AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು ನಾಪತ್ತೆ ಕೇಸ್; ಮಗು ಅಪಹರಿಸಿದ ಮಹಿಳೆ ವಿಡಿಯೋ ಲಭ್ಯ

ಮಗು ಮಾರಾಟ ಜಾಲದ ಶಂಕೆ ವ್ಯಕ್ತವಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಉಮಾಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಗಳು. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದೇ ತಿಂಗಳ 16 ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ.

ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು ನಾಪತ್ತೆ ಕೇಸ್; ಮಗು ಅಪಹರಿಸಿದ ಮಹಿಳೆ ವಿಡಿಯೋ ಲಭ್ಯ
ಮಗು ಅಪಹರಣ ಮಾಡಿರುವ ಮಹಿಳೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
TV9 Web
| Updated By: sandhya thejappa|

Updated on:Mar 30, 2022 | 11:41 AM

Share

ದಾವಣಗೆರೆ: ಹೆರಿಗೆಯಾದ ಎರಡು ಗಂಟೆಯಲ್ಲಿ ಮಗು (Baby) ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ನಾಪತ್ತೆಯಾಗಿ ಹದಿನಾಲ್ಕು ದಿನವಾದರೂ ಪತ್ತೆ ಆಗಿಲ್ಲ. ಸದ್ಯ ಮಗು ಅಪಹರಿಸಿದ ಮಹಿಳೆ ವಿಡಿಯೋ ಲಭ್ಯವಾಗಿದೆ. ತಲೆಗೆ ಬಿಳಿ ಸ್ಕಾರ್ಫ್, ಗುಲಾಬಿ ಬಣ್ಣದ ಚೂಡಿ ಹಾಕಿದ ಮಹಿಳೆಯಿಂದ ಮಗು ಅಪಹರಣವಾಗಿದೆ (Kidnap). ಉಮಾಸಲ್ಮಾ(22) ಹದಿನಾಲ್ಕು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿತ್ತು. ನಂತರ ಮಗು ನಾಪತ್ತೆಯಾಗಿದ್ದಾಗಿ ತಿಳಿಸಿದ್ದಾರೆ.

ಮಗು ಮಾರಾಟ ಜಾಲದ ಶಂಕೆ ವ್ಯಕ್ತವಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಉಮಾಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಗಳು. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದೇ ತಿಂಗಳ 16 ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಹೆರಿಗೆ ಬಳಿಕ ಮಗುವಿಗೆ ಬಟ್ಟೆ ತರಲು ಸಿಬ್ಬಂದಿ ಹೇಳಿತ್ತು. ತಂದೆ ಬಟ್ಟೆ ತರುವಷ್ಟರಲ್ಲಿ ಮಗು ನಾಪತ್ತೆಯಾಗಿದೆ. ಮಗು ಸಿಗುವ ತನಕ ಹೋರಾಟ ನಡೆಸುತ್ತೇವೆ ಅಂತ ಪಾಲಕರು ಆಕ್ರೋಶ ಹೊರಹಾಕಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು: ವಿಜಯನಗರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದರಂಗಾರೆಡ್ಡಿ ಮೃತ ವ್ಯಕ್ತಿ. ರಂಗಾರೆಡ್ಡಿ ಕಳೆದ ವರ್ಷ ಕೊವಿಡ್​ನಿಂದ ಪತ್ನಿ ಕಳೆದುಕೊಂಡಿದ್ದರು. ಹೆಂಡತಿಯ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೊಳಾಗಾಗಿದ್ದರು. ಹೊಸಪೇಟೆಯ ಬಸ್ ನಿಲ್ದಾಣದ ಬಳಿಯ ಲಾಡ್ಜ್​ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ

ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ

ಹಲಾಟ್ ಕಟ್, ಜಟ್ಕಾ ಕಟ್ ಎಂದರೇನು? ಇವುಗಳ ನಡುವಿನ ವ್ಯತ್ಯಾಸ ಇಲ್ಲಿದೆ

Published On - 11:36 am, Wed, 30 March 22