ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನ ಅವಾಚ್ಯ ಶಬ್ದಗಳಿಂದ ನಿಂದನೆ! ಆರೋಪಿಯನ್ನು ಬಂಧಿಸಲು ಆಗ್ರಹ

ಸಮಾಜ ಘಾತುಕ ಹೇಳಿಕೆ ನೀಡಿ, ಮುಖ್ಯಮಂತ್ರಿಗಳನ್ನೆ ಕೀಳು ಶಬ್ದದಲ್ಲಿ ನಿಂದಿಸಿದ್ದ ಶಾಬಾಜ್ ಖಾನ್ ವಿರುದ್ಧ ಭರತ್ ಶೆಟ್ಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನ ಅವಾಚ್ಯ ಶಬ್ದಗಳಿಂದ ನಿಂದನೆ! ಆರೋಪಿಯನ್ನು ಬಂಧಿಸಲು ಆಗ್ರಹ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Updated By: sandhya thejappa

Updated on: Mar 26, 2022 | 9:11 AM

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಹೊಳೆನರಸೀಪುರ ನಿವಾಸಿ ಶಾಬಾಝ್ ಉಲ್ಲಾ ಖಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯೂಟ್ಯೂಬ್ (Youtube) ಚಾನಲ್ ಒಂದರಲ್ಲಿ ಆರೋಪಿ ಮುಖ್ಯಮಂತ್ರಿ ಬಗ್ಗೆ ಕೀಳು ಶಬ್ಧಗಳಿಂದ ನಿಂದನೆ ಮಾಡಿದ್ದಾನೆ. ಈತ ಪಾಕಿಸ್ತಾನದಿಂದ ಕರೆ ಬರ್ತಿದೆ ಎಂದು ಹೇಳಿದ್ದ. ಅಷ್ಟೆ ಅಲ್ಲದೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದ. ಈ ಹಿನ್ನೆಲೆ ಡಿಸಿಪಿ ಅನುಚೇತ್ ಕಚೇರಿಗೆ ಭೇಟಿ ನೀಡಿದ ಕನ್ನಡ ಪರ ಸಂಘಟನೆ ದೂರು ನೀಡಿದೆ.

ಸಮಾಜ ಘಾತುಕ ಹೇಳಿಕೆ ನೀಡಿ, ಮುಖ್ಯಮಂತ್ರಿಗಳನ್ನೆ ಕೀಳು ಶಬ್ದದಲ್ಲಿ ನಿಂದಿಸಿದ್ದ ಶಾಬಾಜ್ ಖಾನ್ ವಿರುದ್ಧ ಭರತ್ ಶೆಟ್ಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಧಾರವಾಡ, ಹಾವೇರಿ ಜಿಲ್ಲೆಗೆ ಸಿಎಂ ಭೇಟಿ:
ಹುಬ್ಬಳ್ಳಿ: ಇಂದು ಧಾರವಾಡ, ಹಾವೇರಿ ಜಿಲ್ಲೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ವಿಮಾನದ ಮೂಲಕ ಸಿಎಂ ಹುಬ್ಬಳ್ಳಿಗೆ ಅಗಮಿಸಲಿದ್ದಾರೆ. 10 ಗಂಟೆಗೆ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಹಾವೇರಿ ಜಿಲ್ಲೆಗೆ ಪಯಣ ಬೆಳೆಸುತ್ತಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿತ್ತಾರೆ.

ಸಂಜೆ 4 ಗಂಟೆಗೆ ಸವಣೂರಿನಿಂದ ಹುಬ್ಬಳ್ಳಿಗೆ ಅಗಮಿಸಲಿರುವ ಸಿಎಂ, ಹುಬ್ಬಳ್ಳಿಯಲ್ಲಿ ಸಂಜೆವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ

ರಜೆಯನ್ನ ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ

ಡಿಜಿಟಲ್ ಚಿನ್ನವನ್ನ ಕಡಿಮೆ ಬೆಲೆಯಲ್ಲಿ ಸುಲಭವಾಗಿ ಕೊಳ್ಳುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

Published On - 8:59 am, Sat, 26 March 22