AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿಗಟ್ಟಲೆ ಜನರಿಗೆ ಕೊರೊನಾವೈರಸ್​​ ಸೋಂಕು; ಕೋವಿಡ್​​ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ ಚೀನಾ ಜನ

ವೈರಸ್ ಈಗ ದೇಶದಾದ್ಯಂತ ಹೆಚ್ಚಾಗಿ ಅನಿಯಂತ್ರಿತವಾಗಿ ಹರಡುತ್ತಿದ್ದು ಚೀನಾದ ಅಂಕಿಅಂಶಗಳ ಮೇಲೆ ಆರೋಗ್ಯ ತಜ್ಞರು ಮತ್ತು ನಿವಾಸಿಗಳಲ್ಲಿ ಅನುಮಾನಗಳು ಹೆಚ್ಚುತ್ತಿವೆ.

ಕೋಟಿಗಟ್ಟಲೆ ಜನರಿಗೆ ಕೊರೊನಾವೈರಸ್​​ ಸೋಂಕು; ಕೋವಿಡ್​​ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ ಚೀನಾ ಜನ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Dec 26, 2022 | 4:57 PM

Share

ಬೀಜಿಂಗ್ / ಶಾಂಘೈ: ಮುಂಚೂಣಿಯಲ್ಲಿರುವ ವೈದ್ಯಕೀಯ ಕಾರ್ಯಕರ್ತರು ಲಕ್ಷಾಂತರ ಹೊಸ ಸೋಂಕುಗಳನ್ನು ನಿಭಾಯಿಸಲು ಪರದಾಡುತ್ತಿದ್ದರೂ ಸಹ ಚೀನಾದ (China) ಎರಡು ದೊಡ್ಡ ನಗರಗಳು ಕೋವಿಡ್​​ನೊಂದಿಗೆ (Covid 19) ಬದುಕುವುದನ್ನು ಕಲಿತಿವೆ. ಸೋಮವಾರ ಸುರಂಗಮಾರ್ಗ ರೈಲುಗಳಲ್ಲಿ ಮಾಸ್ಕ್ ಧರಿಸಿದ ಬೀಜಿಂಗ್ ಮತ್ತು ಶಾಂಘೈ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.ಜೀರೋ ಕೋವಿಡ್ ನೀತಿ, ಲಾಕ್ ಡೌನ್ ಮತ್ತು ತ್ವರಿತ ಪರೀಕ್ಷೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ಕಂಡು ಬಂದ ನಂತರ ಮೂರು ವರ್ಷಗಳ ಕಠಿಣ ಆಂಟಿ-ಕೊರೊನಾವೈರಸ್ ನಿರ್ಬಂಧಗಳನ್ನು ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅವರು ತೆಗೆದು ಹಾಕಿದ್ದಾರೆ. ವೈರಸ್ ಈಗ ದೇಶದಾದ್ಯಂತ ಹೆಚ್ಚಾಗಿ ಅನಿಯಂತ್ರಿತವಾಗಿ ಹರಡುತ್ತಿದ್ದು ಚೀನಾದ ಅಂಕಿಅಂಶಗಳ ಮೇಲೆ ಆರೋಗ್ಯ ತಜ್ಞರು ಮತ್ತು ನಿವಾಸಿಗಳಲ್ಲಿ ಅನುಮಾನಗಳು ಹೆಚ್ಚುತ್ತಿವೆ. ಭಾನುವಾರದವರೆಗೆ ಆರು ದಿನಗಳವರೆಗೆ ಯಾವುದೇ ಹೊಸ ಕೋವಿಡ್ ಸಾವುಗಳು ವರದಿಯಾಗಿಲ್ಲ. ಎಂದಿಗಿಂತ ಐದಾರು ಪಟ್ಟು ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದು ಇವರಲ್ಲಿ ಹೆಚ್ಚಿನವರು ವಯಸ್ಸಾದವರು. ಆದರೆ ಚೀನಾದಲ್ಲಿ ನೀತಿ ಬದಲಾದ ನಂತರ ಕೆಲವೇ ವಾರಗಳಲ್ಲಿ ಬೀಜಿಂಗ್ ಮತ್ತು ಶಾಂಘೈನಲ್ಲಿ ಜನರು ಮನೆಯೊಳಗೆ ಉಳಿದುಕೊಂಡ ಕೆಲವು ವಾರಗಳ ನಂತರ, ರೋಗವನ್ನು ನಿಭಾಯಿಸಲು ಅಥವಾ ಅದನ್ನು ತಪ್ಪಿಸಲು ಪ್ರಯತ್ನಿಸಿದಾಗ, ಅಲ್ಲಿ ಬದುಕಿನ ಸಂಕೇತ ಕಾಣಿಸಿಕೊಂಡಿತು. ರೋಗವನ್ನು ನಿಭಾಯಿಸಲು ಸಾಧ್ಯವಾಗುವವರು ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ.

ಬೀಜಿಂಗ್ ಮತ್ತು ಶಾಂಘೈನಲ್ಲಿ ಸುರಂಗಮಾರ್ಗ ರೈಲುಗಳು ತುಂಬಿದ್ದವು, ಆದರೆ ಎರಡು ನಗರಗಳಲ್ಲಿನ ಕೆಲವು ಪ್ರಮುಖ ರಸ್ತೆಗಳಲ್ಲಿ ಸೋಮವಾರ ಟ್ರಾಫಿಕ್ ಜಾಮ್ ಆಗಿದ್ದು ನಿವಾಸಿಗಳು ಕೆಲಸ ಮಾಡಲು ಪ್ರಯಾಣಿಸುತ್ತಿದ್ದು ಕಾಣಿಸಿದೆ. ನಾನು ಸಾಂಕ್ರಾಮಿಕ ರೋಗದೊಂದಿಗೆ ಬದುಕಲು ಸಿದ್ಧನಿದ್ದೇನೆ, ಲಾಕ್‌ಡೌನ್‌ಗಳು ದೀರ್ಘಾವಧಿಯ ಪರಿಹಾರವಲ್ಲ ಎಂದು 25 ವರ್ಷದ ಶಾಂಘೈ ನಿವಾಸಿ ಲಿನ್ ಜಿಕ್ಸಿನ್ ಹೇಳಿದ್ದಾರೆ.

