ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸರಣಿ ಸ್ಫೋಟ: 5 ಸಾವು,10 ಮಂದಿಗೆ ಗಾಯ
ಭಾನುವಾರ ಕ್ವೆಟ್ಟಾದ ಸಬ್ಜಾಲ್ ರಸ್ತೆಯಲ್ಲಿ ಗ್ರೆನೇಡ್ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕ್ವೆಟ್ಟಾ ಪೊಲೀಸರ ಪ್ರಕಾರ, ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ರಸ್ತೆಯ ಮೇಲೆ ಎಸೆಯಲಾಯಿತು, ಅದರಲ್ಲಿ ಒಂದು ಸ್ಫೋಟಗೊಂಡಿತು ಮತ್ತು ಇನ್ನೊಂದನ್ನು ನಿಷ್ಕ್ರಿಯಗೊಳಿಸಲಾಯಿತು.
ಪಾಕಿಸ್ತಾನದ (Pakistan) ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ (Blast) ಐವರು ಸಾವಿಗೀಡಾಗಿದ್ದು 10 ಮಂದಿ ಗಾಯಗೊಂಡಿದ್ದಾರೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ಪತ್ರಿಕೆ ಭಾನುವಾರ ವರದಿ ಮಾಡಿದೆ. ” ಬಲೂಚಿಸ್ತಾನದಲ್ಲಿ ನಡೆದ ಒಂದಕ್ಕಿಂತ ಹೆಚ್ಚು ಸ್ಫೋಟಗಳಲ್ಲಿ ಐವರು ಸಾವನ್ನಪ್ಪಿದ್ದಾರೆ, 10 ಮಂದಿ ಗಾಯಗೊಂಡಿದ್ದಾರೆ” ಎಂದು ಪಾಕಿಸ್ತಾನದ ದಿ ನ್ಯೂಸ್ ಟ್ವೀಟ್‌ನಲ್ಲಿ ತಿಳಿಸಿದೆ. ಭಾನುವಾರ, ಕ್ವೆಟ್ಟಾದ ಸಬ್ಜಾಲ್ ರಸ್ತೆಯಲ್ಲಿ ಗ್ರೆನೇಡ್ ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕ್ವೆಟ್ಟಾ ಪೊಲೀಸರ ಪ್ರಕಾರ, ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ರಸ್ತೆಯ ಮೇಲೆ ಎಸೆಯಲಾಯಿತು, ಅದರಲ್ಲಿ ಒಂದು ಸ್ಫೋಟಗೊಂಡಿತು ಮತ್ತು ಇನ್ನೊಂದನ್ನು ನಿಷ್ಕ್ರಿಯಗೊಳಿಸಲಾಯಿತು. ಸ್ಫೋಟದ ಸ್ವರೂಪವನ್ನು ನಿರ್ಧರಿಸುತ್ತಿದ್ದಾರೆ ಎಂದು ಕ್ವೆಟ್ಟಾ ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುಡೂಸ್ ಬಿಜೆಂಜೊ ಅವರು ನಗರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಂತೆ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದರು. ಕಳೆದ ಕೆಲವು ವಾರಗಳಲ್ಲಿ ಪಾಕಿಸ್ತಾನ ವಿವಿಧ ಭಯೋತ್ಪಾದಕ ದಾಳಿಗಳನ್ನು ಎದುರಿಸಿದೆ.
ಖೈಬರ್ ಪಖ್ತುಂಖ್ವಾದ ಬನ್ನು ನಗರದಲ್ಲಿ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಇತ್ತೀಚೆಗೆ ಭಯೋತ್ಪಾದನಾ ನಿಗ್ರಹ ಇಲಾಖೆಯ (CTD) ನಿಯಂತ್ರಣವನ್ನು ವಶಪಡಿಸಿಕೊಂಡಿದೆ. ನೈಋತ್ಯ ಗಡಿಯಲ್ಲಿನ ಪರಿಸ್ಥಿತಿಯು ಬಲೂಚಿಸ್ತಾನದ ಚಮನ್ ನಗರದಲ್ಲಿ ಆಫ್ಘನ್ ಗಡಿಯಲ್ಲಿ ಹಲವಾರು ಘರ್ಷಣೆ ನಡೆದಿದೆ ಎಂದು ಪಾಕಿಸ್ತಾನಿ ಪತ್ರಿಕೆ ಹೇಳಿದೆ.
ಇದನ್ನೂ ಓದಿ: Pushpa Kamal Dahal Prachanda: ಮೂರನೇ ಬಾರಿ ನೇಪಾಳದ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಮಕ
ಟಿಟಿಪಿ ಕಳೆದ ವರ್ಷ ಆಗಸ್ಟ್‌ನಲ್ಲಿ ನೆರೆಯ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಅಫ್ಘಾನ್ ತಾಲಿಬಾನ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ನವೆಂಬರ್‌ನಲ್ಲಿ ಪಾಕಿಸ್ತಾನ ಸರ್ಕಾರದೊಂದಿಗೆ ಅಫ್ಘಾನ್ ತಾಲಿಬಾನ್ ಮಧ್ಯಸ್ಥಿಕೆಯ ಕದನ ವಿರಾಮದ ಅಂತ್ಯವನ್ನು ಘೋಷಿಸಿದಾಗಿನಿಂದ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯು ದಾಳಿಗಳನ್ನು ಹೆಚ್ಚಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 pm, Sun, 25 December 22