ಬಾಲಕನಿಗೆ ಅಪರೂಪದ ಕಾಯಿಲೆ; ಚಿಕಿತ್ಸೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ ತಂದೆ

Karnataka HC: ಚಿಕಿತ್ಸೆಗೆ 16 ಕೋಟಿ ರೂಪಾಯಿ ಮೌಲ್ಯದ ಔಷಧ ಆಮದು ಅಗತ್ಯ ಇದೆ ಎಂದು ತಿಳಿದುಬಂದಿದೆ. ಈವರೆಗೆ 8.24 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ. ಹಣಕಾಸಿನ ನೆರವಿಗೆ ನಿರ್ದೇಶನ ಕೋರಿರುವ ಜನೀಶ್, ವಕೀಲ ಪ್ರಿನ್ಸ್ ಐಸಾಕ್​​ರಿಂದ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

ಬಾಲಕನಿಗೆ ಅಪರೂಪದ ಕಾಯಿಲೆ; ಚಿಕಿತ್ಸೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ ತಂದೆ
ಹೈಕೋರ್ಟ್
Updated By: ganapathi bhat

Updated on: Sep 27, 2021 | 4:04 PM

ಬೆಂಗಳೂರು: ಅಪರೂಪದ ಕಾಯಿಲೆಗೆ ಚಿಕಿತ್ಸೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಮಾಸ್ಟರ್ ಜನೀಶ್ ಎಂಬ ಬಾಲಕನ ತಂದೆಯಿಂದ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ನಿಂದ‌‌ ನೋಟಿಸ್ ಜಾರಿ ಮಾಡಲಾಗಿದೆ. ಮಗುವಿನ ಜೀವದ ವಿಚಾರವಾದ್ದರಿಂದ ಶೀಘ್ರ ನಿಲುವು ತಿಳಿಸಿ ಎಂದು ವಿಳಂಬ ಮಾಡದಂತೆ ಸರ್ಕಾರಕ್ಕೆ ನ್ಯಾ. ಕೃಷ್ಣ, ಎಸ್. ದೀಕ್ಷಿತ್ ಸೂಚನೆ ನೀಡಿದ್ದಾರೆ. ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಒದಗಿಸಲು ಸೂಚನೆ ಕೊಡಲಾಗಿದೆ. ಈ ಬಗ್ಗೆ ಮಗುವಿನ ತಂದೆಗೂ ಹೈಕೋರ್ಟ್ ನಿರ್ದೇಶನ ನೀಡಿದೆ.

ಇದು ಮೇಲ್ನೋಟಕ್ಕೆ ಅಪರೂಪದ ಕಾಯಿಲೆಯಂತಿದೆ. ಅಪರೂಪದ‌ ಕಾಯಿಲೆ ಚಿಕಿತ್ಸೆಗೆ ಪ್ರತ್ಯೇಕ ನೀತಿಯಿದೆ. ಈ ಬಗ್ಗೆ ವೈದ್ಯಕೀಯ ತಜ್ಞರು ತೀರ್ಮಾನಿಸಬೇಕಿದೆ ಎಂದು ಹೈಕೋರ್ಟ್​​ಗೆ ಕೇಂದ್ರ ಸರ್ಕಾರದ ವಕೀಲರು ಹೇಳಿಕೆ ನೀಡಿದ್ದಾರೆ. ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್​ 1ಕ್ಕೆ ನಿಗದಿಪಡಿಸಿದೆ. ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೊಫಿಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿಕಿತ್ಸೆಗೆ 16 ಕೋಟಿ ರೂಪಾಯಿ ಮೌಲ್ಯದ ಔಷಧ ಆಮದು ಅಗತ್ಯ ಇದೆ ಎಂದು ತಿಳಿದುಬಂದಿದೆ. ಈವರೆಗೆ 8.24 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ. ಹಣಕಾಸಿನ ನೆರವಿಗೆ ನಿರ್ದೇಶನ ಕೋರಿರುವ ಜನೀಶ್, ವಕೀಲ ಪ್ರಿನ್ಸ್ ಐಸಾಕ್​​ರಿಂದ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಸರ್ಕಾರದ ಉದ್ದೇಶಿತ ಆನ್​​ಲೈನ್ ರಮ್ಮಿ ನಿಷೇಧವನ್ನು ರದ್ದುಗೊಳಿಸಿದ ಹೈಕೋರ್ಟ್

ಇದನ್ನೂ ಓದಿ: ಭಾರತದ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರ ಮೀಸಲಾತಿ ಅಗತ್ಯ: ಸುಪ್ರೀಂಕೋರ್ಟ್​ ಸಿಜೆ ರಮಣ