AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್ಐ ನೇಮಕಾತಿ ಹಗರಣ: ಬೆಂಗಳೂರಲ್ಲಿ ಬಂಧಿತ ಅಭ್ಯರ್ಥಿಗಳಿಗೆ 14-ದಿನ ಪೊಲೀಸ್ ಕಸ್ಟಡಿ

545 ಪಿಎಸ್ಐ ಪರೀಕ್ಷೆ ರದ್ದುಗೊಳಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸರ್ಕಾರದ ಅದೇಶಕ್ಕೆ ರಾಜ್ಯಪಾಲರಿಂದ ಅಂಕಿತ ಬಿದ್ದಿದೆ ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬಳಿಕ ರಾಜ್ಯ ಸರ್ಕಾರವು ತನಿಖೆಯ ಹೊಣೆಯನ್ನು ಸಿಐಡಿಯ ಹೆಗಲಿಗೆ ಹಾಕಿತ್ತು. ಉತ್ತೀರ್ಣರಾಗಿದ್ದ ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ತನಿಖಾ ವರದಿ ಸಲ್ಲಿಸಿತ್ತು.

ಪಿಎಸ್ಐ ನೇಮಕಾತಿ ಹಗರಣ: ಬೆಂಗಳೂರಲ್ಲಿ ಬಂಧಿತ ಅಭ್ಯರ್ಥಿಗಳಿಗೆ 14-ದಿನ ಪೊಲೀಸ್ ಕಸ್ಟಡಿ
ಫ್ರೀಡಂ ಪಾರ್ಕ್​ ನಲ್ಲಿ ಸತ್ಯಾಗ್ರಹ ನಡೆಸಿದ್ದ ಅಭ್ಯರ್ಥಿಗಳು
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:May 01, 2022 | 12:43 AM

Share

Bengaluru:  ಪಿ ಎಸ್ ಐ ನೇಮಕಾತಿಗಾಗಿ (PSI Recruitment) ನಡೆದ ಲಿಖಿತ ಪರೀಕ್ಷೆಯಲ್ಲಿ ಪ್ರಮುಖ ಅರೋಪಿಯೆಂದು ಹೇಳಲಾಗುತ್ತಿರುವ ಕಲಬುರಗಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುವ ದಿವ್ಯಾ ಹಾಗರಗಿ (Divya Hagargi) ಅವರನ್ನು ಬಂಧಿಸಿದ ಬಳಿಕ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ದೂರಿನನ್ವಯ ಬೆಂಗಳೂರಿನಲ್ಲಿ ಹೈಗ್ರೌಂಡ್ಸ್ ಠಾಣೆಯ (High Grounds police station) ಮೂಲಕ ಬಂಧನಕ್ಕೊಳಗಾಗಿರುವ 12 ಅಭ್ಯರ್ಥಿಗಳನ್ನು ಪೊಲೀಸ್ ಕಸ್ಟಡಿಗೆ ಕಳಿಸಲಾಗಿದೆ. ಸದರಿ ಆರೋಪಿಗಳನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಸಿಐಡಿಯ ದೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಂಧಿತ ಅರೋಪಗಳು ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿ ಎಸ್ ಐ ನೇಮಕಾತಿ ಲಿಖಿತ ಪರೀಕ್ಷೆ ಬರೆದಿದ್ದರು.

ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು 22 ಅಭ್ಯರ್ಥಿಗಳ ಒ ಎಮ್ ಆರ್ ಪ್ರತಿಗಳನ್ನು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅಭ್ಯರ್ಥಿಗಳ ಮೂಲ ಪ್ರತಿ ಮತ್ತು ಕಾರ್ಬನ್ ಒಎಮ್ ಆರ್ ಶೀಟ್ ನಲ್ಲಿ ವ್ಯತ್ಯಾಸ ಕಂಡುಬಂದ ಕಾರಣ 22 ಅಭ್ಯರ್ಥಿಗಳ ಪೈಕಿ 12 ಜನರನ್ನು ಬಂಧಿಸಲಾಗಿದೆ ಮತ್ತು ಉಳಿಸ 10 ಅಭ್ಯರ್ಥಿಗಳಿಗಾಗಿ ಜಾಲ ಬೀಸಲಾಗಿದೆ.

ಅಂದಹಾಗೆ, 545 ಪಿಎಸ್ಐ ಪರೀಕ್ಷೆ ರದ್ದುಗೊಳಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸರ್ಕಾರದ ಅದೇಶಕ್ಕೆ ರಾಜ್ಯಪಾಲರಿಂದ ಅಂಕಿತ ಬಿದ್ದಿದೆ ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬಳಿಕ ರಾಜ್ಯ ಸರ್ಕಾರವು ತನಿಖೆಯ ಹೊಣೆಯನ್ನು ಸಿಐಡಿಯ ಹೆಗಲಿಗೆ ಹಾಕಿತ್ತು. ಉತ್ತೀರ್ಣರಾಗಿದ್ದ ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ತನಿಖಾ ವರದಿ ಸಲ್ಲಿಸಿತ್ತು.

