ಬೆಂಗಳೂರು: ನವೆಂಬರ್ನಲ್ಲಿ ಅರೆಸ್ಟ್ ಆದ ಪಾಸ್ ಪೋರ್ಟ್ ಗ್ಯಾಂಗ್ ಭಾರತೀಯ ಪಾಸ್ ಪೋರ್ಟ್ ಅನ್ನು ಕಡ್ಲೆಪುರಿಯಂತೆ ಹಂಚುತ್ತಿತ್ತು, ಶಾಕಿಂಗ್!
ಈ ಗ್ಯಾಂಗ್ ವಿದೇಶಿಗರಿಗೆ ಭಾರತೀಯ ಪಾಸ್ ಪೊರ್ಟ್ ಮಾಡಿಕೊಡುತ್ತಿದ್ದರು. ನಕಲಿ ದಾಖಲೆಗಳ ಬಳಸಿ ಅದೆಷ್ಟೋ ಶ್ರೀಲಂಕಾದ ಪ್ರಜೆಗಳಿಗೆ ಭಾರತೀಯ ಪಾಸ್ ಪೋರ್ಟ್ ಮಾಡಿಕೊಟ್ಟಿದ್ದಾರೆ.
ಬೆಂಗಳೂರು: ಕಳೆದ ವರ್ಷ ನವೆಂಬರ್ನಲ್ಲಿ ಬಸವನಗುಡಿ ಪೊಲೀಸರಿಂದ ಸಿಕ್ಕಿ ಬಿದಿದ್ದ ಪಾಸ್ ಪೋರ್ಟ್ ಕಳ್ಳಾಟದ ಗ್ಯಾಂಗ್ನ ಮತ್ತಷ್ಟು ಸ್ಪೋಟಕ ಸಂಗತಿ ಬಯಲಾಗಿದೆ. ಈ ಗ್ಯಾಂಗ್ ಮಾಡುತ್ತಿದ್ದ ಖತರ್ನಾಕ್ ಕೆಲಸಗಳ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರೇ ಶಾಕ್ ಆಗಿದ್ದಾರೆ.
ಈ ಗ್ಯಾಂಗ್ ವಿದೇಶಿಗರಿಗೆ ಭಾರತೀಯ ಪಾಸ್ ಪೊರ್ಟ್ ಮಾಡಿಕೊಡುತ್ತಿದ್ದರು. ನಕಲಿ ದಾಖಲೆಗಳ ಬಳಸಿ ಅದೆಷ್ಟೋ ಶ್ರೀಲಂಕಾದ ಪ್ರಜೆಗಳಿಗೆ ಭಾರತೀಯ ಪಾಸ್ ಪೋರ್ಟ್ ಮಾಡಿಕೊಟ್ಟಿದ್ದಾರೆ. ಪೊಲೀಸರು ತನಿಖೆಯ ಆಳಕ್ಕಿಳಿದಾಗ ಈ ಎಲ್ಲಾ ಸ್ಪೋಟಕ ಸಂಗತಿ ಬಯಲಾಗಿದೆ.
ಬಂಧಿತ ಅಮಿನ್ ಶೇಟ್ ವಿಚಾರಣೆ ವೇಳೆ ಬಯಲಾದ ಶ್ರೀಲಂಕಾ ಡೀಲ್
ವಿಚಾರಣೆ ವೇಳೆ ಅಮಿನ್ ಶೇಟ್ ನೀಡಿದ ಮಾಹಿತಿ ಆಧರಿಸಿ ಗುಜರಾತ್ನಲ್ಲಿ ಶಿಬುನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಶಿಬು ಫ್ರಾನ್ಸ್ ನಲ್ಲಿ ಕೆಲಸ ಮಾಡಿದ್ದ. ಶೆಫ್ ಆಗಿದ್ದಾಗ ಶ್ರೀಲಂಕಾದ ಬ್ರೋಕರ್ಗಳ ಪರಿಚಯವಾಗಿದೆ. ಈ ಮೂಲಕ ಶ್ರೀಲಂಕಾದ ಜನರು ಭಾರತಕ್ಕೆ ಬರುತಿದ್ದರು. ಶ್ರೀಲಂಕಾದಿಂದ ಬಂದವರಿಗೆ ಭಾರತೀಯ ಪಾಸ್ ಪೋರ್ಟ್ ನೀಡಿ ಅವರಿಗೆ ನೆಲೆಸಲು ಸಹಾಯ ಮಾಡುತ್ತಿದ್ದನಂತೆ.
ಇದನ್ನೂ ಓದಿ: Fake passport: ಕೊಲೆ ಪ್ರಕರಣದ ತನಿಖೆ ವೇಳೆ ಪಾಸ್‌ಪೋರ್ಟ್ ಜಾಲ ಬೆಳಕಿಗೆ, ಗ್ಯಾಂಗ್ ಸೆರೆ
ಜಸ್ಟ್ ಮಿಸ್ ಆದ ಮಾಸ್ಟರ್ ಮೈಂಡ್
ಶಬರಿ ಮಲೆಯಲ್ಲಿ ನಡೆಯಬೇಕಿದ್ದ ಆಪರೇಷನ್ನಲ್ಲಿ ಆರೋಪಿ, ಈ ಗ್ಯಾಂಗ್ನ ಮಾಸ್ಟರ್ ಮೈಂಡ್ ಮಿಸ್ ಆಗಿದ್ದಾನೆ. ಈತ ಫ್ರಾನ್ಸ್ ನಲ್ಲಿರುವ ಪಾಸ್ ಫೋರ್ಟ್ ದಂಧೆಯ ಕಿಂಗ್ ಪಿನ್. ಆತನಿಗಾಗಿ ಬಸವನಗುಡಿ ಪೊಲೀಸರು ಬಲೆ ಬೀಸಿದ್ದಾರೆ. ಜನವರಿ 14ರಂದು ಶಬರಿ ಮಲೈಗೆ ಬರುವುದಾಗಿ ಮಾಹಿತಿ ಇತ್ತು. ಹೀಗಾಗಿ ಮಾಹಿತಿ ಆಧರಿಸಿ ಅಂದು ಶಬರಿ ಮಲೈನಲ್ಲಿ ಪೊಲೀಸರು ಕಾದು ಕುಳಿತಿದ್ದರು. ಆದರೇ ಆತ ಬರದ ಕಾರಣ ಬರಿಗೈನಲ್ಲಿ ವಾಪಾಸ್ ಆಗಿದ್ದರು. ಸದ್ಯ ಪಾಸ್ ಪೋರ್ಟ್ನ ಇಬ್ಬರು ಅಧಿಕಾರಿಗಳು ಸಹ ಪೊಲೀಸರಿಗೆ ಲಾಕ್ ಆಗಿದ್ದಾರೆ. ಜೊತೆಗೆ ಈವರೆಗೂ ಐವರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 14 ಜನರ ಬಂಧನವಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ವೇಳೆ ಅಸಲಿ ಪಾಸ್ ಫೋರ್ಟ್ ಹಿಂದಿನ ನಕಲಿ ದಾಖಲೆಗಳ ಮಾಹಿತಿ ಬಯಲು ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:19 am, Wed, 1 February 23