Smart Parking: ಬೆಂಗಳೂರಿನ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದ ಬಿಬಿಎಂಪಿ
ನಗರದ 85 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಗೆ ಸಿದ್ಧತೆ ನಡೆದಿದ್ದು ಈಗಾಗಲೇ ನಗರದಲ್ಲಿ 10 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಬಿಬಿಎಂಪಿ ಮುಂದಾಗಿದೆ. ನಗರದ 85 ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆಗೆ ಸಿದ್ಧತೆ ನಡೆದಿದ್ದು ಈಗಾಗಲೇ ನಗರದಲ್ಲಿ 10 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ 1 ತಿಂಗಳಲ್ಲಿ 35 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದಾಗಿ ಟಿವಿ9ಗೆ ಬಿಬಿಎಂಪಿ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್‌ನ ಮುಖ್ಯಸ್ಥ ಪ್ರವೀಣ್ ಲಿಂಗಯ್ಯ ತಿಳಿಸಿದ್ದಾರೆ.
ಕನ್ನಿಂಗ್ ಹ್ಯಾಮ್, ಕಸ್ತೂರಿ ಬಾ ರಸ್ತೆ, ಆಲಿ ಆಸ್ಕರ್ ಚರ್ಚ್ ಸ್ಟ್ರೀಟ್ ರಸ್ತೆ ಸೇರಿದಂತೆ ಈಗಾಗಲೇ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಆಗಿದೆ. ಮುಂದಿನ ತಿಂಗಳಲ್ಲಿ 35 ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತೆ.
ಈ ವಾರದ ಅಂತ್ಯಕ್ಕೆ ಬಿಡಬ್ಲ್ಯೂಎಸ್ಎಸ್ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ ಬೆಂಗಳೂರು: ನಗರದಲ್ಲಿ ಅನುಮತಿ ಪಡೆಯದೆ ರಸ್ತೆ ಅಗೆದ ಹಿನ್ನೆಲೆ ಬಿಡಬ್ಲ್ಯೂಎಸ್ಎಸ್ಬಿ (BWSSB), ಬೆಸ್ಕಾಂ(BESCOM) ವಿರುದ್ಧ ವಾರಾಂತ್ಯಕ್ಕೆ ವಿವಿಧೆಡೆ 13 FIR ದಾಖಲಿಸಲು ಬಿಬಿಎಂಪಿ ತೀರ್ಮಾನಿಸಿದೆ. ಕಂಡ ಕಂಡಲ್ಲಿ ಅನುಮತಿ ಇಲ್ಲದೆ ಬೆಸ್ಕಾಂ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಇಲಾಖೆಗಳು ಬಿಬಿಎಂಪಿ ರಸ್ತೆಗಳನ್ನ ಅಗೆಯುತ್ತಿದ್ದು ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪಾಲಿಕೆ ಪತ್ರ ಬರೆದಿದ್ದು ಅನುಮತಿ ಇಲ್ಲದೇ ರಸ್ತೆ ಅಗೆದರೆ FIR ದಾಖಲಿಸಲು ಮನವಿ ಮಾಡಿಕೊಂಡಿದೆ.
ಯಾರೇ ರಸ್ತೆ ಅಗೆದ್ರೂ ಬೋರ್ಡ್ ಹಾಕುವುದು ಕಡ್ಡಾಯ. Utility service provider ಸಂಬಂಧಿತ ಸ್ಪಷ್ಟ ಮಾಹಿತಿ ಇರುವ ಬೋರ್ಡ್ ಹಾಕಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಇನ್ನು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತಕರು ಇತ್ತೀಚೆಗೆ ರಸ್ತೆ ಗುಂಡಿಗೆ ಮಹಿಳೆ ಬಲಿ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದರು. ಅಂಜನಾನಗರ ಮುಖ್ಯ ರಸ್ತೆಯಲ್ಲಿ ಜಲಮಂಡಳಿ ರಸ್ತೆ ಅಗೆದು ದುರಸ್ತಿ ಕಾರ್ಯ ಮಾಡಿರಲಿಲ್ಲ. ಸಾರ್ವಜನಿಕವಾಗಿ ಪಾಲಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸ್ಥಳೀಯ ಆರ್ಆರ್ ನಗರ ಇಇ ಸಹ ಅಮಾನತು ಮಾಡಲಾಗಿತ್ತು. ಈಗ ಪಾಲಿಕೆಯಿಂದ ಬೇರೆ ಇಲಾಖೆಗಳಿಗೆ ಎಚ್ಚರಿಕೆ ನೀಡುವ ಪರ್ವ ಶುರುವಾಗಿದೆ. ಈ ವಾರದ ಅಂತ್ಯಕ್ಕೆ ನಗರದ 13 ಕಡೆ BESCOM, BWSSB ವಿರುದ್ಧ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಆ ಟೀಕೆಗಳನ್ನು ಅನುಮೋದಿಸುವುದಿಲ್ಲ: ರಾಹುಲ್ ಗಾಂಧಿ ಆರೋಪ ಬಗ್ಗೆ ಯುಎಸ್ ವಕ್ತಾರರ ಪ್ರತಿಕ್ರಿಯೆ
Published On - 1:01 pm, Thu, 3 February 22