ಬೆಂಗಳೂರು: ಹಿಂದೂಸ್ತಾನಿ ಸಂಗೀತದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪಡೆದ, ಕನ್ನಡದ ಕಣ್ಮಣಿ ಪಂಡಿತ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿ ಸಂದರ್ಭ ಈಗ. ಪಂಡಿತ ಡಾ. ಭೀಮಸೇನ ಜೋಶಿ ಕರುನಾಡಿನ ಕುವರ. ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಹುಟ್ಟಿ ವಿಶ್ವದಾದ್ಯಂತ ಹಿಂದುಸ್ತಾನಿ ಸಂಗೀತ ರಸದೌತಣ ನೀಡಿದವರು. ಈಗ ಅವರ ಜನ್ಮಶತಾಬ್ದಿ ಇರುವ ಹಿನ್ನೆಲೆಯಲ್ಲಿ ಹಿಂದೂಸ್ತಾನಿ ಸಂಗೀತ ಪ್ರೇಮಿಗಳಿಗೆ ಇದೇ ವಾರಾಂತ್ಯ ಪೂರ್ಣಾಹುತಿ ಸಂಗೀತೋತ್ಸವ ರಸದೌತಣ (Pandit Bhimsen Joshi Purnahuti Sangeethotsava) ಅರ್ಪಿಸಲು ಸಿದ್ಧತೆಗಳು ನಡೆದಿವೆ, ಈ ಮೂಲಕ ಡಾ. ಭೀಮಸೇನ ಜೋಶಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.
ಪುಣೆಯ ಸಂಗೀತಾಚಾರ್ಯ ಪಂಡಿತ ಡಿ.ವಿ. ಕಾಣೆಬುವಾ ಪ್ರತಿಷ್ಠಾನವು ಬೆಂಗಳೂರು ದಕ್ಷಿಣ ಭಾಗದ ಎನ್ ಆರ್ ಕಾಲೋನಿಯಲ್ಲಿರುವ ರಾಮಮಂದಿರ ಬಳಿಯ ಪತ್ತಿ ಸಭಾಂಗಣದಲ್ಲಿ(NR Colony Bangalre on March 19 and 20) ಇದೇ ವಾರಾಂತ್ಯ ಅಂದರೆ ಶನಿವಾರ-ಭಾನುವಾರ (ಮಾರ್ಚ್ 19 ಮತ್ತು 20) ಪೂರ್ಣಾಹುತಿ ಸಂಗೀತ ಉತ್ಸವ ಹಮ್ಮಿಕೊಳ್ಳಲಾಗಿದೆ (Celebration of the birth centenary of Bharat Ratna Pandit Bhimsen Joshi ).
ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಜನ್ಮಶತಾಬ್ದಿ ಕಾರ್ಯಕ್ರಮ:
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷರಾದ ಗೋವಿಂದ್ ಬೆಡೇಕರ್ ಅವರು ಪೂರ್ಣಾಹುತಿ ಉತ್ಸವವನ್ನು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ನಡೆಸಲಿದ್ದೇವೆ. ಮಾರ್ಚ್ 19 ಶನಿವಾರದಂದು ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ. ಕಿರ್ಲೋಸ್ಕರ್ ಫರಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ವಿ ಗುಮಾಸ್ತೆ ಅವರು ಉಪಸ್ಥಿತರಾಗಲಿದ್ದಾರೆ.
ಮಾರ್ಚ್ 20 ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ವರೆಗೂ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಕುಮಾರ್ ಮತ್ತು ಉಲ್ಲಾಸ್ ಕಶಾಲ್ಕರ್, ವಿದುಷಿ ಆರತಿ ಅಂಕಲೀಕರ್, ಮಂಜೂಷಾ ಪಾಟೀಲ್ ಗಾಯನ ನಡೆಸಿಕೊಡಲಿದ್ದಾರೆ. ಕುಮಾರ್ ಬೋಸ್ (ತಬಲಾ) ಮತ್ಉ ರಾಕೇಶ್ ಚೌರಾಸಿಯಾ (ಕೊಳಲು) ಸಾಥ್ ನೀಡಲಿದ್ದಾರೆ.
ಇದನ್ನೂ ಓದಿ:
ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
Published On - 2:09 pm, Wed, 9 March 22