AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಿಂದ ಭಾರತಕ್ಕೆ ಬಂದ ವ್ಯಕ್ತಿಗೆ ಕೊರೊನಾ: ಬೆಂಗಳೂರಿಗೂ ಕಾಲಿಟ್ಟಿದ್ದ ವ್ಯಕ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಬಿಎಂಪಿ ಕಮಿಷನರ್

ಚೀನಾದಿಂದ ಬೆಂಗಳೂರು ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್​​ ಬಂದಿದೆ ಎಂಬ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.

ಚೀನಾದಿಂದ ಭಾರತಕ್ಕೆ ಬಂದ ವ್ಯಕ್ತಿಗೆ ಕೊರೊನಾ: ಬೆಂಗಳೂರಿಗೂ ಕಾಲಿಟ್ಟಿದ್ದ ವ್ಯಕ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬಿಬಿಎಂಪಿ ಕಮಿಷನರ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Dec 26, 2022 | 3:00 PM

Share

ಬೆಂಗಳೂರು: ದೇಶದಲ್ಲಿ ಕೊರೊನಾ (coronavirus) ರೂಪಾಂತರಿ ಬಿಎಫ್​7 ಪತ್ತೆ ಹಿನ್ನೆಲೆ ಬೆಂಗಳೂರಿಗೆ ವಿದೇಶಗಳಿಂದ ಬರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಆದರೂ ಕೂಡ ಚೀನಾ(China)ದಿಂದ ಬಂದ ವ್ಯಕ್ತಿಗೆ ಕೊರೊನಾ ಪಾಸಿಟಿವ್​​ ಬಂದಿದೆ ಎನ್ನಲಾಗುತ್ತಿದ್ದು, ಇದು ರಾಜ್ಯದ ಜನತೆಯಲ್ಲಿ ಆತಂಕಕ್ಕೆ ಎಡೆಮಾಡಿದೆ. ಆದರೆ ಈ ಕುರಿತಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ( Tushar Girinath) ಅವರು ಸ್ಪಷ್ಟನೆ ನೀಡಿದ್ದಾರೆ. ಇಂದು (ಡಿ. 26) ಮಾಧ್ಯಮದವರೊಂದಿಗೆ ಮಾತನಾಡಿ, ಆತ ಚೀನಾದಿಂದ ಬೆಂಗಳೂರಿನ ಒಳಗೆ ಬಂದಿಲ್ಲ. ಆತ ಏರ್​​ಪೋರ್ಟ್​​ಗೆ ಬಂದು ಅಲ್ಲಿಂದ ಆಗ್ರಾಕ್ಕೆ ಹೋಗಿದ್ದಾನೆ. ಏರ್​​ಪೋರ್ಟ್​​ನಿಂದಲೂ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ. ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ಜತೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿಗೆ ಪ್ರತ್ಯೇಕ ರೂಲ್ಸಾ ಅಥವಾ ಯಥಾಸ್ಥಿತಿನಾ? 

ರಾಜ್ಯ ಸರ್ಕಾರ ಕೋವಿಡ್ ಸಭೆ ಇಂದು (ಡಿ. 26) ನಡೆದಿದ್ದು, ಸಭೆ ಬಳಿಕ ಬಿಬಿಎಂಪಿ ಚಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದು, ನಾವು ಸಭೆಯಲ್ಲಿ ಪಾಲಿಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದ್ದೇವೆ. 1 ಲಕ್ಷ ಬೂಸ್ಟರ್ ಡೋಸ್ ನೀಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ನಗರದ 30 ಬೆಡ್​ಗಳಿರುವ 418 ಖಾಸಗಿ ಆಸ್ಪತ್ರೆ ಪಟ್ಟಿ ಮಾಡಿದ್ದೇವೆ. ಈ ಬಗ್ಗೆ ಈಗಾಗಲೇ ಫನಾ‌ ಸಂಘಟನೆ ಜೊತೆ ಮಾತನಾಡಿದ್ದೇವೆ. ನಾಳೆಯಿಂದ ಆಕ್ಸಿಜನ್ ಪ್ರಿಕಾಷನ್ ಬಗ್ಗೆ ಮಾಕ್ ಡ್ರಿಲ್ ಮಾಡಿ ಆಕ್ಸಿಜನ್ ರೆಡಿ ಇಟ್ಟುಕೊಳ್ಳುತ್ತೇವೆ. TAC ಕೊಟ್ಟ ಸಲಹೆ ಗಂಭೀರವಾಗಿ ತೆಗೆದುಕೊಂಡು ಆ ಪ್ರಕಾರ ಕೆಲಸ ಆರಂಭಿಸುತ್ತೇವೆ.

