BMTC: ಬಿಎಂಟಿಸಿ ಬಸ್​ ಚಾಲಕ, ನಿರ್ವಾಹಕನ ಕರ್ತವ್ಯ ನಿಷ್ಠೆಗೆ ಸಲಾಂ

|

Updated on: May 16, 2023 | 9:13 PM

ಬಿಎಂಟಿಸಿ ಬಸ್​ನಲ್ಲಿ ಬಿಟ್ಟುಹೋಗಿದ್ದ ಬ್ಯಾಗ್ ಅನ್ನು ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ.

BMTC: ಬಿಎಂಟಿಸಿ ಬಸ್​ ಚಾಲಕ, ನಿರ್ವಾಹಕನ ಕರ್ತವ್ಯ ನಿಷ್ಠೆಗೆ ಸಲಾಂ
ಬಸ್​ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ ಬಿಎಂಟಿಸಿ ಬಸ್​ ಚಾಲಕ ಹಾಗೂ ನಿರ್ವಾಹಕ
Follow us on

ಬೆಂಗಳೂರು: ಬಸ್ ಹಾಗೂ ಆಟೋದಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಕೆಲವೊಮ್ಮೆ ತಮ್ಮ ಅಮೂಲ್ಯವಾದ ವಸ್ತುಗಳನ್ನು ಬಿಟ್ಟು ಹೋಗುತ್ತಾರೆ. ಚಿನ್ನಾಭರಣ, ನಗದು ಇರುವ ಪರ್ಸ್ ಅಥವಾ ಇನ್ಯಾವುದೇ ವಸ್ತು. ಇಂತಹ ಸಂದರ್ಭದಲ್ಲಿ ಚಾಲಕರು ಅಥವಾ ನಿರ್ವಾಹಕರು ಮಾನವೀಯತೆ ಮರೆದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಬೆಂಗಳೂರಿನಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಬಿಎಂಟಿಸಿ (BMTC) ಬಸ್​ನಲ್ಲಿ ಬಿಟ್ಟುಹೋಗಿದ್ದ ಬ್ಯಾಗ್ ಅನ್ನು ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ (ಮೇ 15) ಬೆಳಿಗ್ಗೆ ಪ್ರಯಾಣಿಕರೊಬ್ಬರು ತಮ್ಮ ಲಗೇಜ್​ ಅನ್ನು ಬಿಎಂಸಿಟಿ (ಬಿಐಎಎಲ್ -8 ರಲ್ಲಿ) ಬಸ್​ನಲ್ಲಿ ಬಿಟ್ಟು ಹೋಗಿದ್ದರು. ಬಸ್ ವಿಮಾನ ನಿಲ್ದಾಣಕ್ಕೆ ಹಿಂದಿರುಗುವ ವೇಳೆ ತನ್ನ ಬ್ಯಾಗ್ ಅನ್ನು ಪ್ರಯಾಣಿಕ ವಾಪಸ್ ಪಡೆದಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಬಿಎಂಟಿಸಿ ಹಾಗೂ ಬಸ್​ ನಿರ್ಹಾಕರನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿನ ಕಾರಿಗೆ ಬಿಎಂಟಿಸಿ ಬಸ್​ ನಂಬರ್ ಪ್ಲೇಟ್, ನಿವೃತ್ತ ಬಿಎಂಟಿಸಿ ಚಾಲಕನಿಗೆ ವಿಶೇಷ ಗೌರವ

Sood_Geet ಎಂಬ ಟ್ವಿಟರ್​ ಖಾತೆಯಲ್ಲಿ ನಿನ್ನೆ ಬೆಳಗ್ಗೆ ಟ್ವೀಟ್ ಮಾಡಲಾಗಿದ್ದು, “ಬೆಳಿಗ್ಗೆ ಬಿಐಎಎಲ್ -8 ನಲ್ಲಿ ಬ್ಯಾಗ್​ ಅನ್ನು ಬಿಟ್ಟು ಹೋಗಲಾಗಿತ್ತು. ಈ ಬಗ್ಗೆ ಬಸ್ ಡಿಪೋವನ್ನು ಸಂಪರ್ಕಿಸಿ ಚಾಲಕನ ಸಂಖ್ಯೆಯನ್ನು ಪಡೆದುಕೊಂಡ ಪ್ರಯಾಣಿಕ, ಬಸ್ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಮಾರ್ಗದಲ್ಲಿ ತನ್ನ ಬ್ಯಾಗ್ ಅನ್ನು ಸ್ವೀಕರಿಸಿದ್ದಾರೆ, ಧನ್ಯವಾದಗಳು” ಎಂದು ಬರೆದು ಫೋಟೋ ಹಂಚಿಕೊಳ್ಳಲಾಗಿದೆ.

ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ಪೋಸ್ಟ್​ ಅನ್ನು 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 200ಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಒಂದಷ್ಟು ನೆಟ್ಟಿಗರು ಮಾಹಿತಿಯನ್ನು ಹಂಚಿಕೊಂಡಿದ್ದು, ಇನ್ನು ಕೆಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಬಿಎಂಟಿಸಿ ಸಿಬ್ಬಂದಿ ಯಾವಾಗಲೂ ಸಹಾಯ ಮಾಡುತ್ತಾರೆ ಮತ್ತು ಸೌಜನ್ಯದಿಂದ ವರ್ತಿಸುತ್ತಾರೆ, ವಿಶೇಷವಾಗಿ ನೀವು ಬಿಐಎಎಲ್​ನಿಂದ ಬರುವಾಗ ಅಥವಾ ನಗರಕ್ಕೆ ಹೋಗುವಾಗ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Tue, 16 May 23