ಈ ವರ್ಷ, ದೇಶಾದ್ಯಂತ ಸೋಂಕುಗಳು ನಿಯಂತ್ರಣದಿಂದ ಹೊರಬರುವುದನ್ನು ತಡೆಯುವ ಪ್ರಯತ್ನದಲ್ಲಿ, ಚೀನಾದ ವಾಣಿಜ್ಯ ಕೇಂದ್ರದಲ್ಲಿರುವ 25 ಮಿಲಿಯನ್ ಜನರು ಜೂನ್ 1 ರವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ ಅಡಿಯಲ್ಲಿ ಎರಡು ತಿಂಗಳ ಕಾಲ ಐಸೋಲೇಷನ್​​ನಲ್ಲಿದ್ದರು. ಶಾಂಘೈನ ರಸ್ತೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಕೋ ಅಂತಿದ್ದವು. ಆದರೆ ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಇಲ್ಲಿ ಕಿಕ್ಕಿರಿದ ಜನ ಸಂದಣಿ ಕಂಡು ಬಂತು.

ಈ ವಾರಾಂತ್ಯದಲ್ಲಿ ದಕ್ಷಿಣದ ನಗರವಾದ ಗುವಾಂಗ್‌ಝೌದಲ್ಲಿನ ರಮಣೀಯ ಸ್ಥಳಗಳಿಗೆ ಪ್ರವಾಸಿಗಳ ಸಂಖ್ಯೆಯು ಕಳೆದ ವಾರಾಂತ್ಯಕ್ಕಿಂತ 132% ರಷ್ಟು ಹೆಚ್ಚಾಗಿದೆ ಎಂದು ಸ್ಥಳೀಯ ಪತ್ರಿಕೆ ದಿ 21 ನೇ ಸೆಂಚುರಿ ಬಿಸಿನೆಸ್ ಹೆರಾಲ್ಡ್ ವರದಿ ಮಾಡಿದೆ. “ಈಗ ಎಲ್ಲರೂ ಸಾಮಾನ್ಯ ದಿನಚರಿಗೆ ಮರಳಿದ್ದಾರೆ” ಎಂದು 29 ವರ್ಷದ ಬೀಜಿಂಗ್ ನಿವಾಸಿ ಹಾನ್ ಎಂಬ ವ್ಯಕ್ತಿ ಹೇಳಿದ್ದಾರೆ.

ಇದನ್ನೂ ಓದಿ:ಪ್ಯಾಕೆಟ್​​, ಪೌಡರ್​​ ರೂಪದಲ್ಲಿ ಸಿಗುತ್ತಿದೆ ತಾಯಿಯ ಎದೆಹಾಲು; ದೇಶದಲ್ಲಿ ಭಾರೀ ಬೇಡಿಕೆ, ಮಾರಾಟ ಅನಿಯಂತ್ರಿತ?

ಕೋವಿಡ್ ಅನ್ನು ಸ್ಥಳೀಯವಾಗಿ ಪರಿಗಣಿಸುವತ್ತ ಸಾಗುತ್ತಿರುವ ಕೊನೆಯ ಪ್ರಮುಖ ದೇಶ ಚೀನಾ. ಅದರ ನಿಯಂತ್ರಣ ಕ್ರಮಗಳು 17 ಟ್ರಿಲಿಯನ್ ಡಾಲರ್  ಆರ್ಥಿಕತೆಯನ್ನು ಸುಮಾರು ಅರ್ಧ ಶತಮಾನದಲ್ಲಿ ಅದರ ಕಡಿಮೆ ಬೆಳವಣಿಗೆ ದರಕ್ಕೆ ನಿಧಾನಗೊಳಿಸಿದವು. ಕೋವಿಡ್ ಜಾಗತಿಕ ಪೂರೈಕೆ ಸರಪಳಿಗಳು ಮತ್ತು ವ್ಯಾಪಾರವನ್ನು ಅಡ್ಡಿಪಡಿಸಿದವು.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ಅಲ್ಪಾವಧಿಯಲ್ಲಿ ಮತ್ತಷ್ಟು ಬಳಲುತ್ತದೆ ಎಂದು ನಿರೀಕ್ಷಿಸಲಾಗಿದೆ, ಏಕೆಂದರೆ ಕೋವಿಡ್ ಅಲೆ ಉತ್ಪಾದನಾ ಪ್ರದೇಶಗಳ ಕಡೆಗೆ ಹರಡುತ್ತದೆ. ಮುಂದಿನ ವರ್ಷ ಪುಟಿದೇಳುವ ಮೊದಲು ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಟೆಸ್ಲಾ ಶನಿವಾರ ತನ್ನ ಶಾಂಘೈ ಸ್ಥಾವರದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿತು, ಡಿಸೆಂಬರ್ ಕೊನೆಯ ವಾರದಲ್ಲಿ ಸ್ಥಾವರದಲ್ಲಿ ಹೆಚ್ಚಿನ ಕೆಲಸವನ್ನು ನಿಲ್ಲಿಸಲಿದ್ದು ಕಂಪನಿಯು ಕಾರಣವನ್ನು ನೀಡಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