ಹೊಡೆಯಲ್ಲ ಬೈಯಲ್ಲ, ದಮ್ಮಯ್ಯ ಅಂತೀವಿ ಮೊದಲು ಮನೆಗೆ ಬನ್ನಿ: ಬೆಂಗಳೂರಿನಲ್ಲಿ ನಾಪತ್ತೆಯಾದ 4 ಮಕ್ಕಳ ಪೋಷಕರ ಮನವಿ

ಮಕ್ಕಳು ನಿನ್ನೆ (ಅ.10) ಬೆಳಗ್ಗೆ ಹೋಗಿರುವವರು ಇನ್ನು ಮನೆಗೆ ಬಂದಿಲ್ಲ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಮಕ್ಕಳ ಚಲನವಲನ ಸೆರೆಯಾಗಿದೆ. ಪೊಲೀಸರ ಜೊತೆಗೆ ನಾವು ತನಿಖೆಗೆ ಸಹಕರಿಸುತ್ತಿದ್ದೇವೆ.

ಹೊಡೆಯಲ್ಲ ಬೈಯಲ್ಲ, ದಮ್ಮಯ್ಯ ಅಂತೀವಿ ಮೊದಲು ಮನೆಗೆ ಬನ್ನಿ: ಬೆಂಗಳೂರಿನಲ್ಲಿ ನಾಪತ್ತೆಯಾದ 4 ಮಕ್ಕಳ ಪೋಷಕರ ಮನವಿ
ಹೊಡೆಯಲ್ಲ ಬೈಯಲ್ಲ, ದಮ್ಮಯ್ಯ ಅಂತೀವಿ ಮೊದಲು ಮನೆಗೆ ಬನ್ನಿ: ಬೆಂಗಳೂರಿನಲ್ಲಿ ನಾಪತ್ತೆಯಾದ 4 ಮಕ್ಕಳ ಪೋಷಕರ ಮನವಿ
Edited By:

Updated on: Oct 11, 2021 | 11:46 AM

ಬೆಂಗಳೂರು: ಮನೆ ತೊರೆದಿದ್ದ ಏಳು ಮಕ್ಕಳಲ್ಲಿ ಸದ್ಯ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಇನ್ನುಳಿದ ನಾಲ್ವರು ಮಕ್ಕಳ ಬಗ್ಗೆ ಮಾಹಿತಿ ದೊರೆತಿಲ್ಲ. ನಾಪತ್ತೆಯಾದ ನಾಲ್ವರು ಮಕ್ಕಳ ಪೋಷಕರು, ಎಲ್ಲೇ ಇದ್ದರೂ ಬೇಗ ಮನೆಗೆ ಬನ್ನಿ ಅಂತ ಮನವಿ ಮಾಡುತ್ತಿದ್ದಾರೆ. ನಾವು ನಿಮ್ಮನ್ನು ಹೊಡೆಯುವುದಿಲ್ಲ, ಬಯ್ಯುವುದಿಲ್ಲ. ನೀವು ಹೊರಗಡೆ ಇದ್ದರೆ ನಿಮಗೆ ತೊಂದರೆಯಾಗುತ್ತದೆ. ಬೃಗ ಮನೆಗೆ ಬನ್ನಿ ಅಂತ ಮಕ್ಕಳ ಪೋಷಕರು ಕಣ್ಣೀರು ಹಾಕುತ್ತ ಮನವಿ ಮಾಡುತ್ತಿದ್ದಾರೆ. 

ಮಕ್ಕಳು ನಿನ್ನೆ (ಅ.10) ಬೆಳಗ್ಗೆ ಹೋಗಿರುವವರು ಇನ್ನು ಮನೆಗೆ ಬಂದಿಲ್ಲ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಮಕ್ಕಳ ಚಲನವಲನ ಸೆರೆಯಾಗಿದೆ. ಪೊಲೀಸರ ಜೊತೆಗೆ ನಾವು ತನಿಖೆಗೆ ಸಹಕರಿಸುತ್ತಿದ್ದೇವೆ. ಕೊನೆಯದಾಗಿ ಚಿಕ್ಕಬಾಣವಾರ ರೈಲ್ವೆ ನಿಲ್ದಾಣಕ್ಕೆ ಹೋಗಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ನಂತರ ಯಶವಂತಪುರ ರೈಲು ನಿಲ್ದಾಣದಲ್ಲಿ ಯಾವುದೇ ಕುರುವು ಪತ್ತೆಯಾಗಿಲ್ಲ ಅಂತ ನಾಪತ್ತೆಯಾಗಿರುವ ಮಕ್ಕಳ ಪೋಷಕರು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ತಂಡ ರಚನೆ

ನಾಪತ್ತೆಯಾಗಿರುವ ನಾಲ್ವರು ಮಕ್ಕಳು ಎಲ್ಲಿಗೆ ಹೋಗಿದ್ದಾರೆಂಬ ಮಾಹಿತಿ ಇಲ್ಲ. ನಾಪತ್ತೆಯಾದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಗಾಗಿ ಪತ್ತೆಗಾಗಿ ಸೋಲದೇವನಹಳ್ಳಿ ಪೊಲೀಸರಿಂದ ಪ್ರತ್ಯೇಕ ತಂಡ ರಚನೆಯಾಗಿದೆ. ಸೋಲದೇವನಹಳ್ಳಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ನಾಲ್ವರು ಮಕ್ಕಳ ಚಲನವಲನ ಪತ್ತೆಯಾಗಿದೆ. ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಮಕ್ಕಳು ಎಲ್ಲಿಗೆ ಹೋಗಿದ್ದಾರೆಂಬ ಖಚಿತ ಮಾಹಿತಿ ಇಲ್ಲ. ಹೀಗಾಗಿ ಪ್ರತ್ಯೇಕ ತಂಡಗಳಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ?

Maharashtra Bandh: ಲಖಿಂಪುರ ಖೇರಿಯ ರೈತರ ಹತ್ಯೆ ವಿರೋಧಿಸಿ ಇಂದು ಮಹಾರಾಷ್ಟ್ರ ಬಂದ್

Published On - 11:16 am, Mon, 11 October 21