ರಾಜ್ಯದಲ್ಲಿ ಕೋವಿಡ್ ರೂಲ್ಸ್ ಬ್ರೇಕ್; ನಿಯಮ ಗಾಳಿಗೆ ತೂರಿ ಮಾಸ್ಕ್ ಇಲ್ಲದೆ ಜನ ಸಂದಣಿ ಪ್ರದೇಶದಲ್ಲಿ ಓಡಾಟ

| Updated By: ಆಯೇಷಾ ಬಾನು

Updated on: Dec 27, 2022 | 9:35 AM

Corona Rules Violation: ಬೆಂಗಳೂರಿನ ಕೆಆರ್​ ಮಾರ್ಕೆಟ್​ನಲ್ಲಿ ಮಾಸ್ಕ್ ಇಲ್ಲದೇ ಜನ ಓಡಾಡುತ್ತಿದ್ದಾರೆ. ಮಾಸ್ಕ್​ ಇಲ್ಲದೆಯೇ ವ್ಯಾಪಾರ ವಹಿಪಾಟಿನಲ್ಲಿ ಮುಳುಗಿದ್ದಾರೆ.

ರಾಜ್ಯದಲ್ಲಿ ಕೋವಿಡ್ ರೂಲ್ಸ್ ಬ್ರೇಕ್; ನಿಯಮ ಗಾಳಿಗೆ ತೂರಿ ಮಾಸ್ಕ್ ಇಲ್ಲದೆ ಜನ ಸಂದಣಿ ಪ್ರದೇಶದಲ್ಲಿ ಓಡಾಟ
ಬಗಲಕೋಟೆಯ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೆ ವ್ಯಾಪಾರಕ್ಕೆ ಇಳಿದಿರುವ ಜನ
Follow us on

ಬೆಂಗಳೂರು: ಚೀನಾದಲ್ಲಿ ಕೊರೊನಾದ ರೂಪಾಂತರಿ ಬಿಎಫ್​.7 ಹೆಚ್ಚಾಗುತ್ತಿದ್ದಂತೆ ಕರ್ನಾಟಕದಲ್ಲೂ ಅಲರ್ಟ್ ಮಾಡಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತೆ ಕೊರೊನಾ ರೂಲ್ಸ್​ಗಳನ್ನ ಜಾರಿಗೆ ತಂದಿದೆ. ಪ್ರಾಥಮಿಕ ಹಂತದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕೆಲ ಸರಳ ರೂಲ್ಸ್​ಗಳನ್ನ ಸರ್ಕಾರ ಹೊರಡಿಸಿದೆ. ಶಾಲೆ, ಕಾಲೇಜುಗಳಲ್ಲಿ, ಥಿಯೇಟರ್, ಮಾಲ್, ಮಾರ್ಕೆಟ್​ನಲ್ಲಿ ಮಾಸ್ಕ ಕಡ್ಡಾಯ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಕೊರೊನಾ ರೂಲ್ಸನ್ನು ಜನ ಕ್ಯಾರೇ ಎನ್ನುತ್ತಿಲ್ಲ. ಬಹುತೇಕ ಕೊರೊನಾ ರೂಲ್ಸ್​ ಉಲ್ಲಂಘನೆಯಾಗಿದೆ.

ಬೆಂಗಳೂರಿನ ಕೆಆರ್​ ಮಾರ್ಕೆಟ್​ನಲ್ಲಿ ಮಾಸ್ಕ್ ಇಲ್ಲದೇ ಜನ ಓಡಾಡುತ್ತಿದ್ದಾರೆ. ಮಾಸ್ಕ್​ ಇಲ್ಲದೆಯೇ ವ್ಯಾಪಾರ ವಹಿಪಾಟಿನಲ್ಲಿ ಮುಳುಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದಾರೆ. ಈ ವೇಳೆ ಮಾತನಾಡಿದ ವ್ಯಾಪಾರಿಯೊಬ್ಬರು, ಸರ್ಕಾರದ ಮಾಸ್ಕ್ ಆದೇಶ ಒಳ್ಳೆಯ ವಿಚಾರ. ಮಾಸ್ಕ್ ಹಾಕೊಂಡು ವ್ಯಾಪಾರ ಮಾಡೊದ್ರಿಂದ ಯಾವುದೇ ಸಮಸ್ಯೆ ಇಲ್ಲ. ಎಲ್ಲರಿಗೂ ಅದು ಒಳ್ಳೆಯದು. ಈಗ ಮಾಸ್ಕ್ ಹಾಕೊಂಡ್ರೆ ಮುಂದಾಗೊ ಸಮಸ್ಯೆ ತಡೆಯಬಹುದು. ಆದ್ರೆ ಮುಂದೆ ಲಾಕ್ ಡೌನ್ ಆದ್ರೆ ಆಗ ಸಮಸ್ಯೆ ಆಗತ್ತೆ. ಸದ್ಯ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿರೊದನ್ನ ಜನರು ಪಾಲನೆ ಮಾಡಬೇಕು ಎಂದರು.