ನ್ಯೂ ಇಯರ್ ಸೆಲೆಬ್ರೇಷನ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ. ಆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟ ಮಾಡುತ್ತೆ. ಮಾಸ್ಕ್ ಹಾಕ್ಕೋಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಬೂಸ್ಟರ್ ಡೋಸ್ ಪಡೆಯಲು ಜನರು ಮುಂದೆ ಬರಬೇಕು. ಇನ್ನೂ ಬೆಂಗಳೂರಲ್ಲಿ 60% ಮಂದಿ ಬೂಸ್ಟರ್ ಡೋಸ್ ಪಡೆಯೋದು ಬಾಕಿ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: Corona Meet: ಕರ್ನಾಟಕದಲ್ಲಿ ಕೊರೊನಾ ನಿರ್ವಹಣೆಗೆ ಇಂದು ಮಾರ್ಗಸೂಚಿ ಬಿಡುಗಡೆ ಸಾಧ್ಯತೆ, ರಾಜ್ಯ ಸರ್ಕಾರದಿಂದ ಮಹತ್ವದ ಸಭೆ

ಟೆಸ್ಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ  

ಪ್ರತಿನಿತ್ಯ ನಗರದಲ್ಲಿ ಟೆಸ್ಟಿಂಗ್ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಟಿಎಸಿ ಸರ್ಕಾರಕ್ಕೆ ವರದಿ ನೀಡಿದೆ. ಟಾರ್ಗೆಟ್ ಎಷ್ಟು ಕೊಡುತ್ತಾರೆ ಅಂತ ನೋಡುತ್ತೇವೆ. ಪ್ರತಿನಿತ್ಯ‌ ನಗರದಲ್ಲಿ ಟೆಸ್ಟಿಂಗ್ 500 ಒಳಗೆ ಆಗುತ್ತಿದೆ. ಪ್ರೈವೇಟ್ ಲ್ಯಾಬ್‌ಗಳಲ್ಲಿ ರಿಪೋರ್ಟ್ ರೆಡಿ ಆಗುತ್ತಿದೆ ಎಂದು ಹೇಳಿದರು.

ಬೆಂಗಳೂರಿಗೆ ಭೇಟಿ ನೀಡಿದ ಪ್ರಯಾಣಿಕರ ಮಾಹಿತಿ

ಇನ್ನು ಡಿಸೆಂಬರ್ 24ರ ತನಕ ರಾಜಧಾನಿ ಬೆಂಗಳೂರು ಭೇಟಿ ಕೊಟ್ಟದ್ದು, ಒಟ್ಟು 2867 ಪ್ರಯಾಣಿಕರು. ವಿವಿಧ ದೇಶಗಳಿಂದ ಆಗಮಿಸಿರುವ 2867 ಪ್ರಯಾಣಿಕರು. ಇವರ ಪೈಕಿ ಒಟ್ಟು 12 ಪ್ರಯಾಣಿಕರಿಗೆ ಕೊವಿಡ್ ಪಾಸಿಟಿವ್ ಬಂದಿದೆ. 12 ಸೋಂಕಿತರ ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್​ಗೆ ರವಾನೆ ಮಾಡಲಾಗಿದೆ.

ಸಿಡ್ನಿ-1, ಹಾಂಕಾಂಗ್ -1, ಫ್ರ್ಯಾಂಕ್ ಫ್ರಡ್ – 1, ಲಂಡನ್ -1, ದುಬೈ -3, ಸಿಂಗಾಪುರ -2, ಥೈಲ್ಯಾಂಡ್ -1, ಮಾಲ್ಡೀವ್ಸ್ – 1, ಅಬುದಬಿ-1 ಈ ದೇಶಗಳಿಗೆ ಹೋಗಿ ಬಂದವರಲ್ಲಿ ಕೊರೊನಾ ಪತ್ತೆ ಆಗಿದೆ.

ಇದನ್ನೂ ಓದಿ: Karnataka Covid Guidelines: ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ವಿಶೇಷ ಸಭೆ; ಹೊಸ ವರ್ಷಾಚರಣೆಗೆ 8 ನಿಯಮಗಳು ಶಿಫಾರಸು

ಹೈರಿಸ್ಕ್​​ ದೇಶದಿಂದ ಬಂದಿದ್ದ 12 ಜನರಿಗೆ ಕೊರೊನಾ ಪಾಸಿಟಿವ್​

ಚೀನಾದಿಂದ ಆಗಮಿಸಿರುವ ವ್ಯಕ್ತಿ ಸೇರಿದಂತೆ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಳೆದ ಮೂರು ದಿನಗಳಲ್ಲಿ 12 ಜನರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದೆ. ಕೋವಿಡ್ ಸೋಂಕು ಲಕ್ಷಣ ಹಿನ್ನಲೆ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ  12 ಪ್ರಯಾಣಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯ 6 ಸೋಂಕಿತರ ಪೈಕಿ ಐವರು ಹೋಮ್ ಕ್ವಾರಂಟೈನ್​ನಲ್ಲಿದ್ದು, ಉಳಿದ ಆರು ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ಸೋಂಕಿತರ ಜಿನೊಮಿಕ್​ ಸೀಕ್ವೆನ್ಸ್​​ ವರದಿಗೆ ಆರೋಗ್ಯ ಇಲಾಖೆ ಕಾಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