ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ ಮಗು ಅರಣ್ಯದಲ್ಲಿ ಪತ್ತೆ: ದಟ್ಟ ಕಾಡಿಗೆ ಹೋಗಿದ್ದ ಹೇಗೆಂಬುದೇ ಪ್ರಶ್ನೆ
ತಾವರಗಟ್ಟಿ ಗ್ರಾಮದ ಅದಿತಿ, ಶಿವಾಜಿ ಇಟಗೇಕರ ಎಂಬುವರ ಪುತ್ರಿ ಆದಿತಿ ಅಜ್ಜಿ ಮನೆಗೆ ಬಂದಿತ್ತು. ಮನೆ ಬಳಿ ಆಟವಾಡುತ್ತಿದ್ದ ಮಗು ಏಕಾಏಕಿ ನಾಪತ್ತೆಯಾಗಿತ್ತು.
ಬೆಳಗಾವಿ: ನಾಲ್ಕು ದಿನಗಳ ಹಿಂದೆ ನಗರದಲ್ಲಿ ನಾಪತ್ತೆಯಾಗಿದ್ದ ಮಗು ದಟ್ಟ ಅರಣ್ಯದಲ್ಲಿ ಪತ್ತೆಯಾಗಿದೆ. ಏಪ್ರಿಲ್ 26ರಂದು ಚಿರೇಖಾನಿ ಗ್ರಾಮದಿಂದ ಬೆಳಗಾವಿಯಿಂದ ನಾಪತ್ತೆಯಾಗಿದ್ದು ಮಗು ಖಾನಾಪುರ ತಾಲ್ಲೂಕಿನ ಜಾಂಬೋಟಿ ಅರಣ್ಯದಲ್ಲಿ ಪತ್ತೆಯಾಗಿದೆ. ತಾವರಗಟ್ಟಿ ಗ್ರಾಮದ ಅದಿತಿ, ಶಿವಾಜಿ ಇಟಗೇಕರ ಎಂಬುವರ ಪುತ್ರಿ ಆದಿತಿ ಅಜ್ಜಿ ಮನೆಗೆ ಬಂದಿತ್ತು. ಮನೆ ಬಳಿ ಆಟವಾಡುತ್ತಿದ್ದ ಮಗು ಏಕಾಏಕಿ ನಾಪತ್ತೆಯಾಗಿದ್ದರಿಂದ ಏಪ್ರಿಲ್ 29ರಂದು ಖಾನಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಚಿರೇಖಾನಿ ಸುತ್ತಮುತ್ತಲಿನ ಗ್ರಾಮಗಳು ಮತ್ತು ಅರಣ್ಯ ಪ್ರದೇಶದಲ್ಲಿ ಮಗುವಿಗಾಗಿ ಶೋಧ ನಡೆಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಜತೆ ಜಾಂಬೋಟಿ ಅರಣ್ಯದಲ್ಲಿಯೂ ಹುಡುಕಾಟ ನಡೆಸಲಾಯಿತು. ಈ ವೇಳೆ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಮಗು ಅದಿತಿ ಪತ್ತೆಯಾಗಿತ್ತು. ತಕ್ಷಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಅಗತ್ಯ ಚಿಕಿತ್ಸೆ ಕೊಡಿಸಿದ್ದರು. ಬಾಲಕಿ ಚೇತರಿಸಿಕೊಂಡ ನಂತರ ಮಗುವನ್ನು ಮನೆಗೆ ಕರೆದೊಯ್ಯಲಾಯಿತು. ಮಗು ದಟ್ಟ ಅರಣ್ಯಕ್ಕೆ ಹೋಗಿದ್ದು ಹೇಗೆ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಬೆಳಗಾವಿಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು
ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಸರ್ದಾರ್ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲೇಜಿನ ಸ್ಟಾಫ್ ರೂಮ್ನಲ್ಲಿ ಅತಿಥಿ ಉಪನ್ಯಾಸಕಿಯರು ಹಿಗ್ಗಾಮಗ್ಗಾ ಥಳಿಸಿದ್ದಾರೆ.
ಉಪನ್ಯಾಸಕ ಅಮಿತ್ ನಿತ್ಯ ಕಾಲೇಜಿಗೆ ಮದ್ಯಸೇವಿಸಿ ಬಂದು ಸ್ಟಾಫ್ ರೂಮ್ನಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದನಂತೆ. ಹಲವು ಬಾರಿ ವಾರ್ನಿಂಗ್ ಕೊಟ್ಟರೂ ಚಾಳಿ ಬಿಡದ ಹಿನ್ನೆಲೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ರೂಮ್‌ನಲ್ಲೇ ಅತಿಥಿ ಉಪನ್ಯಾಸಕಿಯರು ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾರೆ. ಅತಿಥಿ ಉಪನ್ಯಾಸಕಿಯರು ಥಳಿಸುವ ವಿಡಿಯೋ ವೈರಲ್ ಆಗಿದೆ. ಉಪನ್ಯಾಸಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು ನಾಪತ್ತೆ ಕೇಸ್; ಮಗು ಅಪಹರಿಸಿದ ಮಹಿಳೆ ವಿಡಿಯೋ ಲಭ್ಯ
ಇದನ್ನೂ ಓದಿ: Unsung Hero: ನಾಪತ್ತೆಯಾಗಿದ್ದ ಮಗುವನ್ನು ರಕ್ಷಿಸಿ ರಾತ್ರೋರಾತ್ರಿ ಪ್ರಸಿದ್ಧಳಾದ ಶಾಲಾ ಬಾಲಕಿ
Published On - 7:24 am, Sun, 1 May 22