ಮತ್ತೊಂದೆಡೆ ಮಾತನಾಡಿದ ಸಾರ್ವಜನಿಕರೊಬ್ಬರು ಸರ್ಕಾರದ ವಿರುದ್ಧ ಗರಂ ಆದ್ರು. ಯಾವ ಕೊರೊನಾನೂ ಇಲ್ಲ. ಜನರು ಈಗಲೇ ಸಮಸ್ಯೆಗಳನ್ನ ಅನುಭವಿಸುತಿದ್ದಾರೆ. ಹೀಗೆ ಮುಂದುವರಿದ್ರೆ ಜನ ಸಾಯಬೇಕು ಅಷ್ಟೇ. ಸರ್ಕಾರದ ರಾಜಕೀಯ ವ್ಯಕ್ತಿಗಳೇ ಮಾಸ್ಕ್ ಹಾಕಲ್ಲ. ಇಲ್ಲದೇ ಇರೊದನ್ನ ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲ ಮುಗಿದು ಈಗ ಚೇತರಿಕೆ ಅಂತ ಒಂದಿಷ್ಟು ವ್ಯಾಪಾರ ಆಗ್ತಿತ್ತು. ಈಗ ಮತ್ತೆ 20 ಪರ್ಸೆಂಟ್ ಕೂಡ ವ್ಯಾಪಾರ ಇಲ್ಲ. ಇವರ ಹೊಸ ರೂಲ್ಸ್ ನಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಸರ್ಕಾರ ಬೇಕು ಅಂತ ಇದನ್ನ ಮಾಡುತ್ತಿದೆ. ಜನರಿಗೆ ಹೊಟ್ಟೆ ಮೇಲೆ ಹೊಡಿಬೇಕು, ತೊಂದರೆ ಕೊಡಬೇಕು ಅಂತನೆ ಹೀಗೆ ಮಾಡುತಿದ್ದಾರೆ. ಬಿಜೆಪಿಯವರು ಜನರಿಗೆ ಒಳ್ಳೆದು ಏನು ಮಾಡ್ತಿಲ್ಲ ಎಂದರು.

ಇದನ್ನೂ ಓದಿ: ಕೋಟಿಗಟ್ಟಲೆ ಜನರಿಗೆ ಕೊರೊನಾವೈರಸ್​​ ಸೋಂಕು; ಕೋವಿಡ್​​ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ ಚೀನಾ ಜನ

ಬಿಎಂಟಿಸಿ ಕಂಡಕ್ಟರ್ ಡ್ರೈವರ್​ಗಳೇ ಹಾಕ್ತಿಲ್ಲ ಮಾಸ್ಕ್

ಬೆಂಗಳೂರು ನಗರದಲ್ಲಿ ಕೊವಿಡ್ ಗೈಡ್​ಲೈನ್ಸ್ ಪಾಲನೆಯಾಗ್ತಿಲ್ಲ. ಬಿಎಂಟಿಸಿ ಬಸ್​ ಚಾಲಕ ಹಾಗೂ ನಿರ್ವಾಹಕರೇ ಮಾಸ್ಕ್ ಧರಿಸುತ್ತಿಲ್ಲ. ವೋಲ್ವೋ ಬಸ್​ ಚಾಲಕರು, ನಿರ್ವಾಹಕರು ಮಾಸ್ಕ್ ಹಾಕದೇ ಕೆಲಸಕ್ಕೆ ಹಾಜರಾಗಿದ್ದಾರೆ. ಕಂಡಕ್ಟರ್, ಡ್ರೈವರ್ ಕಡ್ಡಾಯವಾಗಿ ಮಾಸ್ಕ್ ಧರಿಸಲು ಈಗಾಗಲೇ ಬಿಎಂಟಿಸಿ ಆದೇಶ ಹೊರಡಿಸಿದೆ. ನಿತ್ಯ BMTC ಬಸ್​ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಪ್ರಯಾಣಿಕರು ಮಾಸ್ಕ್ ಹಾಕಿದ್ರು BMTC ಸಿಬ್ಬಂದಿ ಹಾಕ್ತಿಲ್ಲ.

ರಾಮನಗರದಲ್ಲೂ ಕೊರೊನಾ ರೂಲ್ಸ್​ಗೆ ಡೋಂಟ್ ಕೇರ್

ರಾಜ್ಯದಲ್ಲಿ ಕೊರೊನಾ ರೂಪಾಂತರಿ ಆತಂಕ ಹಿನ್ನೆಲೆ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಆದ್ರೆ ಸರ್ಕಾರದ ಆದೇಶಕ್ಕೆ ರಾಮನಗರ ಜನರು ಡೋಂಟ್ ಕೇರ್ ಅಂತಿದ್ದಾರೆ. ರಾಮನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ನಿರ್ಲಕ್ಷ್ಯಕ್ಕೆ ಆತಂಕ ಉಂಟಾಗಿದೆ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ನಿಯಮ ಪಾಲನೆ ಮಾಡುತ್ತಿದ್ದಾರೆ. ಅನೇಕರು ಮಾಸ್ಕ್ ಧರಿಸದೆ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

