ಕಾಂಗ್ರೆಸ್ ಇವತ್ತು ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದೆ; ಭಾರತ್ ಬಂದ್ ವಿಫಲವಾಗಿದೆ: ಸಿಟಿ ರವಿ ವಾಗ್ದಾಳಿ
CT Ravi Press Meet: ರೈತರಿಗೆ 6000 ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ಮೋದಿ ಹಾಕಿರೋದು. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ. ಸಿದ್ದರಾಮಯ್ಯ ಮತ್ತೆ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿ.ಟಿ. ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಇಂದು ಕರೆ ನೀಡಿದ್ದ ಭಾರತ್ ಬಂದ್ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ರೈತರಿದ್ದಾರೆ ಅನ್ನುವುದು ಗೊತ್ತಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟ ಮಾಡಿದ್ದರು. ಬಿಜೆಪಿ ರೈತರ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಅರಾಜಕತೆ ಹುಟ್ಟುಹಾಕುವ ಅವರ ಪ್ರಯತ್ನ ವಿಫಲವಾಗಿದೆ. ಇನ್ನಾದ್ರೂ ಅರಾಜಕತೆ ಹುಟ್ಟುಹಾಕುವುದು ನಿಲ್ಲಿಸಬೇಕು. ಕೃಷಿ ತಿದ್ದುಪಡಿ ಕಾಯ್ದೆಗಳನ್ನ ರೈತರು ಒಪ್ಪಿಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಕೊವಿಡ್ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ನಾವು ಅಡಿಕೆ ಬೆಳೆಯುತ್ತೇವೆ. ಯಾವ ಕಾಲಕ್ಕೆ ಸಿಗದ ಬೆಲೆ ಇವಾಗ ನಮಗೆ ಅಡಿಕೆಗೆ ಬೆಲೆ ಸಿಕ್ಕಿದೆ. ರೈತರಿಗೆ 6000 ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ಮೋದಿ ಹಾಕಿರೋದು. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ. ಸಿದ್ದರಾಮಯ್ಯ ಮತ್ತೆ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿ.ಟಿ. ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಯಸ್ಸಾದ್ಮೇಲೆ ಕಣ್ಣಿನ ಪೊರೆ ಜಾಸ್ತಿ ಆದಂತೆ ಅವರಿಗೆ ಯಾವ ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಇಲ್ಲಿ ಬಿಜೆಪಿ, ತಾಲಿಬಾನ್ ಒಂದೆ ಆಗಿದ್ರೆ, ಸಿದ್ದರಾಮಯ್ಯ ಪರಿಸ್ಥಿತಿ ಏನು ಆಗ್ತಿತ್ತು. ಅಫ್ಘಾನಿಸ್ತಾನದಲ್ಲಿ ವಿಪಕ್ಷಗಳನ್ನು ಕ್ರೇನ್ನಲ್ಲಿ ನೇತು ಹಾಕಿದ್ದಾರೆ. ಅದರಂತೆ ಇಲ್ಲಿ ಬಿಜೆಪಿ ತಾಲಿಬಾನ್ ಆಗಿದ್ರೆ ಅವರ ಸ್ಥಿತಿಗತಿ ಏನು ಆಗ್ತಿತ್ತು. ಅವರನ್ನು ಕ್ರೇನ್ ಮೂಲಕ ನೇತಾಡಿಸ್ತಿದ್ರೆ ಅವ್ರ ಪಂಚೇ ಏನು ಆಗ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು ಕೊಟ್ಟಿದ್ದಾರೆ.
ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ಗೆ ಕೇಳಲು ಬಯಸುತ್ತೇನೆ. ಅವರಿಬ್ಬರು ಪ್ರೊ. ನಂಜುಂಡಸ್ವಾಮಿ ಅವರ ಹಳೇ ಕ್ಯಾಸೆಟ್ ಹಾಕಿಕೊಂಡು ಕೇಳಲಿ. ನಾವು ಬೆಳೆದ ಬೆಳೆಯ ಬೆಲೆಯನ್ನು ಅವನ್ಯಾರು ನಿರ್ಧಾರ ಮಾಡೋನು ಅಂದಿದ್ರು. ಅದನ್ನ ಇವರೆಲ್ಲ ಮರೆತುಬಿಟ್ಟರಾ? ರೈತ ತನ್ನ ಬೆಳೆಗೆ ಒಪ್ಪಂದ ಮಾಡಿಕೊಳ್ಳೋದು ತಪ್ಪಾ? ಕಾಯ್ದೆಯ ಲೋಪ ಏನು ಅಂತಾ ಹೇಳಲಿ ಅವರು. ಅವರೆಲ್ಲ ನಕಲಿ ಹೋರಾಟಗಾರರು ಅಂತಾ ಹೇಳಲ್ಲ. ಕೆಲವರು ಮಾತ್ರ ಅದಕ್ಕೆ ಅನ್ವಯವಾಗ್ತಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಯಾವುದೇ ತೆರಿಗೆ ಹೇರಿದ್ರು, ರಾಜ್ಯಕ್ಕೆ 47ರಷ್ಟು ವಾಪಸ್ ಬರಲಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ 6 ಸಾವಿರ ರೈತರಿಗೆ ಹೋಗ್ತಿದೆ. ಕೇವಲ ಮಸಾಲೆ ಪದಾರ್ಥ ಹೆಚ್ಚಾಗಿದೆ ಅಂತಿರೋ ಸಿದ್ದರಾಮಯ್ಯ ಜಾಣ ಮರೆವು ಪ್ರದರ್ಶಿಸುತ್ತಿದ್ದಾರೆ. ನಾವೂ ಸುಧಾರಣೆ ತರುವ ಸಾಕಷ್ಟು ಯೋಜನೆಗಳನ್ನ ತರುತ್ತಿದ್ದೇವೆ. ಆದ್ರೆ ನಮ್ಮ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಸಾವಯುವ ಕೃಷಿಯನ್ನೇ ಬ್ರಾಂಡ್ ಮಾಡಿ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಅಭಿವೃದ್ಧಿ ಮಾಡುತ್ತಿರುವ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ದಲ್ಲಾಳಿ ಪರವಾಗಿ ಕೆಲವರು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಇವತ್ತು ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ದಲ್ಲಾಳಿಗಳ ಪರ ಮಾಡುತ್ತಿರುವ ರಾಕ್ಷಸರು ಈ ಹೋರಾಟಗಾರರು ಎಂದು ಸಿ.ಟಿ. ರವಿ ಆಕ್ರೋಶ ಹೊರಹಾಕಿದ್ದಾರೆ.
ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಯನ್ನ ನಾವೂ ರದ್ದುಪಡಿಸಿಲ್ಲ. ನಾವು ಅದಾನಿ ಅಂಬಾನಿ ಪರ ಅಂತಾರೆ. ಮೋದಿ ಬಂದ್ಮೇಲೆ ಅದಾನಿ ಅಂಬಾನಿ ಹುಟ್ಟಿದ್ರಾ? ನಾವೂ ರೈತರ ಪರ ಮಾಡಿದ್ರೆ ತಪ್ಪಾ? ನಾವೂ ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ವಿ. ಈ ಯೋಜನೆ ಮೂಲಕ ದಲ್ಲಾಳಿಗಳಿಂದ ರೈತರನ್ನ ಬಿಡುಗಡೆ ಮಾಡಿದ್ವಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Bharat Bandh: ಕೇಂದ್ರದ ಕೃಷಿ ಕಾನೂನು ವಿರುದ್ಧ ಭಾರತ್ ಬಂದ್; ರೈತರ ಪ್ರತಿಭಟನೆಯ ಫೋಟೊಗಳು ಇಲ್ಲಿವೆ
ಇದನ್ನೂ ಓದಿ: ’ಕೇಂದ್ರ ಸರ್ಕಾರಕ್ಕೆ ಅರ್ಥವಾಗುವುದಿಲ್ಲ..‘-ಭಾರತ್ ಬಂದ್ಗೆ ಬೆಂಬಲ ಸೂಚಿಸಿದ ರಾಹುಲ್ ಗಾಂಧಿ
Published On - 5:58 pm, Mon, 27 September 21