ವರದಿಯನುಸಾರ 2020-21ನೇ ಸಾಲಿನಲ್ಲಿ ನೇಮಕಾತಿ ಅಂಗವಾಗಿ ನಡೆದ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಪಾಸಾಗಿದ್ದ ಅಭ್ಯರ್ಥಿಗಳು ಇನ್ನು ಮತ್ತೊಮ್ಮೆ ಪರೀಕ್ಷೆ ಬರೆಯಬೇಕು. ರಾಜ್ಯಪಾಲರ ಆದೇಶಾನುಸಾರ ಸರ್ಕಾರ ಈ ಸಂಬಂಧ ರಾಜ್ಯಪತ್ರ ಹೊರಡಿಸಿದೆ.

ಹಾಗೆಯೇ, ಎಲ್ಲಾ 545 ಯಶಸ್ವಿ ಅಭ್ಯರ್ಥಿಗಳ ಒಎಮ್ ಅರ್ ಹಾಳೆಗಳ ವಿಧಿವಿಜ್ಞಾನ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲಾ 92 ಪರೀಕ್ಷಾ ಕೇಂದ್ರಗಳಿಂದ ಡಿಜಿಟಲ್ ತಾಂತ್ರಿಕ ಪುರಾವೆಗಳ ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗುವುದು. ಈ ಅವ್ಯವಹಾರದಲ್ಲಿ ಇತರ ವಿಧಾನಗಳನ್ನು ಅನುಸರಿಸಿದ್ದಲ್ಲಿ, ಪತ್ತೆಹಚ್ಚುವುದು ಮತ್ತು ತನಿಖೆ ಮಾಡಲಾಗುವುದು ಅಂತ ಮೂಲಗಳಿಂದ ಗೊತ್ತಾಗಿದೆ.

ವಿಚಾರಣೆ ವೇಳೆ ಹಲವರು ತಲೆಮರೆಸಿಕೊಳ್ಳಬಹುದಾದ ಸಾಧ್ಯತೆಯಿರುವುದರಿಂದ ಅಕ್ರಮದಲ್ಲಿ ಭಾಗಿಯಾಗಿರಬಹುದಾದ ಅಭ್ಯರ್ಥಿಗಳು ಮತ್ತು ಪಿತೂರಿಗಾರರನ್ನು ಬಂಧಿಸಿ ಮತ್ತು ಪ್ರಶ್ನಿಸಲು ಸಿಐಡಿ ತೀರ್ಮಾನಿಸಿದೆ..

ಮದ್ಯಂತರ ತನಿಖಾ ವರದಿಯ ಮುಖ್ಯಾಂಶಗಳು:

-ಏಪ್ರಿಲ್ 7ರಂದು ತನಿಖೆಯನ್ನ ಸಿಐಡಿಗೆ ರಾಜ್ಯ ಸರ್ಕಾರ ವಹಿಸಿತ್ತು.

-ಕಲಬುರ್ಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯೇ ಪರೀಕ್ಷಾ ಅಕ್ರಮದ ಕೇಂದ್ರ ಅಂತ ಸಾಬೀತಾಗಿದೆ.

-ಜ್ಞಾನ ಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದು ಪಾಸಾದ 11ರಲ್ಲಿ 8 ಅಭ್ಯರ್ಥಿಗಳು ಅಕ್ರಮ ನಡೆಸಿರುವರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

-ಇದುವರೆಗೆ 12 ಅಭ್ಯರ್ಥಿಗಳಲ್ಲದೆ, 3 ಪರಿವೀಕ್ಷಕರು, 3 ಇತರ ವ್ಯಕ್ತಿಗಳನ್ನು ಸಿಐಡಿ ಬಂಧಿಸಿದೆ.

-ಅಭ್ಯರ್ಥಿಗಳ ವಿಚಾರಣೆ ವೇಳೆ ಅಕ್ರಮ ಪತ್ತೆಯಾಗಿತ್ತು.

-ಮೂಲ OMR ಶೀಟ್ ಹಾಗೂ ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪರಿವೀಕ್ಷಕರು, ಶಾಲಾ ಆಡಳಿತ ಮಂಡಳಿಯ ಕೆಲ ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಯಿತು.

-3 ಅಭ್ಯರ್ಥಿಗಳು ಡಿಜಿಟಲ್ ಡಿವೈಸ್ ಗಳನ್ನು ಬಳಸಿರುವುದು ಸಾಬೀತಾಗಿದೆ.

-ಇತರ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲದಿರುವುದರಿಂದ ಹೆಚ್ಚಿನ ತನಿಖೆ ಅಗತ್ಯ ಅಂತ ಸಿಐಡಿ ಹೇಳಿದೆ.

ಏತನ್ಮಧ್ಯೆ, ಮರುಪರೀಕ್ಷೆ ನಡೆಸಲು ತೆಗೆದುಕೊಂಡಿರುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕೆಂದು ಪರೀಕ್ಷೆಯಲ್ಲಿ ಪಾಸಾಗಿರುವ ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಇದನ್ನೂ ಓದಿ:   PSI Recruitment Scam: ಅಕ್ಷರಶಃ ಏಕಾಂಗಿಯಾದ ದಿವ್ಯಾ ಹಾಗರಗಿ, ಸಿಐಡಿ ಅಧಿಕಾರಿಗಳ ಕಡಕ್​​ ಪ್ರಶ್ನೆಗಳಿಗೆ ಕುಳಿತಲ್ಲೇ ಬೆವರಿದ ಲೇಡಿ ಕಿಂಗ್​ಪಿನ್

Published On - 12:22 am, Sun, 1 May 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