ಚಿತ್ರದುರ್ಗ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ

ಕೊವಿಡ್ ತಡೆಗೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಆದ್ರೆ ಕೋಟೆನಾಡು ಚಿತ್ರದುರ್ಗದಲ್ಲಿ ಮಾಸ್ಕ್ ಧರಿಸದೆ ನಿರ್ಲಕ್ಷ ವಹಿಸಲಾಗುತ್ತಿದೆ. ಚಿತ್ರದುರ್ಗ ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು ತರಕಾರಿ ವ್ಯಾಪಾರಿಗಳು, ಗ್ರಾಹಕ ಮಾಸ್ಕ್ ಧರಿಸದೆ ನಿರ್ಲಕ್ಷವಹಿಸಿದ್ದಾರೆ. ಜಾಗೃತಿ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಬಾಗಲಕೋಟೆ ಮಾರುಕಟ್ಟೆಯಲ್ಲಿ ಮಾಸ್ಕ್ ಮಾಯ

ಬಾಗಲಕೋಟೆ ವಲ್ಲಭಬಾಯಿ ವೃತ್ತದ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಹಾಗೂ ವ್ಯಾಪಾರಸ್ಥರು ಮಾಸ್ಕ್ ಧರಿಸದೆ ವ್ಯಾಪಾರಕ್ಕಿಳಿದ್ದಿದ್ದಾರೆ. ಮಾಸ್ಕ್ ಧರಿಸದೇ ಜನರು ಮಾರುಕಟ್ಟೆಗೆ ಬರುತ್ತಿದ್ದಾರೆ. ಒಬ್ಬನೇ ಒಬ್ಬ ಮಾಸ್ಕ್ ಧರಿಸಿದ ವ್ಯಕ್ತಿ ಕಾಣುತ್ತಿಲ್ಲ. ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಧರಿಸದೆ ಜನ ಖರೀದಿಯಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆಯೇ ಬಾಲಿವುಡ್ ಮಂದಿಗೆ ಸಲ್ಮಾನ್​ ಖಾನ್ ಅದ್ದೂರಿ ಪಾರ್ಟಿ; ವ್ಯಕ್ತವಾಯ್ತು ಟೀಕೆ

ಕಲಬುರಗಿಯಲ್ಲೂ ಕೊರೊನಾ ನಿಯಮ ಉಲ್ಲಂಘನೆ

ಕಲಬುರಗಿ ಜಿಲ್ಲೆಯ ಜನರಿಂದಲೂ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆ. ಮಾಸ್ಕ್ ಧರಿಸಬೇಕು ಅನ್ನೋ ನಿಯಮ ಪಾಲನೆ ಮಾಡದೆ ಜನರು ಬೆಕಾಬಿಟ್ಟಿ ಓಡಾಡುತ್ತಿದ್ದಾರೆ. ಕಲಬುರಗಿ ನಗರದ ಕಣ್ಣಿ ಮಾರ್ಕೇಟ್​ನಲ್ಲಿ ಮಾಸ್ಕ್ ಧರಿಸದೇ ವ್ಯಾಪಾರಸ್ಥರು ಮತ್ತು ಗ್ರಾಹಕರು ನಿರ್ಲಕ್ಷ್ಯವಹಿಸಿದ್ದಾರೆ. ಇಷ್ಟೆಲ್ಲಾ ಆಗತ್ತಿದ್ದರೂ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸೋ ಕೆಲಸವನ್ನು ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡುತ್ತಿಲ್ಲ.

ಮಾಸ್ಕ್ ಧರಿಸದೆ ಕಡಲತೀರಗಳಲ್ಲಿ ಮೋಜು ಮಸ್ತಿ

ಕಾರವಾರದಲ್ಲಿ ಸರ್ಕಾರದ ಕೋವಿಡ್ ರೂಲ್ಸ್‌ಗೆ ಬೆಲೆನೇ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಜನ ಓಡಾಡುತ್ತಿದ್ದಾರೆ. ಕಾರವಾರ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಕೋವಿಡ್ ರೂಲ್ಸ್ ಮಾಯವಾಗಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ರೂಲ್ಸ್ ಪಾಲನೆ ಮಾಡಲಾಗುತ್ತಿಲ್ಲ. ಹೊಸ ವರ್ಷ ಸಂಭ್ರಮಾಚರಣೆಗೆ ಬೇರೆ ಬೇರೆ ದೇಶಗಳಿಂದ, ರಾಜ್ಯಗಳಿಂದ ಬಂದಿರುವ ಪ್ರವಾಸಿಗರು ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೋಜು ಮಸ್ತಿಯಲ್ಲಿ ಮುಳುಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:35 am, Tue, 27 December 22