರಗಳ ಅವ್ಯವಹಾರದ ಹಿಂದಿನ ಕಿಂಗ್ ಪಿನ್ ಯಾರು? ಓರ್ವ ಅಭ್ಯರ್ಥಿಯಿಂದ ಎಷ್ಟು ಹಣವನ್ನು ಅಕ್ರಮ ನೇಮಕಾತಿಗೆ ಪಡೆಯಲಾಗಿದೆ? ಹಣ ಪಡೆದಿದ್ದು ಎಲ್ಲಿ? ಯಾವ ರೂಪದಲ್ಲಿ ಪಡೆಯಲಾಗಿದ್ದು? ಅಭ್ಯರ್ಥಿಗಳನ್ನ ಅಕ್ರಮ ಜಾಲಕ್ಕೆ ಎಳೆದ ಸಂಪರ್ಕಿತ ವ್ಯಕ್ತಿಗಳು ಯಾರು? ಬೆಂಗಳೂರಿನಲ್ಲಿ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಯಾರ್ಯಾರಾ ಕೈವಾಡವಿದೆ? ಹೀಗೆ ಹಲವು ಆಯಾಮಗಳಲ್ಲಿ ಅಭ್ಯರ್ಥಿಗಳನ್ನ ಸಿಐಡಿ ಪ್ರಶ್ನಿಸಲಿದೆ.

ಅಕ್ರಮದಲ್ಲಿ ‌ದೊಡ್ಡ ಮೊತ್ತವನ್ನು ಪಡೆದಿರುವ ದಿವ್ಯಾ ಹಾಗರಗಿ:
ನಿನ್ನೆ ಸತತ ಹತ್ತು ಗಂಟೆಗಳ ಕಾಲ ದಿವ್ಯಾ ಹಾಗರಗಿಯನ್ನು ಸಿಐಡಿ ವಿಚಾರಣೆ ನಡೆಸಿದೆ. ಇಂದು ಕೂಡಾ ವಿಚಾರಣೆ ಮುಂದುವರೆಯಲಿದೆ. ಅಕ್ರಮದಲ್ಲಿ ದಿವ್ಯಾ ಹಾಗರಗಿ ‌ದೊಡ್ಡ ಮೊತ್ತವನ್ನು ಪಡೆದಿರುವ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜ್ಞಾನಜೋತಿ ಶಾಲೆಯಲ್ಲಿ ಪರೀಕ್ಷಾ ಅಕ್ರಮಕ್ಕೆ ‌ಸಾಥ್ ‌ನೀಡಿದರೆ ಹಣ ನೀಡುವುದಾಗಿ ಕಿಂಗ್ ಪಿನ್​ಗಳು ಹೇಳಿದ್ದ‌ರು. ಹೆಡ್ ಮಾಸ್ಟರ್ ಕಾಶಿನಾಥ್ ಸಲಹೆ ಮೇರೆಗೆ ದಿವ್ಯಾ ಹಾಗರಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಿಂಗ್​ಪಿನ್​ಗಳು ದೊಡ್ಡ ಮೊತ್ತವನ್ನು ನೀಡಿದ್ದಾರೆ. ಹಣ ಪಡೆದು ನೀವು ಸುಮ್ಮನಾಗಿ, ಉಳಿದೆಲ್ಲವನ್ನು ನಾವು ಮಾಡುತ್ತೇವೆ ಅಂತ ಕಿಂಗ್​ಪಿನ್​ಗಳು ಹೇಳಿದ್ದರು.

ಅಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಶಾಮೀಲು ಶಂಕೆ:
ಈ ಅಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಕೆಲ ಸಿಬ್ಬಂದಿ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಅಭ್ಯರ್ಥಿಗಳನ್ನು ಕಿಂಗ್​ಪಿನ್​ಗೆ ಪರಿಚಯಿಸಿದ್ದಾರೆ. ಕೆಲವು ಅಧಿಕಾರಿಗಳು ರುದ್ರಗೌಡ ಪಾಟೀಲ್​ಗೆ ಪರಿಚಯಿಸಿದ್ದಾರೆ. ಜೊತೆಗೆ ಪೊಲೀಸ್ ಸಿಬ್ಬಂದಿಯೇ ಹಣ ನೀಡಿರುವ ಬಗ್ಗೆ ಮಾಹಿತಿ ಇದೆ. ಪ್ರಕರಣದಲ್ಲಿ ಇಬ್ಬರು ಡಿವೈಎಸ್​ಪಿ, ಓರ್ವ ಸಿಪಿಐ ಹೆಸರು ಪ್ರಸ್ತಾಪವಾಗಿದೆ. ಪೊಲೀಸ್ ಸಿಬ್ಬಂದಿ ಕೈವಾಡದ ಬಗ್ಗೆ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ. ಸೂಕ್ತ ತನಿಖೆ ನಡೆದರೆ ಮತ್ತಷ್ಟು ಅಕ್ರಮ ಬಟಾಬಯಲಾಗುತ್ತದೆ.

ಕರೆಗಳ ಮಾಹಿತಿ ಕಲೆಹಾಕಿದ ಸಿಐಡಿ ಅಧಿಕಾರಿಗಳು:
ಸಿಐಡಿ ಅಧಿಕಾರಿಗಳು ಸಾವಿರಾರು ಕರೆಗಳ ಮಾಹಿತಿ ಕಲೆಹಾಕಿದ್ದಾರೆ. ಪರೀಕ್ಷಾ ಕೇಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶದ ಕರೆಗಳ ಪರಿಶೀಲನೆ ನಡೆಸಿದ್ದಾರೆ. ಒಳಬಂದ ಮತ್ತು ಹೊರಹೋದ ಕರೆಗಳ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ

Ramadan Eid 2022 Moon Sighting: ಭಾರತ, ಸೌದಿ ಅರೇಬಿಯಾದಲ್ಲಿ ರಂಜಾನ್ ಹಬ್ಬ ಆಚರಣೆ ಯಾವಾಗ?

LPG Cylinder Price Hike: ಅಡುಗೆ ಸಿಲಿಂಡರ್ ಬೆಲೆ ಏರಿಕೆ, ನಿಮ್ಮ ಜೇಬಿಗೆ ಇನ್ನೊಂದು ಹೊರೆ

Published On - 8:12 am, Sun, 1 May 22