ಪೋಷಕರೇ ಎಚ್ಚರ ಎಚ್ಚರ; ಮಕ್ಕಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ ದೃಷ್ಠಿ ಸಮಸ್ಯೆ
ಕೊವಿಡ್ ನಂತ್ರ ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡ್ತಾ ಇದ್ದೀರಿ? ಹೀಗ್ಯಾಕೆ ಕೇಳ್ತಾ ಇದ್ದೀವಿ ಅಂದ್ರೆ, ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾಣವಾಗ್ತೀದೆ. ಕೊರೊನಾ ಬಂದ ಬಳಿಕ ಮಕ್ಕಳ ಕಲಿಕಯ ಜೊತೆ ವರ್ತನೆ ಅಡಿಕ್ಷನ್ ಗಳು ಬದಲಾಗಿ ಹೋಗಿವೆ. ಮಕ್ಕಳಲ್ಲಿ ದೃಷ್ಠಿ ಸಮಸ್ಯೆ ಹೆಚ್ಚಾಗುತ್ತಿದೆ.
ಬೆಂಗಳೂರು, ಅ.14: ಕ್ಲಾಸ್ ರೂಮ್ನಲ್ಲಿ ಸರಿಯಾಗಿ ಬೋರ್ಡ್ ಕಾಣಿಸ್ತಿಲ್ಲ ಅಂತ ನಿಮ್ಮ ಮಗು ಕಂಪ್ಲೇಂಟ್ ಮಾಡ್ತಿದೆಯಾ? ಅದೆಷ್ಟು ಸಲ ಕರೆದ್ರೂ ನಿಮ್ಮ ಮಗು ರೆಸ್ಪಾಂಡ್ ಮಾಡ್ತಿಲ್ವ? ಯಾವಗಲೂ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡ್ಕೊಂಡೇ ಇರ್ತರಾ ಹಾಗಿದ್ರೆ ಇನ್ನು ತಡ ಮಾಡಬೇಡಿ. ನಿಮ್ಮ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ. ಇತ್ತೀಚೆಗೆ ಶಾಲಾ ಮಕ್ಕಳಲ್ಲಿ ದೃಷ್ಠಿ ಸಮಸ್ಯೆ ಶುರುವಾಗಿದ್ದು ಶಾಕಿಂಗ್ ಸುದ್ದಿಯನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ.
ಕೊವಿಡ್ ನಂತ್ರ ಮಕ್ಕಳ ಆರೋಗ್ಯ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಿ? ನಿಮ್ಮ ಮಕ್ಕಳ ಆರೋಗ್ಯ ಬೆಳವಣಿಗೆ ಬಗ್ಗೆ ಅದೆಷ್ಟು ಫಾಲೋ ಮಾಡ್ತಾ ಇದ್ದೀರಿ? ಹೀಗ್ಯಾಕೆ ಕೇಳ್ತಾ ಇದ್ದೀವಿ ಅಂದ್ರೆ, ಇತ್ತೀಚಿಗೆ ಮಕ್ಕಳಲ್ಲಿ ನಿರಂತರ ಮೊಬೈಲ್ ಬಳಕೆ ನಾನಾ ಅವಾಂತರಕ್ಕೆ ಕಾಣವಾಗ್ತೀದೆ. ಕೊರೊನಾ ಬಂದ ಬಳಿಕ ಮಕ್ಕಳ ಕಲಿಕಯ ಜೊತೆ ವರ್ತನೆ ಅಡಿಕ್ಷನ್ ಗಳು ಬದಲಾಗಿ ಹೋಗಿವೆ. ಮನೆಯವರನ್ನು ಮರಿಬಹುದು, ಆದ್ರೆ ಮೊಬೈಲ್ ಮರೆಯೋಕ್ಕೆ ಚ್ಯಾನ್ಸ್ ಇಲ್ಲ ಎಂಬಂತಾಗಿದೆ ಸದ್ಯ ಮಕ್ಕಳ ಪರಿಸ್ಥಿತಿ. ಅದ್ರಲ್ಲೂ ಕೋವಿಡ್ ಕಾರಣ ಮಕ್ಕಳ ಕೈಗೂ ಮೊಬೈಲ್ ಬಂದ ಬಳಿಕವಂತೂ ಮಕ್ಕಳ ಮೊಬೈಲ್ ನಲ್ಲಿ ಕಳೆದು ಹೋಗುತ್ತಿದ್ದು ಅತಿಯಾದ ಮೊಬೈಲ್ ಚಟ ಮಕ್ಕಳ ದೃಷ್ಠಿ ಸಮಸ್ಯೆಗೆ ಕಾರಣವಾಗಿರುವ ಆತಂಕಕಾರಿಯಾದ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ
1.73,099 ಲಕ್ಷ ಶಾಲಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ
ಕೊವಿಡ್ ಬಳಿಕ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಅಂತ ದಿನದ 10 ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ರೂ. ನಿತ್ಯ ಮೊಬೈಲ್ ಇಂಟರ್ನನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಈಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಕೆಲಸನೇ ಇಲ್ಲ, ಓದು ಮೊದಲೇ ಇಲ್ಲ ಅಂತಿದ್ದಾರೆ. ಹೀಗಾಗಿ ಶಾಲಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಕಂಡು ಬರ್ತಿವೆಯಂತೆ. ಶಾಲಾ ಮಕ್ಕಳಲ್ಲಿ ರಿಪ್ರೆಕ್ಟಿವ್ ಎರರ್ ನಿಂದ ರಾಜ್ಯದಲ್ಲಿ ನೂರಲ್ಲ ಸಾವಿರಲ್ಲ ಬರೊಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ದೃಷ್ಠಿ ದೋಷ ಕಂಡು ಬಂದಿದೆ. 1.73,099 ಲಕ್ಷ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇರೋದನ್ನ ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. 2022-23 ನೇ ಸಾಲಿನಲ್ಲಿ ಆರೋಗ್ಯ ಇಲಾಖೆ 62,08779 ಮಕ್ಕಳಿಗೆ ದೃಷ್ಠಿ ದೋಷ ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಆತಂಕಕಾರಿಯಾದ ಅಂಶವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ. 62,08779 ಮಕ್ಕಳಲ್ಲಿ ಬರೊಬ್ಬರಿ 1.73,099 ಲಕ್ಷ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇದ್ದು ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆ ಸ್ಪೆಕ್ಟಿಕಲ್ಸ್ ನೀಡಿದೆ.
ಇದನ್ನೂ ಓದಿ: ಪಾಸ್‌ಪೋರ್ಟ್ ಹಗರಣದಲ್ಲಿ 24 ಮಂದಿ ಸರ್ಕಾರಿ ಅಧಿಕಾರಿಗಳ ಬಂಧನ, 50 ಸ್ಥಳಗಳಲ್ಲಿ ಸಿಬಿಐ ಶೋಧ
ಇನ್ನೂ ಶಾಲಾ ಮಕ್ಕಳಲ್ಲಿ ಹಚ್ಚಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ ಹಿನ್ನಲೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ಮಕ್ಕಳು ಊಟಕ್ಕೆ ಹಠ ಮಾಡ್ತಾರೆ ಓದಲು ಕಿರಿಕ್ ಮಾಡ್ತಾರೆ. ಮಕ್ಕಳ ಹಠಮಾಡ್ತಾರೆ ಅಂತಾ ಮಕ್ಕಳ ಕೈಗೆ ಮೊಬೈಲ್ ಇಡುವ ಮುನ್ನ ವೈದ್ಯರು ಎಚ್ಚರ ಅಂತಿದ್ದು. ಕೊವಿಡ್ ಬಳಿಕ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿರುವುದರಿಂದ ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶುರುವಾಗಿದೆ. ದೂರ ದೃಷ್ಠಿ ಸಮಸ್ಯೆ ಹಾಗೂ ಸಮೀಪ ದೃಷ್ಠಿ ಸಮಸ್ಯೆ ಮಕ್ಕಳಿಗೆ ಕಾಡ್ತೀದೆ. ಮಕ್ಕಳ ನಿರಂತರ ಮೊಬೈಲ್ ಗೀಳಿಗೆ ಬಲಿಯಾಗ್ತೀದ್ದು ಹೀಗಾಗಿ ಆರೋಗ್ಯ ಇಲಾಖೆ ರಾಜ್ಯದ ಶಾಲಾ ಮಕ್ಕಳ ಕಣ್ಣಿನ ತಪಾಷಣೆಗೆ ಮುಂದಾಗಿದೆ.
ಒಟ್ನಲ್ಲಿ ಮಕ್ಕಳು ಮೊಬೈಲ್ಗೆ ದಾಸರಾಗಿರುವುದು ಸುಳ್ಳಲ್ಲ. ಮೀತಿ ಮಿರಿದ ಮೊಬೈಲ್ ಬಳಕೆ ಮಕ್ಕಳ ಕಣ್ಣಿನ ಸಮಸ್ಯೆ ದೃಷ್ಠಿ ದೋಷಕ್ಕೆ ಕಾಣವಾಗ್ತೀದ್ದು ಇನ್ನಾದ್ರೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನಹರಿಸಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